ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕುಕ್ಕುಟೋದ್ಯಮ ರಕ್ಷಣೆಗೆ ಸರಕಾರ ಧಾವಿಸಿ ಕೆ.ಜಿಗೆ 20 ರೂಪಾಯಿ ಪ್ರೋತ್ಸಾಹಧನ ನೀಡಬೇಕು : ರಾಜ್ಯಾಧ್ಯಕ್ಷ ರ‍್ರಹಳ್ಳಿ ವೆಂಕಟರೆಡ್ಡಿ ಆಗ್ರಹ

ರೈತರ ಹೊಲದಲ್ಲಿ 10 ಸಾವಿರ ಮರಿಗಳನ್ನು ಸಾಕುವ ಒಂದು ಕೋಳಿ ಸಾಕಾಣಿಕೆ ಷೆಡ್ ಸ್ಥಾಪಿಸ ಬೇಕಾದರೆ 30 ಲಕ್ಷ ಖರ್ಚಾಗುತ್ತದೆ. ಇದನ್ನು ತೀರಿಸಲು ತಿಂಗಳ ಕಂತಿಗೆ 2.40 ಲಕ್ಷ ಬೇಕು. ಷೆಡ್ ನಿರ್ವಹಣೆ ವೆಚ್ಚ ಪ್ರತಿ ತಿಂಗಳು 1.40 ಲಕ್ಷ .ಹೀಗೆ ಒಂದು ಬ್ಯಾಚ್ ಕೋಳಿ ಸಾಕಾಣಿಕೆ ಮಾಡಲು ತಿಂಗಳೊಂದಕ್ಕೆ 3 ಲಕ್ಷ ಖರ್ಚಾಗುತ್ತಿದೆ.

ಕುಕ್ಕುಟೋದ್ಯಮ ರಕ್ಷಣೆಗೆ ಸರಕಾರ ಧಾವಿಸಬೇಕು

ಕುಕ್ಕುಟೋದ್ಯಮ ರಕ್ಷಣೆಗೆ ಸರಕಾರ ಧಾವಿಸಿ ಕೆ.ಜಿಗೆ 20 ರೂಪಾಯಿ ಪ್ರೋತ್ಸಾಹ ಧನ ನೀಡಬೇಕು  ಎಂದು ರಾಜ್ಯಾಧ್ಯಕ್ಷ ರ‍್ರಹಳ್ಳಿ ವೆಂಕಟರೆಡ್ಡಿ ಆಗ್ರಹಿಸಿದರು. -

Ashok Nayak
Ashok Nayak Jan 29, 2026 12:44 AM

ಚಿಕ್ಕಬಳ್ಳಾಪುರ: ನಮ್ಮ ರಾಜ್ಯದಲ್ಲಿ ಕೋಳಿ ಸಾಕಣಿಕೆ ಕ್ಷೇತ್ರವು ದುಸ್ಥಿತಿಯಲ್ಲಿದ್ದು ಇದನ್ನು ಮೇಲೆತ್ತಬೇಕಾದರೆ ಸರಕಾರ ಕೂಡಲೇ ಸಾಕಣಿಕೆ ವೆಚ್ಚ ಪ್ರತಿ ಕೆ.ಜಿಗೆ 6.20 ಪೈಸೆ ನೀಡು ತ್ತಿದ್ದು ಇದನ್ನು ಪರಿಷ್ಕರಿಸಿ ತಮಿಳುನಾಡಿ ಮಾದರಿಯಂತೆ 20 ರೂಪಾಯಿ ಕೊಡಲೇಬೇಕು ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತ ಸಂಘದ ರಾಜ್ಯಾಧ್ಯಕ್ಷ ರ‍್ರಹಳ್ಳಿ ವೆಂಕಟ ರೆಡ್ಡಿ ಸರಕಾರವನ್ನು ಒತ್ತಾಯಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತ ಸಂಘ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಆರ್.ಬಿ.ತಿಮ್ಮಾಪುರ ಸೇರಿ ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ

ರೈತರ ಹೊಲದಲ್ಲಿ 10 ಸಾವಿರ ಮರಿಗಳನ್ನು ಸಾಕುವ ಒಂದು ಕೋಳಿ ಸಾಕಾಣಿಕೆ ಷೆಡ್ ಸ್ಥಾಪಿಸಬೇಕಾದರೆ 30 ಲಕ್ಷ ಖರ್ಚಾಗುತ್ತದೆ. ಇದನ್ನು ತೀರಿಸಲು ತಿಂಗಳ ಕಂತಿಗೆ 2.40 ಲಕ್ಷ ಬೇಕು. ಷೆಡ್ ನಿರ್ವಹಣೆ ವೆಚ್ಚ ಪ್ರತಿ ತಿಂಗಳು 1.40 ಲಕ್ಷ .ಹೀಗೆ ಒಂದು ಬ್ಯಾಚ್ ಕೋಳಿ ಸಾಕಾಣಿಕೆ ಮಾಡಲು ತಿಂಗಳೊಂದಕ್ಕೆ 3 ಲಕ್ಷ ಖರ್ಚಾಗುತ್ತಿದೆ. ಸರಕಾರ ಪ್ರತಿ ಕೋಳಿಗೆ 6.20 ಪೈಸೆ ಕೊಡುತ್ತದೆ. 10 ಸಾವಿರ ಕೋಳಿಗಳ ಇಳುವರಿ ಸರಾಸರಿ 23 ಟನ್ ಆಗುತ್ತದೆ. ಇದನ್ನೆ ಲ್ಲಾ ಲೆಕ್ಕ ಹಾಕಿದರೆ ಒಂದು ಕೆ.ಜಿ ಕೋಳಿ ಸಾಕಾಣಿಗೆ ಮಾಡಲು 13.30 ಪೈಸೆ ಖರ್ಚಾಗುತ್ತಿದೆ. ಹೀಗಾಗಿ ಸರಕಾರ ತಮಿಳುನಾಡು ಮಾದರಿಯಲ್ಲಿ ಕೆ.ಜಿಗೆ 20 ರೂಪಾಯಿ ಪ್ರೋತ್ಸಾಹದನ ನೀಡಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಕೋಳಿ ಸಾಕಾಣಿಕೆ ಫಾರಂಗಳಿದ್ದು 1 ಲಕ್ಷ ಮಂದಿ ಈ ಉದ್ಯಮದ ಜತೆ ಬದುಕು ಕಟ್ಟಿಕೊಂಡಿದ್ದಾರೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಷೆಡ್‌ಗಳಿದ್ದು 500ಕ್ಕೂ ಹೆಚ್ಚು ಮಂದಿ ಕೋಳಿಸಾಕಣಿಕೆ ಜತೆಗೆ ಬದುಕು ಕಂಡುಕೊಂಡಿ ದ್ದಾರೆ. ಆದರೆ ಕೋಳಿ ಸಾಕಾಣಿಕೆ ಕ್ಷೇತ್ರವು ಕಂಪನಿಗಳ ಶೋಷಣೆಯಿಂದ ನಲುಗು ವಂತಾಗಿದೆ. ಇದನ್ನು ತಪ್ಪಿಸಿ ರೈತರು ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

2021ರಲ್ಲಿ ಕೋಳಿ ಸಾಕಾಣಿಕೆ ದರವನ್ನು ಪರಿಷ್ಕರಿಸಿದ್ದ ರಾಜ್ಯ ಸರಕಾರ 6 ವರ್ಷಗಳಾ ದರೂ ಇವರೆಗೆ ಪರಿಷ್ಕೃತ ದರವನ್ನು ಕೊಡುತ್ತಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಯಂತೆ ಶೇ.50ರ ಲಾಭಾಂಶ ಸೇರಿಸಿ ಕೋಳಿ ಸಾಕಾಣಿಕೆ ದರ ನಿಗದಿ ಮಾಡಬೇಕು. ಕಂಪನಿ ಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ, ದೌರ್ಜನ್ಯದ ವಿರುದ್ದ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಲು ಕರ್ನಾಟಕ ರಾಜ್ಯ ಭೂ ಕಂದಾಯ ಕಾಯ್ದೆ 1964ರ 95(1)ಅಗೆ ಸೂಕ್ತ ತಿದ್ದುಪಡಿ ಮಾಡಬೇಕು.ಆ ಮೂಲಕ ಸಹಸ್ರಾರು ಕೋಟಿ ರೂ.ಗಳ ಕುಕ್ಕುಟ ಉದ್ಯಮವನ್ನು ಮತ್ತಷ್ಟು ಅಭಿವೃದ್ದಿ ಪಡಿಸಲು ಹಾಗೂ ಸೂಕ್ತ ರೀತಿಯಲ್ಲಿ ನಿಯಂತ್ರಿಸಲು ಅನುಕೂಲ ಆಗುವಂತೆ ಈಗಾಗಲೇ ಸಿದ್ಧಪಡಿಸಿರುವ ಕರ್ನಾಟಕ ಕುಕ್ಕುಟ ಅಭಿವೃದ್ದಿ ಹಾಗೂ ನಿಯಂತ್ರಣ ಮಸೂದೆಯನ್ನು 2022-23ನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ರೈತ ಸಂಘವು ಒತ್ತಾಯಿಸುತ್ತದೆ ಎಂದರು.

ಬಾಗೇಪಲ್ಲಿ ತಾಲೂಕು ಕೋಳಿ ಸಾಕಾಣಿಕೆ ಸಂಘದ ಅಧ್ಯಕ್ಷ ಜಿ.ಎಂ.ರಾಮಕೃಷ್ಣಪ್ಪ ಮಾತ ನಾಡಿ, ರಾಜ್ಯ ಸರಕಾರ ಕೋಳಿ ಸಾಕಣಿಕೆದಾರರ ನೆರವಿಗೆ ಬರಲಿಲ್ಲ ಎಂದರೆ ತಮಿಳುನಾಡು ಮಾದರಿಯಲ್ಲಿ ಸಂಘಟಿತ ಹೋರಾಟ ರೂಪಿಸಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುವುದು. ರಾಜ್ಯದ ಕುಕ್ಕುಟೋದ್ಯಮ ಕೆಪಿಎಫ್‌ಬಿ ಎಂಬ ಖಾಸಗಿ ಯಾಚರ್ಸ್ ಕಪಿಮುಷ್ಟಿಯಲ್ಲಿದೆ. ಇದರಿಂದ ಸಾಕಾಣಿಕೆದಾರರನ್ನು ರಕ್ಷಿಸಬೇಕು.ಕುಕ್ಕುಟ ಮಂಡಳಿ ಮೂಲಕವೇ ಕೋಳಿ ಮರಿ ವಿತರಣೆ, ಆಹಾರ, ಮಾರುಕಟ್ಟೆ ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಘದ ಪ್ರತಿನಿಧಿಗಳಾದ ಹನುಮೇಗೌಡ, ರಾಮಚಂದ್ರ, ಚಂದ್ರಶೇಖರ್, ಜಿ.ಎಂ.ರಾಮಕೃಷ್ಣಪ್ಪ, ಗೌರಮ್ಮ ಮತ್ತಿತರರು ಇದ್ದರು.