ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijayadashami Celebration: ಅಶ್ವಾರೂಢರಾಗಿ ವಿಜಯದಶಮಿ ಆಚರಣೆ: ಬನ್ನಿ ಮರಕ್ಕೆ ತಹಶೀಲ್ದಾರ್ ಗಗನ ಸಿಂಧು ಪೂಜೆ

ವಿಜಯದಶಮಿ ಅಂಗವಾಗಿ ತಾಲೂಕು ಕಚೇರಿಯಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಶ್ವಾರೂಢರಾಗಿ ದೇವಾಲಯಕ್ಕೆ ಆಗಮಿಸಿದ ಅವರು, ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಪ್ರದಾಯ ಪಾಲಿಸಿದರು. ವಿಜಯದ ಸಂಕೇತವಾಗಿ ಆಚರಿಸುವ ವಿಜಯದಶಮಿ ಯಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ವಿಶೇಷ ಮಹತ್ವ ಪಡೆದಿದೆ. ತಹಶೀಲ್ದಾರ್ ಅವರು ಕುದುರೆ ಏರಿ ದೇವಾಲಯಕ್ಕೆ ಆಗಮಿಸಿದ್ದು ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿತು.

ಬನ್ನಿ ಮರಕ್ಕೆ ತಹಶೀಲ್ದಾರ್ ಗಗನ ಸಿಂಧು ಪೂಜೆ

-

Profile
Ashok Nayak Oct 21, 2026 10:24 PM

ಶಿಡ್ಲಘಟ್ಟ: ತಾಲೂಕಿನಲ್ಲಿ ವಿಜಯದಶಮಿ(Vijayadashami) ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸ ಲಾಯಿತು. ತಹಶೀಲ್ದಾರ್ ಗಗನ ಸಿಂಧು ಅವರು ಕುದುರೆ ಏರಿ ತಾಲೂಕು ಕಚೇರಿಯಿಂದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Tigress Dashami dies: ಶಿವಮೊಗ್ಗ ಮೃಗಾಲಯದಲ್ಲಿ ಹುಲಿ ದಶಮಿ ಅನಾರೋಗ್ಯದಿಂದ ಸಾವು

ವಿಜಯದಶಮಿ ಅಂಗವಾಗಿ ತಾಲೂಕು ಕಚೇರಿಯಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಅಶ್ವಾರೂಢರಾಗಿ ದೇವಾಲಯಕ್ಕೆ ಆಗಮಿಸಿದ ಅವರು, ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಪ್ರದಾಯ ಪಾಲಿಸಿದರು. ವಿಜಯದ ಸಂಕೇತವಾಗಿ ಆಚರಿಸುವ ವಿಜಯದಶಮಿ ಯಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದು ವಿಶೇಷ ಮಹತ್ವ ಪಡೆದಿದೆ. ತಹಶೀಲ್ದಾರ್ ಅವರು ಕುದುರೆ ಏರಿ ದೇವಾಲಯಕ್ಕೆ ಆಗಮಿಸಿದ್ದು ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿತು.

20cbpm12tahasildar ok

ಈ ಸಂದರ್ಭದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ಅಭಿವೃದ್ಧಿ ಟ್ರಸ್ಟ್ ಮಂಡಳಿ ಅಧ್ಯಕ್ಷ ಬಳೆ ರಘು, ಸಂಚಾಲಕ ರೂಪಸಿ ರಮೇಶ್, ಡಾ. ಸತ್ಯನಾರಾಯಣರಾವ್, ಮಧು, ವೇಣು, ಕುಂದಲಗುರ್ಕಿ ಮುನೇಂದ್ರ, ಲೋಕೇಶ್, ಶ್ರೀನಾಥ್, ರಾಮಾಂಜನೇಯ, ಕೇಶವಮೂರ್ತಿ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.