ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಬೆನ್ನುಹುರಿ ಅಂಗವಿಕಲರಿಗೆ ವಿಶೇಷ ಕ್ರೀಡಾಕೂಟ – ಆತ್ಮವಿಶ್ವಾಸ ವೃದ್ಧಿಗೆ ಒತ್ತು

ನಗರದ ನೆಹರೂ ಕ್ರೀಡಾಂಗಣದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗಾಗಿ ನವಜೀವನ ಸೇವಾ ಸಂಘ, ಚಿಕ್ಕಬಳ್ಳಾಪುರ, ಮಾರ್ಗದರ್ಶಿ ವಿಕಲಚೇತನರ ಸ್ವಯಂಸೇವಾ ಸಂಸ್ಥೆ, ಬೆಂಗಳೂರು ಹಾಗೂ ಸ್ಟೇಟ್ ಸಂಸ್ಥೆಯ ಸ್ವಯಂಸೇವಕರ ಸಹಯೋಗದಲ್ಲಿ ವಿಶೇಷ ಕ್ರೀಡಾ ಚಟುವಟಿಕೆ ಆಯೋಜಿಸ ಲಾಯಿತು.

ಬೆನ್ನುಹುರಿ ಅಂಗವಿಕಲರಿಗೆ ವಿಶೇಷ ಕ್ರೀಡಾಕೂಟ

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ನಡೆದ ಬೆನ್ನುಹುರಿ ಅಂಗವಿಕಲರಿಗೆ ವಿಶೇಷ ಕ್ರೀಡಾಕೂಟದಲ್ಲಿ ಭಾಗವಹಿಸಿದ ಚೇತನರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಕ್ಷಣ -

Profile
Ashok Nayak Apr 11, 2026 9:29 PM

ಶಿಡ್ಲಘಟ್ಟ: ಬೆನ್ನುಹುರಿ ಅಂಗವಿಕಲ ಚೇತನರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕ್ರೀಡಾ ಚಟುವಟಿಕೆ ಗಳು ಅತ್ಯಂತ ಅಗತ್ಯವೆಂದು ನವಜೀವನ ಸೇವಾ ಸಂಘದ ಅಧ್ಯಕ್ಷ ಮುನಿರಾಜು ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗಾಗಿ ನವಜೀವನ ಸೇವಾ ಸಂಘ, ಚಿಕ್ಕಬಳ್ಳಾಪುರ, ಮಾರ್ಗದರ್ಶಿ ವಿಕಲಚೇತನರ ಸ್ವಯಂಸೇವಾ ಸಂಸ್ಥೆ, ಬೆಂಗಳೂರು ಹಾಗೂ ಸ್ಟೇಟ್ ಸಂಸ್ಥೆಯ ಸ್ವಯಂಸೇವಕರ ಸಹಯೋಗದಲ್ಲಿ ವಿಶೇಷ ಕ್ರೀಡಾ ಚಟುವಟಿಕೆ ಆಯೋಜಿಸಲಾಯಿತು.

ಇದನ್ನೂ ಓದಿ: Shidlaghatta News: ತಾಲ್ಲೂಕು ಕಚೇರಿಯಲ್ಲಿ ಜಗಜೀವನ ರಾಮ್ ಜಯಂತಿ ಆಚರಣೆ

ಕಾರ್ಯಕ್ರಮದ ಬಳಿಕ ಮಾತನಾಡಿದ ಮುನಿರಾಜು, ಇಂತಹ ಕ್ರೀಡಾಕೂಟಗಳು ಅಂಗವಿಕಲ ಚೇತನರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಸಮಾಜದಲ್ಲಿ ಅವರ ಸ್ಥಾನಮಾನ ಬಲಪಡಿಸಲು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.

cbpm3a

ಈ ಸಂದರ್ಭದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸುಮಾರು 30 ಮಂದಿ ಅಂಗವಿಕಲ ಚೇತನರು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ನವಜೀವನ ಸೇವಾ ಸಂಘದ ಕೆ.ಪಿ. ರವಿ, ರಾಮಚಂದ್ರ, ಮಂಜುನಾಥ್, ಮಾರ್ಗ ದರ್ಶಿ ಸಂಸ್ಥೆಯ ಶಾಂತಲಕ್ಷ್ಮಿ, ನೇತ್ರಾವತಿ, ವೆಂಕಟಾಚಲ, ಸೀತಾಲಕ್ಷ್ಮಿ, ಗೀತಾಮೃತ, ರಕ್ಷಿತ, ಸ್ಟೇಟ್ ಸಂಸ್ಥೆಯ ಸ್ವಯಂಸೇವಕರಾದ ಸುಹಾಸ್, ಪೆರುಮಯ್ಯ, ನರೇಶ್, ಅಂಕಿತ್, ಬ್ಯೂಲ, ಧರಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.