CSK vs SRH: ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲು, ಸನ್‌ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟನ್ಸ್‌ಗೆ ಪ್ಲೇಆಫ್ಸ್ ಟಿಕೆಟ್!
CSK vs SRH Match Highlights: ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಅವರ ನಿರ್ಣಾಯಕ ಬ್ಯಾಟಿಂಗ್ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 5 ವಿಕೆಟ್‌ಗಳ ಗೆಲುವು ಸಾಧಿಸಿತು.ಆ ಮೂಲಕ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಿತು. ಈಗಾಗಲೇ 16 ಅಂಕಗಳನ್ನು ಕಲೆ ಹಾಕಿರುವ ಗುಜರಾತ್ ಟೈಟನ್ಸ್ ಕೂಡ ನಾಕ್‌ಔಟ್‌ಗೆ ಪ್ರವೇಶ ಮಾಡಿತು. ಸೋಲಿನೊಂದಿಗೆ ಸಿಎಸ್‌ಕೆ, ಕೊನೆಯ ಪಂದ್ಯದಲ್ಲಿ ಗೆದ್ದರೂ, ಈ ತಂಡದ ಪ್ಲೇಆಫ್ಸ್‌ಗೆ ಭವಿಷ್ಯ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ.
ಸಿಎಸ್‌ಕೆ ಎದುರು ಗೆದ್ದು ಪ್ಲೇಆಫ್ಸ್‌ಗೇರಿದ ಎಸ್‌ಆರ್‌ಎಚ್. -
ಚೆನ್ನೈ: ಇಶಾನ್ ಕಿಶನ್(Ishan Kishan) ಅವರ ನಿರ್ಣಾಯಕ ಬ್ಯಾಟಿಂಗ್ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 5 ವಿಕೆಟ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ 16 ಅಂಕಗಳೊಂದಿಗೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇಆಫ್ಸ್‌ಗೆ ಪ್ಯಾಟ್ ಕಮಿನ್ಸ್ ನಾಯಕತ್ವದ ಎಸ್‌ಆರ್‌ಎಚ್ ಹಾಗೂ ಈಗಾಗಲೇ 16 ಅಂಕಗಳನ್ನು ಕಲೆ ಹಾಕಿರುವ ಗುಜರಾತ್ ಟೈಟನ್ಸ್ ಅರ್ಹತೆ ಪಡೆದವು. ಇನ್ನು ಸೋಲು ಅನುಭವಿಸಿದ ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೂ ಈ ತಂಡದ ನಾಕ್‌ಔಟ್ ಭವಿಷ್ಯ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ.
ಸೋಮವಾರ ಇಲ್ಲಿನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ ನೀಡಿದ್ದ 181 ರನ್‌ಗಳ ಗುರಿಯನ್ನು ಎಸ್‌ಆರ್‌ಎಚ್ ತಂಡ, ಬಹುಬೇಗ ಟ್ರಾವಿಸ್ ಹೆಡ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ, ಅಭಿಷೇಕ್ ಶರ್ಮಾ ಆರಂಭದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ 26 ರನ್ ಗಳಿಸಿದ ಬಳಿಕ ಔಟ್ ಆದರು. 9 ಓವರ್‌ಗಳ ಅಂತ್ಯಕ್ಕೆ ಹೈದರಾಬಾದ್ ತಂಡ ಕೇವಲ 64 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು.
ಎಂಎಸ್ ಧೋನಿ ಇನ್ನೂ ಐಪಿಎಲ್ ಪಂದ್ಯ ಆಡದೇ ಇರಲು ಕಾರಣ ತಿಳಿಸಿದ ಋತುರಾಜ್ ಗಾಯಕ್ವಾಡ್!
ಇಶಾನ್-ಕ್ಲಾಸೆನ್ ನಿರ್ಣಾಯಕ ಜೊತೆಯಾಟ
ಈ ವೇಳೆ ಮೂರನೇ ವಿಕೆಟ್‌ಗೆ ಹೆನ್ರಿಕ್ ಕ್ಲಾಸೆನ್ ಹಾಗೂ ಇಶಾನ್ ಕಿಶನ್ ಆಕ್ರಮಣಕಾರಿ ಆಟಕ್ಕೆ ಕೈ ಹಾಕಿ 41 ಎಸೆತಗಳಲ್ಲಿ ನಿರ್ಣಾಯಕ 75 ರನ್‌ಗಳ ಜೊತೆಯಾಟವನ್ನು ಆಡಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಕ್ಲಾಸೆನ್, ಆಕ್ರಮಣಕಾರಿ ಆಟಕ್ಕೆ ಕೈ ಹಾಕಿ ಅಪಾಯವನ್ನು ತೆಗೆದುಕೊಂಡರು. 11ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಅವರು ಆಡಿದ 26 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 47 ರನ್ ಸಿಡಿಸಿ ಎಸ್‌ಆರ್‌ಎಚ್ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆದರೆ, 15ನೇ ಓವರ್‌ನಲ್ಲಿ ನೂರ್ ಅಹ್ಮದ್ ಎಸೆತದಲ್ಲಿ ಸಂಜು ಸ್ಯಾಮ್ಸನ್ ಬುದ್ದವಂತಿಕೆಯ ಸ್ಟಂಪ್ ಔಟ್‌ಗೆ ಕ್ಲಾಸೆನ್ ಬಲಿಯಾದರು.
The Orange Army marches into the Playoffs 🧡
— IndianPremierLeague (@IPL) May 18, 2026
8️⃣th Top 4 appearance for #SRH 👊🔥#TATAIPL | #KhelBindaas | #CSKvSRH pic.twitter.com/YaQmhqLYz8
ಕಿಶನ್ ಅರ್ಧಶತಕ
ನಂತರ ಕ್ರೀಸ್‌ಗೆ ಬಂದ ನಿತೀಶ್ ರೆಡ್ಡಿ 7 ಎಸೆತಗಳಲ್ಲಿ 11 ರನ್ ಗಳಿಸಿದ ಬಳಿಕ ಮುಕುಲ್ ಚೌಧರಿಗೆ ಔಟ್ ಆದರು. ಒಂದು ತುದಿಯಲ್ಲಿ ಕೊನೆಯವರೆಗೂ ಜವಾಬ್ದಾರಿಯುತ ಬ್ಯಾಟ್ ಮಾಡಿದ ಇಶಾನ್ ಕಿಶನ್, 47 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 70 ರನ್ ಗಳಿಸಿದ, ತಂಡವನ್ನು ಗೆಲ್ಲಿಸುವ ಸಮಯದಲ್ಲಿ ವಿಕೆಟ್ ಒಪ್ಪಿಸಿದರು. ಆದರೆ, ಕೊನೆಯಲ್ಲಿ ಸಲಿಲ್ ಅರೋರಾ ಹಾಗೂ ಸ್ಮರಣ್ ರವಿಚಂದ್ರನ್ ಗೆಲ್ಲಿಸಿದರು. ಅಂತಿಮವಾಗಿ ಎಸ್‌ಆರ್‌ಎಚ್ ತಂಡ 19 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು.
Gold standard for consistency 🫡
— IndianPremierLeague (@IPL) May 18, 2026
4️⃣th playoff appearance in 5️⃣ seasons for Gujarat Titans 💙👏
Will they lift their 2️⃣nd #TATAIPL title? 🏆#TATAIPL | #KhelBindaas pic.twitter.com/vZnLAxEl4I
180 ರನ್‌ಗಳನ್ನು ಕಲೆ ಹಾಕಿದ ಸಿಎಸ್‌ಕೆ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಪ್ಯಾಟ್ ಕಮಿನ್ಸ್ ಅವರ ಮಾರಕ ಬೌಲಿಂಗ್ ದಾಳಿಯ ಹೊರತಾಗಿಯೂ ಡೆವಾಲ್ಡ್ ಬ್ರೆವಿಸ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉಪಯುಕ್ತ ಕೊಡುಗೆಯ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 181 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು.
ಸಿಎಸ್‌ಕೆ ಪರ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಹಾಗೂ ಋತುರಾಜ್ ಗಾಯಕ್ವಾಡ್ ಮೊದಲನೇ ವಿಕೆಟ್‌ಗೆ 31 ರನ್ ಕಲೆ ಹಾಕಿ ಭರ್ಜರಿ ಆರಂಭ ನೀಡುವ ಮುನ್ಸೂಚನೆಯನ್ನು ನೀಡಿದರು. ಆದರೆ, 13 ಎಸೆತಗಳಲ್ಲಿ 27 ರನ್ ಸಿಡಿಸಿ ಭರ್ಜರಿ ಆರಂಭ ಪಡೆದಿದ್ದ ಸಂಜು ಸ್ಯಾಮ್ಸನ್, ಪ್ಯಾಟ್ ಕಮಿನ್ಸ್ ಅವರ ಸ್ಲೋ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ಕೊಟ್ಟರು. ಉರ್ವಿಲ್ ಪಟೇಲ್ ಎರಡು ಭರ್ಜರಿ ಜೊತೆಗೆ 13 ರನ್ ಗಳಿಸಿದ ಬಳಿಕ ಕಮಿನ್ಸ್‌ಗೆ ಶರಣಾದರು.
Absorb the pressure. Rebuild the innings. Counter-attack 👊
— IndianPremierLeague (@IPL) May 18, 2026
A phenomenal fifty under pressure by Ishan Kishan 👏
Updates ▶️ https://t.co/4SxAzYKEvY#TATAIPL | #KhelBindaas | #CSKvSRH pic.twitter.com/R4itqjqW0Z
ಡೆವಾಲ್ಡ್ ಬ್ರೆವಿಸ್ 44 ರನ್
ಬಳಿಕ ಋತುರಾಜ್ ಗಾಯಕ್ವಾಡ್ ಹಾಗೂ ಕಾರ್ತಿಕ್ ಶರ್ಮಾ ಮೂರನೇ ವಿಕೆಟ್‌ಗೆ 42 ರನ್‌ಗಳ ಜೊತೆಯಾಟವನ್ನು ಆಡಿದರು. ಕಾರ್ತಿಕ್ ಶರ್ಮಾ ಕೇವಲ 19 ಎಸೆತಗಳಲ್ಲಿ 32 ರನ್ ಸಿಡಿಸಿ ಭರ್ಜರಿ ಆರಂಭ ಪಡೆದ ಹೊರತಾಗಿಯೂ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ನಿತೀಶ್ ರೆಡ್ಡಿಗೆ ಕ್ಯಾಚ್ ಕೊಟ್ಟರು. 15 ರನ್ ಗಳಿಸಿ ಸ್ಲೋ ಬ್ಯಾಟ್ ಮಾಡುತ್ತಿದ್ದ ಗಾಯಕ್ವಾಡ್ ಕೂಡ ಔಟ್ ಆದರು. ಡೆವಾಲ್ಡ್ ಬ್ರೆವಿಸ್ ಹಾಗೂ ಶಿವಂ ದುಬೇ 59 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. 27 ಎಸೆತಗಳಲ್ಲಿ 44 ರನ್ ಗಳಿಸಿ ಡೆತ್ ಓವರ್‌ಗಳಲ್ಲಿ ಸ್ಪೋಟಿಸಲು ಸಜ್ಜಾಗುತ್ತಿದ್ದ ಡೆವಾಲ್ಡ್ ಬ್ರೆವಿಸ್ ಅವರನ್ನು ಇಶಾನ್ ಮಾಲಿಂಗ್ ಬೌಲ್ಡ್ ಮಾಡಿದರು. 26 ರನ್ ಗಳಿಸಿದ ಬಳಿಕ ಶಿವಂ ದುಬೇ ಕೂಡ ಔಟ್ ಆದರು.
ಎಸ್‌ಆರ್‌ಎಚ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಪ್ಯಾಟ್ ಕಮಿನ್ಸ್ 3 ವಿಕೆಟ್ ಕಿತ್ತರೆ, ಸಾಕಿಬ್ ಹುಸೇನ್ ಎರಡು ವಿಕೆಟ್ ತೆಗೆದರು.