ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಸದ್ಗುರು ಹಾಗೂ ಸಂಸದ ತೇಜಸ್ವಿ ಸೂರ್ಯ
ಕೇವಲ ಬದುಕುವ ಹಂತವನ್ನು ಮೀರಿ ಯುವಜನತೆಯ ಸಮಗ್ರ ಬೆಳವಣಿಗೆಯತ್ತ ಗಮನ ಹರಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. “ಇಲ್ಲಿ ಕುಳಿತಿರುವ ಯುವಜನತೆಗೆ ಹಿಂದೆಂದಿ ಗಿಂತಲೂ ಹೆಚ್ಚಿನ ಸಾಧ್ಯತೆಗಳು ಲಭ್ಯವಿದೆ. ಇಂತಹ ನಂಬಲಸಾಧ್ಯ ಸಾಧ್ಯತೆಗಳನ್ನು ನಾನು ಕೂಡ ಹಿಂದೆಂದೂ ಊಹಿಸಿರ ಲಿಲ್ಲ. ಈ ಸಾಧ್ಯತೆಗಳನ್ನು ಭಯ ಅಥವಾ ಅಸುರಕ್ಷಿತ ಭಾವನೆ ಯಿಂದ ನೋಡಬಾರದು
ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಸದ್ಗುರುಗಳು ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಚಿತ್ರ -
ಚಿಕ್ಕಬಳ್ಳಾಪುರ: ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಭಾರತದ 77ನೇ ಗಣರಾಜ್ಯೋತ್ಸವ(77th Republic Day)ವನ್ನು ಸದ್ಗುರುಗಳ ಸಮ್ಮುಖದಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಯಿತು. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ( Tejaswi Surya, MP for Bangalore South) ಮತ್ತು ಕರ್ನಾಟಕ ಸಂಗೀತ ಗಾಯಕಿ ಹಾಗೂ ಭರತನಾಟ್ಯ ನೃತ್ಯಗಾರ್ತಿ, ಪತ್ನಿ ಶ್ರೀಮತಿ ಶಿವಶ್ರೀ ಸ್ಕಂದಪ್ರಸಾದ್ ಮತ್ತು ಭರತನಾಟ್ಯ ನೃತ್ಯಗಾರ್ತಿ ಲೀಲಾ ಸ್ಯಾಮ್ಸನ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸದ್ಗುರುಗಳು, ಕೇವಲ ಬದುಕುವ ಹಂತವನ್ನು ಮೀರಿ ಯುವಜನತೆಯ ಸಮಗ್ರ ಬೆಳವಣಿಗೆಯತ್ತ ಗಮನ ಹರಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು.
“ಇಲ್ಲಿ ಕುಳಿತಿರುವ ಯುವಜನತೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಸಾಧ್ಯತೆಗಳು ಲಭ್ಯವಿದೆ. ಇಂತಹ ನಂಬಲಸಾಧ್ಯ ಸಾಧ್ಯತೆಗಳನ್ನು ನಾನು ಕೂಡ ಹಿಂದೆಂದೂ ಊಹಿಸಿರ ಲಿಲ್ಲ. ಈ ಸಾಧ್ಯತೆಗಳನ್ನು ಭಯ ಅಥವಾ ಅಸುರಕ್ಷಿತ ಭಾವನೆಯಿಂದ ನೋಡಬಾರದು. ಬದಲಿಗೆ, ಮುಕ್ತ ಮನಸ್ಸು ಮತ್ತು ಧೈರ್ಯದೊಂದಿಗೆ ಇವುಗಳನ್ನು ಎದುರಿಸಬೇಕು,” ಎಂದು ಹೇಳಿದರು.
ಇದನ್ನೂ ಓದಿ: Republic Day Tableau: ಗಣರಾಜ್ಯೋತ್ಸವಕ್ಕೆ ಮೆರಗು ತಂದ ಸ್ತಬ್ಧಚಿತ್ರಗಳು; ಇಲ್ಲಿದೆ ನೋಡಿ ಫೋಟೊ ಗ್ಯಾಲರಿ
ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತೇಜಸ್ವಿ ಸೂರ್ಯ ಅವರು, ಭಾರತದ ನಾಗರಿಕತೆಯ ಪರಂಪರೆಯ ಬಗ್ಗೆ ಮಾತನಾಡಿದರು. ಅವರು, "ಭಾರತವು ಎಪ್ಪತ್ತೇಳು ವರ್ಷಗಳ ಹಳೆಯ ಗಣರಾಜ್ಯವಾಗಿರಬಹುದು, ಆದರೆ ನಾವು ಸಾವಿರಾರು ವರ್ಷಗಳ ಹಳೆಯ ನಾಗರಿಕತೆಯನ್ನು ಹೊಂದಿದ್ದೇವೆ. ಸುಲಲಿತವಾಗಿ ಮತ್ತು ಘನತೆ ಯಿಂದ ಹೇಗೆ ಬದುಕಬೇಕು ಮತ್ತು ಜೀವನ ಪ್ರಕ್ರಿಯೆಯನ್ನು ಹೇಗೆ ಸಾಗಿಸಬೇಕು ಎಂಬು ದರ ಕುರಿತು ಜಗತ್ತಿಗೆ ದಾರಿ ತೋರಿಸಿದ ಮತ್ತು ಮಾರ್ಗದರ್ಶನ ನೀಡಿದ ನಾಗರಿಕತೆ ನಮ್ಮದು. ಇದೇ ಕಾರಣಕ್ಕಾಗಿ, ಭಾರತವು ಜಗತ್ತಿಗೆ ‘ವಿಶ್ವಗುರು’ವಾಗಿತ್ತು ಮತ್ತು ಯಾವಾ ಗಲೂ ಆಗಿರುತ್ತದೆ," ಎಂದರು.
ಈ ಕಾರ್ಯಕ್ರಮಕ್ಕೂ ಮುನ್ನ ಸೂರ್ಯ ಅವರು ತಮ್ಮ ಪತ್ನಿಯೊಂದಿಗೆ ಮೂರು ದಿನಗಳ ಕಾಲ ಈಶ ಯೋಗ ಕೇಂದ್ರದಲ್ಲಿದ್ದು, ದೇಹವನ್ನು ಪುನಶ್ಚೇತನಗೊಳಿಸಲು ಮತ್ತು ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಉತ್ತುಂಗವನ್ನು ತಲುಪಲು ನೆರವಾಗುವ, ಯೋಗದಲ್ಲಿ ಬೇರೂರಿರುವ ‘ಅಂಗಮರ್ದನ’ ಎಂಬ ಅಭ್ಯಾಸವನ್ನು ಕಲಿತರು. ಈಶ ಯೋಗ ಕೇಂದ್ರದ ಅನುಭವದ ಬಗ್ಗೆ ಮಾತನಾಡುತ್ತಾ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
"ಸದ್ಗುರುಗಳೇ, ನೀವು ಸೃಷ್ಟಿಸಿರುವ ಈ ಆವರಣದ ಪ್ರತಿಯೊಂದು ಕಲ್ಲು ಮತ್ತು ಎಲೆಗ ಳಲ್ಲಿಯೂ ಸ್ಫೂರ್ತಿ ಅಡಗಿದೆ. ಕಳೆದ ಮೂರು ದಿನಗಳು ನಾನು ಕಳೆದ ಅತ್ಯಂತ ಸ್ಫೂರ್ತಿ ದಾಯಕ ದಿನಗಳಾಗಿವೆ. ಈ ದೇಶದ ಶ್ರೇಷ್ಠ ದಾರ್ಶನಿಕರು ನಮಗೆ ನೀಡಿರುವ ಈ ಶಾಶ್ವತ ಸ್ಫೂರ್ತಿಯ ಬುಗ್ಗೆಯಿಂದ ದೇಶದಾದ್ಯಂತ ಇನ್ನೂ ಹೆಚ್ಚಿನ ಯುವಜನರು ಸ್ಫೂರ್ತಿ ಪಡೆಯುವಂತಾಗಲಿ ಎಂದು ನಾನು ಆಶಿಸುತ್ತೇನೆ," ಎಂದರು.
ಬೆAಗಳೂರಿನ ಸದ್ಗುರು ಸನ್ನಿಧಿಯಲ್ಲಿಯೂ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆಯಿತು. ಗೇರಹಳ್ಳಿಯ ಪಂಚಾಯತ್ ಸದಸ್ಯ ಮಂಜುನಾಥ್ ಹಾಗೂ ಗೇರಹಳ್ಳಿಯ ಗ್ರಾಮದ ಮುಖ್ಯಸ್ಥರಾದ ವೆಂಕಪ್ಪನವರು ಧ್ವಜಾರೋಹಣ ಮಾಡಿದರು.