Protest: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜಕಾಂತ್ ನೇತೃತ್ವದಲ್ಲಿ ದಸಂಸ ಬೃಹತ್ ಪ್ರತಿಭಟನೆ

ಜಿಲ್ಲೆಯ ೭ ತಾಲೂಕುಗಳಲ್ಲಿ ಏಕಕಾಲಕ್ಕೆ ದಸಂಸ ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಹಮಿಕೊಳ್ಳಲಾಗಿದೆ.ಪ್ರತಿಭಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿ ಕಾರಿ, ತಹಶೀಲ್ದಾರ್ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆ  ಲಿಖಿತವಾಗಿ ಪತ್ರ ನೀಡುವವರೆಗೂ ಧರಣಿ ಮುಂದು ವರೆಸಲಾಗುವುದು ಎಂದು ಸ್ಪಷ್ಟಪಡಿಸಿದರು

20cbpm1df ಒಕ
Profile Ashok Nayak January 20, 2025

Source : Chikkaballapur Reporter

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ದಲಿತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸ್ವಾತಂತ್ರ್ಯ ಬಂದು 75 ವರ್ಷಕಳೆದರೂ ಹಾಗೆ ಇದ್ದು ಈಡೇರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲ ವಾಗಿದೆ. ದಲಿತರ ಭೂಮಿ ಕನಸು ಕನಸಾಗಿಯೇ ಉಳಿದಿದೆ. ನಿವೇಶನ, ವಸತಿ,ಬಗರ್‌ಹುಕುಂ ಸಾಗುವಳಿ ಸಮಸ್ಯೆಗಳನ್ನು ಈಡೇರಿಸುತ್ತೇವೆ ಎಂದು ಜಿಲ್ಲಾಡಳಿತ ಲಿಖಿತವಾಗಿ ನೀಡುವವರೆಗೆ ಅನಿರ್ಧಿಷ್ಟಾವಧಿ ಧರಣಿ ಕೈಬಿಡುವುದಿಲ್ಲ ಎಂದು ದಸಂಸ ರಾಜ್ಯ ಸಂಚಾಲಕ ರಾಜಾಕಾಂತ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

20cbpm2dr ಂ

ನಗರದ ಜೈಭೀಮ್ ವಿದ್ಯಾರ್ಥಿನಿಲಯದಿಂದ ಮೆರವಣಿಗೆಯಲ್ಲಿ ಬಂದ ದಸಂಸ ಮುಖಂಡರು ಕಾರ್ಯಕರ್ತರು ದಲಿತ ವಿರೋಧಿ ಜಿಲ್ಲಾಡಳಿತದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ನ್ಯಾಯಕ್ಕಾಗಿ ನಮ್ಮ ನಡಿಗೆ, ತಾಲೂಕು ಕಚೇರಿ ಮುಂದೆ ಅನಿರ್ಧಿಷ್ಟ ಧರಣಿ ಎನ್ನುತ್ತಾ ಸಾಗಿ ಬಂದಿದ್ದು ಸಾರ್ವಜನಿಕರ ಗಮನ ಸೆಳೆಯಿತು.

ಜಿಲ್ಲೆಯ ೭ ತಾಲೂಕುಗಳಲ್ಲಿ ಏಕಕಾಲಕ್ಕೆ ದಸಂಸ ವತಿಯಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಧರಣಿ ಹಮಿಕೊಳ್ಳಲಾಗಿದೆ.ಪ್ರತಿಭಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ,ತಹಶೀಲ್ದಾರ್ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದಾರೆ.ಬೇಡಿಕೆ ಈಡೇರಿಸುವ ಬಗ್ಗೆ  ಲಿಖಿತವಾಗಿ ಪತ್ರ ನೀಡುವವರೆಗೂ ಧರಣಿ ಮುಂದು ವರೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಹಕ್ಕೊತ್ತಾಯಗಳು
ಭೂಮಿ ಮತ್ತು ವಸತಿ ವಂಚಿತರಿಗೆ ತಕ್ಷಣವೇ ಭೂಮಿ ಮತ್ತು ವಸತಿ ಕಲ್ಪಿಸುವುದು. ಎಸ್.ಸಿ.ಪಿ./ ಟಿ.ಎಸ್.ಪಿ. ಯೋಜನೆಯ ಹಣ ದುರ್ಬಳಕೆ ಆಗುತ್ತಿರುವುದನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು.

ನಮೂನೆ ೫೦, ೫೩, ೫೭ ಅನ್ನು ಸಲ್ಲಿಸಿರುವ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಸರ್ಕಾರದ ನಿಯಮದಂತೆ ಸಾಗುವಳಿ ಚೀಟಿ ನೀಡುವುದು., ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವಲ್ಲಿ ವಿಫಲರಾಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದು., ಗೌರಿಬಿದನೂರು ತಾಲ್ಲೂಕಿನ ಜೋಡಿ ಗ್ರಾಮಗಳ ಗೇಣಿದಾರರ ಭೂ ಸಮಸ್ಯೆಯನ್ನು ಕೂಡಲೇ ಇತ್ಯರ್ಥಗೊಳಿಸುವುದು.

೬.ಜಿಲ್ಲಾ ಕೇಂದ್ರದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನ ಮತ್ತು ಮಹರ್ಷಿ ವಾಲ್ಮೀಕಿ ಭವನಗಳನ್ನು ನಿರ್ಮಿಸುವುದು.ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಹಿಂದು ಳಿದ ವರ್ಗಗಳ ಇಲಾಖೆ, ಮಹರ್ಷಿ ವಾಲ್ಮೀಕಿ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಖಾಲಿ ಇರುವ ವಾರ್ಡನ್‌ಗಳನ್ನು ಕೂಡಲೇ ಭರ್ತಿ ಮಾಡುವುದು.

ಜಿಲ್ಲೆಯಲ್ಲಿ ಹಾಲಿ ಕಂದಾಯ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಡೀಮ್ಸ್ ಫಾರೆಸ್ಟ್ನ್ನು ರದ್ದುಪಡಿಸಿ ರೈತರಿಗೆ ಅನುಕೂಲ ಮಾಡುವುದು. ನಲ್ಲಕದಿರೇನಹಳ್ಳಿ, ಕುಪ್ಪಹಳ್ಳಿ, ಮೈಲಪ್ಪನಹಳ್ಳಿ, ಶ್ರೀರಾಮಪುರ, ಮುತ್ತಕದಹಳ್ಳಿ, ಅಜ್ಜವಾರ, ದೊಡ್ಡಕಿರುಗಂಬಿ, ಕಣಿತಹಳ್ಳಿ, ತಿಪ್ಪೇನಹಳ್ಳಿ, ಬಾದಗಾನಹಳ್ಳಿ, ಕೊತ್ತನೂರು, ಮಂಚನಬಲೆ ಗ್ರಾಮಗಳಲ್ಲಿ ಹಾಗೂ ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರ, ನಿಮಾಕುಲಕುಂಟೆ, ಗಂಗನಮಿದ್ದೆ, ಕಡಶಿಗೇನಹಳ್ಳಿ, ಗುವ್ವಲಕಾನಹಳ್ಳಿ (ಸೇಟ್‌ದಿನ್ನೆ) ಜಾತವಾರ ಗ್ರಾಮಗಳ ನಿವೇಶನ ರಹಿತ ಬಡವರಿಗೆ ಕೂಡಲೇ ನಿವೇಶನಗಳನ್ನು ನೀಡುವುದು. ಮಂಡಿಕಲ್ಲು, ದೊಡ್ಡಕಿರುಗಂಬಿ, ಅಂಕಣಗೊಂದಿ, ಮೈಲಪ್ಪನಹಳ್ಳಿ, ತಿಮ್ಮನಹಳ್ಳಿ, ತೌಡನಹಳ್ಳಿ, ಬಾಪೂಜಿನಗರ, ನಿಮ್ಮಾಕುಲಕುಂಟೆ, ಕಡಗೇನಹಳ್ಳಿ, ಕಣಿತಹಳ್ಳಿ ಕೇಶವಾರ ಗ್ರಾಮಗಳ ಅಂಬೇಡ್ಕರ್ ಭವನ, ಜಗಜೀವನರಾಮ್ ಭವನ, ವಾಲ್ಮೀಕಿ ಭವನಗಳನ್ನು ನಿರ್ಮಿಸಿ ಕೊಡುವುದು. ಎಲ್ಲಾ ಇಲಾಖೆಯ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಆಯಾ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸುವುದು. ಬೊಮ್ಮೇನಹಳ್ಳಿ, ಕೊಂಡೇನಹಳ್ಳಿ ಸ್ಮಶಾನಗಳನ್ನು ಒತ್ತುವರಿ ತೆರವು ಗೊಳಿಸುವುದು ಹಾಗೂ ಅಜ್ಜವಾರ, ಮಂಡಿಕಲ್ಲು, ಕಣಿತಹಳ್ಳಿ, ತೌಡನಹಳ್ಳಿ, ಮಂಚನಬಲೆ, ಮೈಲಪ್ಪನಹಳ್ಳಿ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಜಮೀನು ಮಂಜೂರು ಮಾಡುವುದು. ಭೂ ಒಡೆತನ ಯೋಜನೆ ಅಡಿಯಲ್ಲಿ ಬಡವರಿಗೆ ಭೂಮಿ ಮಂಜೂರು ಮಾಡುವುದು. ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್‌ನಗರ, ಬಾಪೂಜಿನಗರ, ಗಂಗನಮಿದ್ದೆ, ನಿಮ್ಮಾಕುಲಕುಂಟೆ, ಪ್ರಶಾಂತನಗರ, ರೇಷ್ಮೆ ಗೂಡಿನ ಮಾರ್ಕೆಟ್, ವಾರ್ಡ್ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
*

ದಲಿತ ಸಂಘರ್ಷ ಸಮಿತಿ ಮುಖಂಡರು ಪದಾಧಿಕಾರಿಗಳು ದಲಿತರಿಗೆ ಮೂಲಭೂತ ಸೌಕರ್ಯ ಒದಗಿಸುವುದು,ದಲಿತರ ಮೇಲಿನ ದೌರ್ಜನ್ಯ ತಡೆಯುವುದು ಸೇರಿದಂತೆ ಭೂಮಿ, ವಸತಿ ಸೇರಿ ಘನತೆಯ ಬದುಕಿಗಾಗಿ ಅನಿರ್ಧಿಷ್ಟಾವಧಿ ಮುಷ್ಕರದ ಹಾದಿ ತುಳಿದಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಜಿಲ್ಲಾಡಳಿತದಿಂದ ಏನಾದರೂ ಏರುಪೇರು ಆಗಿದ್ದಲ್ಲಿ ಸರಿಪಡಿಸ ಲಾಗುವುದು. ಬಗರ್‌ಹುಕುಂ ಸಮಸ್ಯೆ, ಆಶ್ರಯ ಸಮಸ್ಯೆ,ಹಕ್ಕುಪತ್ರ ಸಮಸ್ಯೆ ಪರಿಹಾರ, ಸ್ಮಶಾನ ಭೂಮಿ ಒದಗಿಸುವುದು ಬಗ್ಗೆ ಮನವಿ ನೀಡಿದ್ದಾರೆ.ಇದನ್ನು ಪರಿಶೀಲಿಸಿ ಶೀಘ್ರವೇ ಕ್ರಮ ವಹಿಸಲಾಗುವುದು.
ಪಿ.ಎನ್.ರವೀಂದ್ರ. ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ.

ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ  ಸಂಚಾಲಕ ಸಿ.ಬಿ. ಗಂಗಪ್ಪ,ಜಿ.ಸಂಘಟನಾ ಕಾರ್ಯ ದರ್ಶಿ ಬಿ.ವಿ. ವೆಂಕಟರಮಣ,ಜಿಲ್ಲಾ ಸಂಘಟನಾ ಸಂಚಾಲಕ ಎನ್.ಎ. ವೆಂಕಟೇಶ್, ಜಿಲ್ಲಾ ಖಜಾಂಚಿ ಜಿ.ವಿ. ಗಂಗಪ್ಪ, ತಾಲೂಕು ಸಂಚಾಲಕ ಪರಮೇಶ್,ತಾಲೂಕು ಸಂಘಟನಾ ಸಂಚಾಲಕ ಟೈಲರ್ ಮುನಿರಾಜು,ಡಾ.ನರಸಿಂಹಯ್ಯ,ತ್ಯಾಗರಾಜು,ತಾಲೂಕು ಖಜಾಂಚಿ ಮುನಿನಾರಾಯಣಪ್ಪ, ಚಿನ್ನಪ್ಪ,ಕರಗಪ್ಪ,ಕಣಿತಳ್ಳಿ ಮುನಿಯಪ್ಪ, ರಾಮಕೃಷ್ಣಪ್ಪ, ಮೂರ್ತಿ, ವೆಂಕಟೇಶ್, ಲಕ್ಷö್ಮಯ್ಯ, ವೈ.ನಾರಾಯಣ್, ಜಿಲ್ಲಾ ಗಡಿನಾಡು ರೈತಸಂಘದ ಅಧ್ಯಕ್ಷ ಉಪ್ಪಾರ್ ವೆಂಕಟೇಶ್, ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ,ಜಿಲ್ಲಾ ಕಾರ್ಯದರ್ಶಿ ಟಿ.ಮುನಿರಾಜು ಇದ್ದರು.

ಇದನ್ನೂ ಓದಿ: Chikkabalapur Crime: ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ


ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ಮಾತನಾಡಿದರು.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ