Chikkaballapur News: ಗುಣಮಟ್ಟ ಕಾಪಾಡುವ ಮೂಲಕ ಅತ್ಯುತ್ತಮ ಸದನ ನಿರ್ಮಾಣವಾಗಬೇಕು
ನಗರದ ಹೃದಯ ಭಾಗದಲ್ಲಿ ಸುಮಾರು ವರ್ಷಗಳಿಂದ ಅಪೂರ್ಣಗೊಂಡಿದ್ದ ಕನ್ನಡ ಸದನದ ಕಟ್ಟಡವನ್ನು ಪೂರ್ಣಗೊಳಿಸುವಂತೆ ಶಾಸಕರಿಗೆ ಮನವಿ ನೀಡಿದ ಹಿನ್ನಲೆಯಲ್ಲಿ 17 ಲಕ್ಷ ಹಣ ಬಿಡುಗಡೆ ಮಾಡಿ ಕಟ್ಟಡದ ಕಾಮಗಾರಿ ಆರಂಭಿಸಿರುವುದಕ್ಕೆ ತಾಲ್ಲೂಕು ಕನ್ನಡ ಮನಸ್ಸುಗಳ ಪರವಾಗಿ ಧನ್ಯವಾದಗಳನ್ನು ತಿಳಿಸಿದರು

ನಗರದ ಎಚ್.ಎನ್ ಕಲಾಭವನದ ಮುಂಭಾಗದಲ್ಲಿ ಹದಿನೈದು ವರ್ಷಗಳಿಂದ ಅಪೂರ್ಣಗೊಂಡು ನೆನಗುದಿಗೆ ಬಿದಿದ್ದ ಕನ್ನಡ ಸದನ ಕಟ್ಟಡದ ಕಾಮಗಾರಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ಗುದ್ದಲ್ಲಿ ಪೂಜೆ ನೆರವೇರಿಸಿದರು.

ಚಿಕ್ಕಬಳ್ಳಾಪುರ : ನಗರದ ಎಚ್.ಎನ್ ಕಲಾಭವನದ ಮುಂಭಾಗದಲ್ಲಿ ಹದಿನೈದು ವರ್ಷ ಗಳಿಂದ ಅಪೂರ್ಣಗೊಂಡು ನೆನಗುದಿಗೆ ಬಿದಿದ್ದ ಕನ್ನಡ ಸದನ ಕಟ್ಟಡದ ಕಾಮಗಾರಿಗೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರು ಗುದ್ದಲ್ಲಿ ಪೂಜೆ ನೆರವೇರಿಸಿದರು. ಇದೇ ಸಂದರ್ಭ ದಲ್ಲಿ ಮಾತನಾಡಿ, ನಗರದ ಹೃದಯಭಾಗದಲ್ಲಿರುವ ಕನ್ನಡ ಸದನ ಕಟ್ಟಡದ ಕಾಮಗಾರಿ ಕಳೆದ ಹದಿನೈದು ವರ್ಷಗಳಿಂದ ಅಪೂರ್ಣಗೊಂಡಿರುವ ಈ ನೆಲ ಮಹಡಿಯ ಕಟ್ಟಡಕ್ಕೆ 17 ಲಕ್ಷ ಹಣ ಬಿಡುಗಡೆಯಾಗಿದ್ದು ಮೊದಲನೇ ಹಾಗೂ ಎರಡನೇ ಮಹಡಿಗೆ ಮತ್ತೇ 22 ಲಕ್ಷ ಹಣ ಬಿಡುಗಡೆ ಮಾಡಲಾಗುವುದು ಎಂದರು. ಕಟ್ಟಡದ ಒಳಗಡೆ ಅಧ್ಯಕ್ಷರ ಕೊಠಡಿ ಶೌಚಾಲಯ ಮುಂಭಾಗದಲ್ಲಿ ಧ್ವಜಕಟ್ಟೆ.ಹಾಗೂ ಸಭಾಭವನ ನಿರ್ಮಿಸಲಾಗುವುದು ಜೊತೆಗೆ ಕನ್ನಡ ಸಾಹಿತಿಗಳ ಭಾವಚಿತ್ರ ಗ್ಯಾಲರಿ ನಿರ್ಮಿಸಲಾಗುವುದು ಎಂದರು.
ಕಾಮಗಾರಿಯಲ್ಲಿ ಯಾವುದೇ ರಾಜಿಯಲ್ಲದೆ ಗುಣಮಟ್ಟವನ್ನು ಕಾಪಾಡುವ ಮೂಲಕ ಅತ್ಯುತ್ತಮವಾದ ಸದನ ನಿರ್ಮಾಣವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಇದನ್ನೂ ಓದಿ: Chikkaballapur News: ಮಾ.23ರಂದು ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘ ಉದ್ಘಾಟನಾ ಮಹೋತ್ಸವ ಕಾರ್ಯಕ್ರಮ
"ನಗರದ ಹೃದಯ ಭಾಗದಲ್ಲಿ ಸುಮಾರು ವರ್ಷಗಳಿಂದ ಅಪೂರ್ಣಗೊಂಡಿದ್ದ ಕನ್ನಡ ಸದನದ ಕಟ್ಟಡವನ್ನು ಪೂರ್ಣಗೊಳಿಸುವಂತೆ ಶಾಸಕರಿಗೆ ಮನವಿ ನೀಡಿದ ಹಿನ್ನಲೆಯಲ್ಲಿ 17 ಲಕ್ಷ ಹಣ ಬಿಡುಗಡೆ ಮಾಡಿ ಕಟ್ಟಡದ ಕಾಮಗಾರಿ ಆರಂಭಿಸಿರುವುದಕ್ಕೆ ತಾಲ್ಲೂಕು ಕನ್ನಡ ಮನಸ್ಸುಗಳ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಚ ಜನಾರ್ದನ ನಿಕಟ ಪೂರ್ವ ಅಧ್ಯಕ್ಷ ನಂಜುAಡಪ್ಪ.ಟಿ ಪರಿಷತ್ತಿನ ಸದಸ್ಯರಾದ ವೀರಣ್ಣ.ವೆಂಕಟೇಶ್, ಗಿರಿಧರ. ಶೈಲಜ, ಲಕ್ಷ್ಮಿ. ಬಾಲಪ್ಪ.ನಾರಾಯಣಪ್ಪ.ಪ್ರಕಾಶ್. ಆಲಂಪಲ್ಲಿ ವೇಣು ಗೋಪಾಲ್, ನರಸಿಂಹ ಮೂರ್ತಿ ಮತ್ತಿತರರು ಇದ್ದರು.