ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಬ್ಲಿಕ್ ಟಿ.ವಿ.ವರದಿಗಾರ ಮುದ್ದುಕೃಷ್ಣಗೆ ಮಾತೃವಿಯೋಗ

ನಗರದ ಗಂಗನಮಿದ್ದೆ ರಸ್ತೆಯ ಬಡಾವಣೆಯಲ್ಲಿ ವಾಸವಿದ್ದ 54 ವರ್ಷದ ರಾಧಮ್ಮ ಅವರಿಗೆ ಮುದ್ದು ಕೃಷ್ಣ ಅವರು ಒಬ್ಬನೇ ಮಗನಾಗಿದ್ದರು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಎರಡನೇ ಮಹಡಿಯಲ್ಲಿದ್ದ ನೀರಿನ ಡ್ರಂ ಸ್ವಚ್ಚಮಾಡಲು ಹೋಗಿದ್ದ ವೇಳೆ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಬೆನ್ನುಹುರಿಗೆ ಭಾರೀ ಪೆಟ್ಟಾಗಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ಪಬ್ಲಿಕ್ ಟಿ.ವಿ.ವರದಿಗಾರ ಮುದ್ದುಕೃಷ್ಣಗೆ ಮಾತೃವಿಯೋಗ

ರಾಧಮ್ಮ -

Profile
Ashok Nayak May 18, 2026 10:54 PM

ಚಿಕ್ಕಬಳ್ಳಾಪುರ: ಪಬ್ಲಿಕ್ ಟಿ.ವಿ.ಜಿಲ್ಲಾ ವರದಿಗಾರರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಮುದ್ದುಕೃಷ್ಣ ಅವರಿಗೆ ಮಾತೃವಿಯೋಗವಾಗಿದೆ.

ನಗರದ ಗಂಗನಮಿದ್ದೆ ರಸ್ತೆಯ ಬಡಾವಣೆಯಲ್ಲಿ ವಾಸವಿದ್ದ 54 ವರ್ಷದ ರಾಧಮ್ಮ ಅವರಿಗೆ ಮುದ್ದುಕೃಷ್ಣ ಅವರು ಒಬ್ಬನೇ ಮಗನಾಗಿದ್ದರು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಎರಡನೇ ಮಹಡಿಯಲ್ಲಿದ್ದ ನೀರಿನ ಡ್ರಂ ಸ್ವಚ್ಚಮಾಡಲು ಹೋಗಿದ್ದ ವೇಳೆ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ.

ಇದನ್ನೂ ಓದಿ: Chikkaballapur News: ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಪ್ರಯಾಣ, ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನ: ಡಿ.ಹೆಚ್. ಮುನಿಕೃಷ್ಣ ಕರೆ

ಬಿದ್ದ ರಭಸಕ್ಕೆ ಬೆನ್ನುಹುರಿಗೆ ಭಾರೀ ಪೆಟ್ಟಾಗಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರ ನೆರವಿನಿಂದ ಜೈನ್‌ಮಿಷನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗಿದೆ ಕೊನೆಯುಸಿರೆಳೆದಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಾವಿಸಿದ ಸಂಘದ ನಿಕಟಪೂರ್ವ ಅಧ್ಯಕ್ಷ ಜಯರಾಮ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಧ್ಯಕ್ಷ ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಟಿವಿ9 ವರದಿಗಾರ ಭೀಮಪ್ಪ ಪಾಟೀಲ್, ನಿಕಟಪೂರ್ವ ರಾಜ್ಯಸಮಿತಿ ಸದಸ್ಯ ಎನ್.ವಿ.ವೆಂಕಟೇಶ್, ನ್ಯೂಸ್‌ಫಸ್ಟ್ ವರದಿಗಾರ ಸುರೇಶ್, ಪವರ್ ನ್ಯೂಸ್ ವರದಿಗಾರ ಮಲ್ಲಪ್ಪ, ವಿಶ್ವವಾಣಿ ವರದಿಗಾರ ಮುನಿರಾಜು ಸೇರಿದಂತೆ ಇತರರು ಭೇಟಿ ನೀಡಿ ಮುದ್ದುಕೃಷ್ಣಗೆ ಸಾಂತ್ವನ ಹೇಳಿದ್ದಾರೆ.