ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gudibande News: ತೆರಿಗೆ ಪಾವತಿಸದಿದ್ದರೆ ಸೌಲಭ್ಯ ಕಡಿತ; ಲೇಔಟ್ ಮಾಲೀಕರಿಗೆ ಪಿಡಿಒ ಎಚ್ಚರಿಕೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವು ಲೇಔಟ್‌ಗಳ ಮಾಲೀಕರು ಕಳೆದ ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ಪಂಚಾಯಿತಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಯಲ್ಲಿ ಕಂದಾಯ ವಸೂಲಾತಿಗೆ ಮುಂದಾಗಿರುವ ಪಂಚಾಯಿತಿ ಆಡಳಿತವು, ತೆರಿಗೆ ಪಾವತಿದಾರರಿಗೆ 15 ದಿನಗಳ ಕಾಲಮಿತಿ ನಿಗದಿಪಡಿಸಿದೆ.

ತೆರಿಗೆ ಪಾವತಿಸದಿದ್ದರೆ ಸೌಲಭ್ಯ ಕಡಿತ; ಲೇಔಟ್ ಮಾಲೀಕರಿಗೆ ಪಿಡಿಒ ಎಚ್ಚರಿಕೆ

ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಲೇಔಟ್‌ಗಳಲ್ಲಿ ನಿವೇಶನ ಹೊಂದಿರುವ ಮಾಲೀಕರು ಬಾಕಿ ಇರುವ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸುವಂತೆ ಪಿಡಿಒ ಶ್ರೀನಿವಾಸ ಮೂರ್ತಿ ತಿಳಿಸಿದರು. -

Ashok Nayak
Ashok Nayak Jan 4, 2026 12:39 PM

ಗುಡಿಬಂಡೆ: ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಲೇಔಟ್‌ಗಳಲ್ಲಿ ನಿವೇಶನ ಹೊಂದಿರುವ ಮಾಲೀಕರು ಬಾಕಿ ಇರುವ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಬೇಕು, ತಪ್ಪಿದಲ್ಲಿ ಮೂಲಭೂತ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವು ಲೇಔಟ್‌ಗಳ ಮಾಲೀಕರು ಕಳೆದ ಹಲವು ವರ್ಷ ಗಳಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ಪಂಚಾಯಿತಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಂದಾಯ ವಸೂಲಾತಿಗೆ ಮುಂದಾಗಿರುವ ಪಂಚಾಯಿತಿ ಆಡಳಿತವು, ತೆರಿಗೆ ಪಾವತಿದಾರರಿಗೆ 15 ದಿನಗಳ ಕಾಲಮಿತಿ ನಿಗದಿಪಡಿಸಿದೆ.

ಇದನ್ನೂ ಓದಿ: Gudibande News: ಸರಕಾರಗಳಿಂದ ರೈತರ ಬದುಕನ್ನು ಹಸನು ಮಾಡುವ ಕೆಲಸ ನಡೆಯಬೇಕಿದೆ : ಮಂಜುನಾಥ್

ಸೌಲಭ್ಯಗಳಿಗೆ ಕತ್ತರಿ: ನಿಗದಿತ ಅವಧಿಯೊಳಗೆ ಕಂದಾಯ ಪಾವತಿಸದ ನಿವೇಶನದಾರರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುಖ್ಯವಾಗಿ ಮನೆ ನಿರ್ಮಾಣಕ್ಕೆ ಅನುಮತಿ, ಕುಡಿಯುವ ನೀರಿನ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕಕ್ಕಾಗಿ ನೀಡಲಾಗುವ ನಿರಾಕ್ಷೇಪಣಾ ಪತ್ರಗಳನ್ನು ತಡೆಹಿಡಿಯಲಾಗುವುದು. ಅಲ್ಲದೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ದಾಖಲೆಗಳನ್ನು ನೀಡಲು ಪಂಚಾಯಿತಿ ನಿರಾಕರಿಸ ಲಿದೆ ಎಂದು ಎಚ್ಚರಿಸಲಾಗಿದೆ.

ಡಿಜಿಟಲ್ ಪಾವತಿಗೆ ಅವಕಾಶ: ತೆರಿಗೆ ಪಾವತಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸಾರ್ವ ಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ನಿವೇಶನ ದಾರರು ಮೊಬೈಲ್ ಮೂಲಕ ಫೋನ್-ಪೇ ಅಥವಾ ಇತರ ಆನ್‌ಲೈನ್ ಮಾದರಿಗಳಲ್ಲಿ ತೆರಿಗೆ ಪಾವತಿಸಬಹು ದಾಗಿದೆ. ಇದರಿಂದ ಸಾರ್ವಜನಿಕರ ಸಮಯ ಮತ್ತು ಶ್ರಮ ಉಳಿತಾಯವಾಗ ಲಿದೆ ಎಂದು ಪಿಡಿಒ ಮಾಹಿತಿ ನೀಡಿದರು.

ಗ್ರಾಮದ ಸಮಗ್ರ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಒದಗಣೆಗಾಗಿ ಸಾರ್ವಜನಿಕರು ಮತ್ತು ಲೇಔಟ್ ಮಾಲೀಕರು ತೆರಿಗೆ ಪಾವತಿಸುವ ಮೂಲಕ ಸಹಕರಿಸಬೇಕು ಎಂದು ತಿರುಮಣಿ ಗ್ರಾಮ ಪಂಚಾಯಿತಿ ಈ ಮೂಲಕ ಮನವಿ ಮಾಡಿದೆ.