ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೆನಡಾದಿಂದ ಮೈಸೂರಿಗೆ ಸ್ಥಳಾಂತರಗೊಳ್ಳಲು ಮುಂದಾದ ಎನ್‌ಆರ್‌ಐ ಕುಟುಂಬ: ಬಾಡಿಗೆ ಇಲ್ಲದೆ ತಿಂಗಳಿಗೆ 1.5 ಲಕ್ಷ ರೂಪಾಯಿ ಸಾಕೆ? ನೆಟ್ಟಿಗರಲ್ಲಿ ಪ್ರಶ್ನೆ

Viral News: ಕೆನಡಾದಲ್ಲಿರುವ ಎನ್‌ಆರ್‌ಐ ಕುಟುಂಬ ಸ್ವಂತ ಊರಲ್ಲೇ ಜೀವಿಸಬೇಕೆಂದು ಮೈಸೂರಿಗೆ ಬಂದು ಸೆಟಲ್ ಆಗಲು ಮುಂದಾಗಿದೆ. ಆದರೆ ಭಾರತದಲ್ಲಿ ನೆಲೆಸಬೇಕೆಂದರೆ ಇಲ್ಲಿನ ಖರ್ಚು- ವೆಚ್ಚಗಳ ಬಗ್ಗೆಯೂ ನೆಟ್ಟಿಗರು ಸಲಹೆ ಕೇಳಿದ್ದಾರೆ. ಕೆನಡಾದಿಂದ ಭಾರತಕ್ಕೆ ಬರಲು ಮುಂದಾದ ಕುಟುಂಬವು ಕರ್ನಾಟಕದ ಮೈಸೂರಿನಲ್ಲಿ ಆರಾಮದಾಯಕ ಜೀವನ ನಡೆಸಲು ತಿಂಗಳಿಗೆ 1.5 ಲಕ್ಷ ರೂಪಾಯಿ ಆದಾಯ ಸಾಕಾಗುತ್ತದೆಯೇ ಎಂದು ಕೇಳಿದ್ದಾರೆ.

ಕೆನಡಾ ಬಿಟ್ಟು ಮೈಸೂರಿನಲ್ಲಿ ಸೆಟಲ್‌ ಆಗಲು ಮುಂದಾದ ಎನ್‌ಆರ್‌ಐ ಕುಟುಂಬ

ಸಾಂದರ್ಭಿಕ ಚಿತ್ರ -

Profile
Pushpa Kumari Oct 21, 2026 10:24 PM

ಬೆಂಗಳೂರು, ಅ‌. 21: ಗುಣಮಟ್ಟದ ಜೀವನಶೈಲಿಗಾಗಿ ವಿದೇಶದಲ್ಲಿ ನೆಲೆಸಬೇಕು ಎಂದು ಬಯಸುವರು ಒಂದು ಕಡೆಯಾದರೆ ಸ್ವಂತ ಊರಲ್ಲೇ ಜೀವಿಸಬೇಕು, ಊರಿನ ಹಸಿರು ಪರಿಸರದಲ್ಲೇ ಇರಬೇಕು ಎಂದು ಬಯಸುವ ವರ್ಗ ಇನ್ನೊಂದೆಡೆ. ಈಗ ಕೆನಡಾದಲ್ಲಿದ್ದ ಅಂಥದ್ದೇ ಒಂದು ಎನ್‌ಆರ್‌ಐ ಕುಟುಂಬ ಸ್ವಂತ ಊರಲ್ಲೇ ಜೀವಿಸಬೇಕೆಂದು ಮೈಸೂರಿಗೆ ಬಂದು ಸೆಟಲ್ ಆಗೋಕೆ ಪ್ಲ್ಯಾನ್‌ ಮಾಡಿದೆ. ಆದರೆ ಭಾರತದಲ್ಲಿ ನೆಲೆಸಬೇಕೆಂದರೆ ಇಲ್ಲಿನ ಆರ್ಥಿಕ ಖರ್ಚು-ವೆಚ್ಚಗಳ ಬಗ್ಗೆಯೂ ಬಳಕೆದಾರರ ಬಳಿ ಪ್ರಶ್ನೆ (Viral News) ಮಾಡಿದ್ದಾರೆ. ಕೆನಡಾದಿಂದ ಭಾರತಕ್ಕೆ ಬರಲು ಮುಂದಾದ ಕುಟುಂಬವು ಮೈಸೂರಿನಲ್ಲಿ ಆರಾಮದಾಯಕ ಜೀವನ ನಡೆಸಲು ತಿಂಗಳಿಗೆ 1.5 ಲಕ್ಷ ರೂಪಾಯಿ ಸಾಕಾಗುತ್ತದೆಯೇ ಎಂದು ಕೇಳಿದೆ.

ರೆಡ್ಡಿಟ್‌ನಲ್ಲಿ ಇವರು ಕೇಳಿರುವ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. "ಮನೆ ಬಾಡಿಗೆಯಿಲ್ಲದೆ, ಕೇವಲ ದಿನನಿತ್ಯದ ಖರ್ಚಿಗೆ ತಿಂಗಳಿಗೆ 1.5 ಲಕ್ಷ ರೂಪಾಯಿ ಸಾಕಾ?" ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಚ್ಚರಿ ವ್ಯಕ್ತ ಪಡಿಸಿದ್ದು, ನೀವು ಆರಾಮದಲ್ಲಿ 1 ಲಕ್ಷ ರೂಪಾಯಿಯಲ್ಲೇ ಬದುಕಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೆಡ್ಡಿಟ್ ಪೋಸ್ಟ್‌ನಲ್ಲಿ ಕೆನಡಾದ ಒಂಟಾರಿಯೊದಲ್ಲಿ ವಾಸಿಸುತ್ತಿದ್ದ ತಾವು ಈಗ ಪತ್ನಿ ಮತ್ತು ಎಂಟು ವರ್ಷದ ಮಗುವಿನೊಂದಿಗೆ ಮೈಸೂರಿನಲ್ಲಿ ನೆಲೆಸಲು ಯೋಜಿಸುತ್ತಿರುವುದಾಗಿ ಆ ವ್ಯಕ್ತಿ ವಿವರಿಸಿದ್ದಾರೆ. ಈ ಕುಟುಂಬವು ಹಸಿರು ಮತ್ತು ನೈಸರ್ಗಿಕ ಪರಿಸರದ ನಡುವೆ ಶಾಂತಿಯುತ ಜೀವನ ನಡೆಸಲು ಆಶಿಸಿದೆ. ಇವರಿಗೆ ಸಿಟಿಯ ಜಂಜಾಟದ ಬದಲಿಗೆ ತೆಂಗಿನ ತೋಟ, ಶುದ್ಧ ಗಾಳಿ, ಪ್ರಕೃತಿಯ ಒಡನಾಟಗಳು ಬೇಕು ಎಂದು ಬಯಸಿದ್ದಾರೆ.

ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು!

ತಾವು ವಸತಿ ವೆಚ್ಚವನ್ನು ಮೊದಲೇ ಪ್ರತ್ಯೇಕವಾಗಿ ಇತ್ಯರ್ಥ ಪಡಿಸಿಕೊಂಡಿದ್ದೇವೆ. ಆದ್ದರಿಂದ ಬಾಡಿಗೆ ಅಥವಾ ಗೃಹ ಸಾಲದ ಕಂತುಗಳನ್ನು ಪಾವತಿಸಬೇಕಾಗಿಲ್ಲ. ಆದರೆ ತಿಂಗಳ ಖರ್ಚು ವೆಚ್ಚದ ಬಜೆಟ್ ಗುರಿ 1.5 ಲಕ್ಷ ರೂಪಾಯಿ. ಇದರಲ್ಲಿ ವಿದ್ಯುತ್, ನೀರು, ಅಡುಗೆ ಅನಿಲ, ದಿನಸಿ ಸಾಮಗ್ರಿಗಳು, ಮನೆಗೆಲಸದ ಸಹಾಯ, ಇಂಧನ, ವಾಹನ ನಿರ್ವಹಣೆ ಮತ್ತು ಶಾಲಾ ಶುಲ್ಕದಂತಹ ವೆಚ್ಚಗಳು ಸೇರುತ್ತವೆ ಎಂದಿದ್ದಾರೆ.

ಮಗುವಿನ ಶಿಕ್ಷಣಕ್ಕಾಗಿ ಶಾಲೆಗಳನ್ನು ಹುಡುಕುತ್ತಿರುವ ಅವರು, 'ಎಕ್ಸೆಲ್ ಪಬ್ಲಿಕ್ ಸ್ಕೂಲ್'ನಲ್ಲಿ ಪ್ರವೇಶ ಪಡೆಯುವ ಬಗ್ಗೆ ಹಾಗೂ ಮೈಸೂರಿನಲ್ಲಿ ಸಾಂಪ್ರದಾಯಿಕ ತರಗತಿ ಬೋಧನೆಯ ಬದಲಿಗೆ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುವ ಪ್ರಗತಿಪರ ಶಾಲೆಗಳಿವೆಯೇ ಎಂದು ಕೇಳಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಕೆಲವೊಂದು ಸಲಹೆ ನೀಡಿದ್ದಾರೆ.

ಒಬ್ಬರು 1 ಲಕ್ಷ ರೂಪಾಯಿ ಇದ್ದರೂ ಆರಾಮಾಗಿರಬಹುದು. ಆದರೆ ನಿಮ್ಮ ಲೈಫ್‌ಸ್ಟೈಲ್ ಮೇಲೆ ಡಿಪೆಂಡ್ ಆಗುತ್ತದೆ ಅಂತ ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು ಮನೆಗೆ ಸೋಲಾರ್ ಹಾಗೂ ಎಲೆಕ್ಟ್ರಿಕ್ ವೆಹಿಕಲ್ ತಗೊಳ್ಳಿ ಎಂದು ಸಲಹೆ ನೀಡಿದ್ದಾರೆ.