Gauribidanur News: ಮನುಷ್ಯನ ಆರೋಗ್ಯಕ್ಕೆ ನಡಿಗೆ ಬಹಳ ಮುಖ್ಯ: ಮಾನಸ ಅಸ್ಪತ್ರೆ ವೈದ್ಯ ಡಾ.ಶಶಿಧರ್ ಸಲಹೆ
ಮುಂಜಾನೆ ನಡಿಗೆ ಇಂದ ಮನುಷ್ಯನಿಗೆ ಹೇರಳವಾದ ಡಿ ವಿಟಮಿನ್ ದೇಹಕ್ಕೆ ಸಿಗುತ್ತದೆ. ಕ್ರೀಡೆ ಗಳಿಂದಲು ಸಹಾ ದೇಹಕ್ಕೆ ಇದು ಲಭ್ಯವಾಗುತ್ತದೆ. ದಿನನಿತ್ಯ ಪೌಷ್ಟಿಕ ಆಹಾರ ಸೇವಿಸುವುದರ ಮುಖಾಂತರ ವಿದ್ಯಾರ್ಥಿಗಳು ಆರೋಗ್ಯಕರವಾದ ದೇಹವನ್ನು ಬೆಳೆಸಿಕೊಳ್ಳಬಹುದು. ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಳ್ಳಬೇಕು
ಮನುಷ್ಯನ ಆರೋಗ್ಯಕ್ಕೆ ನಡಿಗೆ ಬಹಳ ಮುಖ್ಯ. ದಿನನಿತ್ಯ ಸುಮಾರು 5 ಸಾವಿರದಿಂದ 6 ಸಾವಿರ ಅಡಿಗಳಷ್ಟು ನಡೆಯಬೇಕೆಂದು ನ್ಯಾಷನಲ್ ವಿದ್ಯಾ ಸಂಸ್ಥೆಯ ರ‍್ನಿಂಗ್ ಕೌನ್ಸಿಲ್ ಸದಸ್ಯರು,ಮಾನಸ ಅಸ್ಯತ್ರಿ ವೈದ್ಯರಾದ ಡಾ.ಶಶಿಧರ್ ತಿಳಿಸಿದರು. -
ಗೌರಿಬಿದನೂರು: ಮನುಷ್ಯನ ಆರೋಗ್ಯಕ್ಕೆ ನಡಿಗೆ ಬಹಳ ಮುಖ್ಯ.ದಿನನಿತ್ಯ ಸುಮಾರು 5 ಸಾವಿರದಿಂದ 6 ಸಾವಿರ ಅಡಿಗಳಷ್ಟು ನಡೆಯಬೇಕೆಂದು ನ್ಯಾಷನಲ್ ವಿದ್ಯಾ ಸಂಸ್ಥೆಯ ಗೌರ‍್ನಿಂಗ್ ಕೌನ್ಸಿಲ್ ಸದಸ್ಯರು,ಮಾನಸ ಅಸ್ಯತ್ರಿ ವೈದ್ಯರಾದ ಡಾ.ಶಶಿಧರ್ ತಿಳಿಸಿದರು.
ಅವರು ಸ್ಥಳೀಯ ಅಶ್ವತ್ಥಯ್ಯ ಇಸ್ತೂರಿ ಸಂಜೀವಮ್ಮ ನ್ಯಾಷನಲ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮುಂಜಾನೆ ನಡಿಗೆ ಇಂದ ಮನುಷ್ಯನಿಗೆ ಹೇರಳವಾದ ಡಿ ವಿಟಮಿನ್ ದೇಹಕ್ಕೆ ಸಿಗುತ್ತದೆ. ಕ್ರೀಡೆಗಳಿಂದಲು ಸಹಾ ದೇಹಕ್ಕೆ ಇದು ಲಭ್ಯವಾಗುತ್ತದೆ. ದಿನನಿತ್ಯ ಪೌಷ್ಟಿಕ ಆಹಾರವನ್ನು ಸೇವಿಸುವುದರ ಮುಖಾಂತರ ವಿದ್ಯಾರ್ಥಿಗಳು ಆರೋಗ್ಯಕರವಾದ ದೇಹವನ್ನು ಬೆಳೆಸಿ ಕೊಳ್ಳಬಹುದು. ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: Gauribidanur News: ಕಾಚಮಾಚೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಬೊಮ್ಮಣ್ಣ, ಉಪಾಧ್ಯಕ್ಷರಾಗಿ ನಂಜುಂಡಪ್ಪ ಆಯ್ಕೆ
ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಮಾತನಾಡುತ್ತಾ ಉತ್ತಮ ಕ್ರೀಡಾ ಪಟುಗಳಾಗಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಪಿಟಿ ಉಷಾ ಮುಂತಾದವರನ್ನು ಆದರ್ಶ ವಾಗಿ ತೆಗದುಕೊಂಡು ಕ್ರೀಡಾ ಕ್ಷೇತ್ರದಲ್ಲಿ ಮುನ್ನುಗ್ಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಡಾ.ಸೈಲಜಾ ಸಪ್ತಗಿರಿ, ಉಪ ಪ್ರಿನ್ಸಿಪಾಲ್ ನೇತ್ರ, ಸುನೀಲ್ ವಿಜಯಕುಮಾರ್ ಮುಂತಾದವರು ಭಾಗವಹಿಸಿದ್ದರು. ವಿಧ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.