Chikkaballapur News: ಮಾ.23ರಂದು ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘ ಉದ್ಘಾಟನಾ ಮಹೋತ್ಸವ ಕಾರ್ಯಕ್ರಮ
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾ ನಂದನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀ ಜಿ, ಶಾಸ ಕರು ಹಾಗೂ ಮಾಜಿ ಸಚಿವ ಜೆ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.


ಚಿಂತಾಮಣಿ: ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘ ಉದ್ಘಾಟನಾ ಮಹೋತ್ಸವ ಕಾರ್ಯಕ್ರಮವನ್ನು ಇದೇ ತಿಂಗಳ ಮಾರ್ಚ್ 23 ರಂದು ಬೆಳಗ್ಗೆ 10.30ಕ್ಕೆ ಶ್ರೀನಿವಾಸಪುರ ರಸ್ತೆಯ ಬೂರಗಮಾಕಲಹಳ್ಳಿ ಶ್ರೀ ಸೀತಾರಾಮ ಕಲ್ಯಾಣ ಮಂಟಪದಲ್ಲಿ ವಿಜೃಂಭಣೆ ಯಿಂದ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಕೆಂಪೇಗೌಡ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಜಿ.ಎಸ್.ರಘುನಾಥ್ ರೆಡ್ಡಿ ಕೋರಿದರು. ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇ ಶಿಸಿ ಮಾತನಾಡಿದ ಅವರು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾ ನಂದನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀ ಜಿ, ಶಾಸ ಕರು ಹಾಗೂ ಮಾಜಿ ಸಚಿವ ಜೆ.ಟಿ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: Chikkaballapur News: ಚಿಕ್ಕಪೈಲಗುರ್ಕಿ ಕುರುಬರಹಳ್ಳಿ ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆ
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಗೋಪಾಲ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ ಕೆಂಚಪ್ಪಗೌಡ,ಪ್ರಧಾನ ಕಾರ್ಯದರ್ಶಿ ಟಿ ಕೋನಪ್ಪ ರೆಡ್ಡಿ, ಗೌರವಾ ಧ್ಯಕ್ಷರಾದ ಯಲವಹಳ್ಳಿ ರಮೇಶ್, ಕಿಮ್ಸ್ ಆಸ್ಪತ್ರೆಯ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕ ರಾದ ಡಾ.ಟಿ ರಮೇಶ್, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ರೇಣುಕಾ ಪ್ರಸಾದ್ ಕೆ.ವಿ,ಎಲ್ ಶ್ರೀನಿವಾಸ್, ಅಧ್ಯಕ್ಷರು ಭೂ ಸಮಿತಿ ರಾಜ್ಯ ವಕ್ಕಲಿಗರ ಸಂಘ ಉಮಾಪತಿ ಶ್ರೀನಿವಾಸ ಗೌಡ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಡಿಸಿಪಿ ದಕ್ಷಿಣ ವಿಭಾಗ ಡಿ ದೇವರಾಜ್ ಐಪಿಎಸ್, ಖ್ಯಾತ ವಕೀಲರು ಹಾಗೂ ಅಧ್ಯಕ್ಷರು ಜಿಲ್ಲಾ ಒಕ್ಕಲಿಗರ ಸಂಘ ಕೋಲಾರ ಕೆ.ವಿ.ಶಂಕರಪ್ಪ, ಸಮಾಜ ಸೇವಕ ರಾದ ಸೀಕಲ್ ರಾಮಚಂದ್ರಗೌಡ,ಮಾಜಿ ವಿಧಾನ ಪರಿಷತ್ತು ಸದಸ್ಯರಾದ ತೂಪಲ್ಲಿ ಚೌಡ ರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಪಿ ಎನ್ ಕೇಶವ ರೆಡ್ಡಿ,ವಾಣಿ ಕೃಷ್ಣಾರೆಡ್ಡಿ ಸೇರಿದಂತೆ ಎಂ ಪ್ರಕಾಶ್,ಸಿ ಮುನಿರಾಜು, ಮದನ್ ಕುಮಾರ್ ಭಾಗವಹಿಸುವರು ಎಂದರು.
ಈ ವೇಳೆ ರಾಜ್ಯ ಕಾರ್ಯಧ್ಯಕ್ಷರಾದ ಅಭಿಷೇಕ್ ಎ ಸಿ, ರಾಜ್ಯ ಪ್ರಧಾನ ಕಾರ್ಯದರ್ಶಿ,ಕೆ ಕೆ ಮಂಜುನಾಥ್,ರಾಜ್ಯ ಉಪಾಧ್ಯಕ್ಷರಾದ ಜೆಪಿ ಚಂದ್ರಶೇಖರ್ ರೆಡ್ಡಿ,ರವೀಂದ್ರ ಗೌಡ ಜಿ,ಮಧು ಎಸ್,ಸುರೇಂದ್ರ ರೆಡ್ಡಿ ಬಿ,ಎನ್ ದೇವರಾಜ್,ಸದಾಶಿವರೆಡ್ಡಿ ಸಿ,ಮನೋಹರ್ ಸಿ ಎಸ್, ಸೇರಿದಂತೆ ಮತ್ತಿತರರು ಇದ್ದರು.