Suspend: ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಅಮಾನತ್ತು
ಅಕ್ರಮವಾಗಿ ಹಣ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಇವರ ವಿರುಧ್ದ ಕರ್ನಾಟಕ ನಾಗರೀಕ ಸೇವಾ ವರ್ಗಿಕರಣ ಮತ್ತು ಮೇಲ್ಮನವಿ ನಿಯಮಾವಳಿ 1957 ರ ನಿಯಮ 10(1) (ಡಿ) ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ನಿಯಮಗಳು 2011 ರ ಷೆಡ್ಯೂಲ್ 3 ರಂತೆ ಅಮಾನತ್ತು ಮಾಡಿ ಸರಕಾರ ಆದೇಶ ಹೊರಡಿಸಿದೆ
Source : Chikkaballapur Reporter
ಚೇಳೂರು: ಚೇಳೂರು ತಾಲ್ಲೂಕಿನ ಗಡಿಗವಾರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯ ಪ್ರಾಂಶುಪಾಲೆ ಎ.ಆರ್. ಖುಬ್ರಾ ಮುಬೀನ್ ಅವರನ್ನು ರಾಜ್ಯ ಸರಕಾರದ ಕಾರ್ಯ ನಿರ್ವಾಹಕ ನಿರ್ದೆಶಕರಾದ ಪಿ.ಎಸ್.ಕಾಂತರಾಜು ಅಮಾನತ್ತು ಮಾಡಿ ಆದೇಶ ಹೊರಡಿಸಿ ದ್ದಾರೆ.
ಸದರಿ ಪ್ರಾಂಶುಪಾಲರು ನಿಲಯ ಪಾಲಕರ ಸಹಿಯನ್ನು ತಾವೇ ಮಾಡಿ 1.56.406 ರೂ ಗಳನ್ನು ಚೆಕ್ ಮೂಲಕ ಅಕ್ರಮವಾಗಿ ಹಣ ಸೆಳೆದಿರುತ್ತಾರೆ. ಈ ವಸತಿ ಶಾಲೆಗೆ ವರ್ಗಾವಣೆ ಗೊಂಡ ನಂತರ ವಸತಿ ಶಾಲೆಯ ದಾಖಲೆಗಳನ್ನು ವರ್ಗಾವಣೆಯಾದ ನಂತರವೂ ಸಂಬಂ ಧಿಸಿದ ಪ್ರಾಂಶುಪಾಲರಿಗೆ ಹಸ್ತಾಂತರಿಸದೇ ಇರುವುದು ಹಾಗೂ ನಿಲಯಪಾಲಕರ ಸಹಿ ಯನ್ನು ತಾವೇ ಮಾಡಿ ಅಕ್ರಮವಾಗಿ ಹಣ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿ ರುವುದರಿಂದ ಇವರ ವಿರುಧ್ದ ಕರ್ನಾಟಕ ನಾಗರೀಕ ಸೇವಾ ವರ್ಗಿಕರಣ ಮತ್ತು ಮೇಲ್ಮನವಿ ನಿಯಮಾವಳಿ 1957 ರ ನಿಯಮ 10(1) (ಡಿ) ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ನಿಯಮಗಳು 2011 ರ ಷೆಡ್ಯೂಲ್ 3 ರಂತೆ ಅಮಾನತ್ತು ಮಾಡಿ ಸರಕಾರ ಆದೇಶ ಹೊರಡಿಸಿದೆ.
*
ಎಂಬಿಎ ವಿದ್ಯಾರ್ಥಿ ನೇಣಿಗೆ ಶರಣು
ವಿಟಿಯು ಚಿಕ್ಕಬಳ್ಳಾಪುರ ಕ್ಯಾಂಪಸ್ ವಿದ್ಯಾರ್ಥಿನಿಲಯದಲ್ಲಿ ಎರಡನೇ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯವರು ನೇಣಿಗೆ ಶರಣಾದ ಘಟನೆ ಶನಿವಾರ ನಡೆದಿದೆ.
ತಾಲೂಕಿನ ಮುದ್ದೇನಹಳ್ಳಿ ಹೊವಲಯದಲ್ಲಿರುವ ವಿಶ್ವೇಶ್ವರಯ್ಯ ಟೆಕ್ನಾಲಜಿ ಆಫ್ ಯೂನಿವರ್ಸಿಟಿಯಲ್ಲಿ ಶನಿವಾರ ಬೆಳಗ್ಗೆ ಈ ದುರ್ಘಟನೆ ನಡೆದಿದ್ದು ಶ್ರೀನಿವಾಸಪುರ ತಾಲೂಕಿನ ಕೊಂಡಮರಿ ಗ್ರಾಮದ ಬಾಬುನಾಯಕ್ ಎಂಬ ೨ನೇ ವರ್ಷದ ಎಂಬಿಎ ವಿದ್ಯಾರ್ಥಿಯೇ ಮೃತ ದುರ್ದೈವಿ ಆಗಿದ್ದಾನೆ.
ಬಾಬು ನಾಯಕ್ ಕಳೆದ ಒಂದೂವರೆ ವರ್ಷದಿಂದ ವಿಟಿಯುನಲ್ಲಿ ವ್ಯಾಸಂಗ ಮಾಡು ತ್ತಿದ್ದು, ಶನಿವಾರ ಬೆಳಗ್ಗೆ ತಿಂಡಿಯನ್ನು ಮುಗಿಸಿ ತನ್ನ ಕೊಠಡಿಗೆ ತೆರಳಿ ನೇಣಿಗೆ ಶರಣಾಗಿ ದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪ್ರಾಂಶುಪಾಲ ಜಿ.ಎಸ್.ವೆಂಕಟೇಶ್ ಮಾತನಾಡಿ ಶ್ರೀನಿವಾಸಪುರ ತಾಲೂಕಿನ ಕೊಂಡಮರಿ ಗ್ರಾಮದ ಬಾಬು ನಾಯಕ್ ವಾಸವಿದ್ದ ಕೊಠಡಿಯಲ್ಲಿ ೩ ಜನ ವಿದ್ಯಾರ್ಥಿ ಗಳಿದ್ದು, ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ನಮಗೆ ಮಾಹಿತಿ ನೀಡದೆ ಸ್ವಗ್ರಾಮಕ್ಕೆ ತೆರಳಿದ್ದು, ಶನಿವಾರ ಬೆಳಗ್ಗೆ ೧೦.೧೫ಕ್ಕೆ ಬಾಬು ನಾಯಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪಕ್ಕದ ಕೊಠಡಿಯಲ್ಲಿನ ವಿದ್ಯಾರ್ಥಿಗಳು ನೋಡಿ ಮಾಹಿತಿ ನೀಡಿದ್ದು, ಬೆಳಗ್ಗೆ ೯ ರಿಂದ ೯.೩೦ ಸಮಯದಲ್ಲಿ ತಿಂಡಿಯನ್ನು ಮುಗಿಸಿ ರೂಮಿಗೆ ಹೋದ ಯುವಕ ಈ ರೀತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ ಎಂದು ನುಡಿದರು.
ಘಟನಾ ಸ್ಥಳಕ್ಕೆ ನಂದಿ ಗಿರಿಧಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Crime News: 9 ತಿಂಗಳ ಗರ್ಭಿಣಿಯ ಬರ್ಬರ ಹತ್ಯೆ; ಬೆಳಗಾವಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ