ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಶಿಕ್ಷಣದಿಂದ ವಿವೇಕ, ಜ್ಞಾನ, ಕರುಣೆ, ಪ್ರೀತಿ ಬೆಳೆಯಬೇಕು: ಗೊಲ್ಲಹಳ್ಳಿ ಶಿವಪ್ರಸಾದ್

ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಸಮಾಜ ನಿಮ್ಮನ್ನು ಕೋಟಿ ಕಣ್ಣುಗಳಿಂದ ನೋಡುತ್ತಿದೆ ಎಂಬ ಎಚ್ಚರ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿ, ಯಶಸ್ಸಿನ ಗುರಿ ತಲುಪುವ ಸಂಕಲ್ಪ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲೂ ಅಪಾರ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಹೊರತರುವ ಕೆಲಸವನ್ನು ಬೋಧಕರು ಮಾಡಬೇಕು

ಶಿಕ್ಷಣದಿಂದ ವಿವೇಕ, ಜ್ಞಾನ, ಕರುಣೆ, ಪ್ರೀತಿ ಬೆಳೆಯಬೇಕು

-

Profile
Ashok Nayak Sep 26, 2026 10:03 PM

ಚಿಕ್ಕಬಳ್ಳಾಪುರ: ಶಿಕ್ಷಣವು ಕೇವಲ ಉದ್ಯೋಗ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ಮನುಷ್ಯ ನಲ್ಲಿ ವಿವೇಕ, ಜ್ಞಾನ, ಕರುಣೆ ಹಾಗೂ ಪ್ರೀತಿಯ ಜೀವಸೆಲೆಯನ್ನು ಬೆಳೆಸಬೇಕು ಎಂದು ಸಾಹಿತಿ ಹಾಗೂ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ದಿ ಗೋಲ್ಡನ್ ಗ್ರೀಮ್ಸ್ ಕಾಲೇಜಿನ ವತಿಯಿಂದ ಆಯೋಜಿಸಿದ್ದ ‘ಆಹ್ವಾನ’ ಹೆಸರಿನ ಫ್ರೆಶರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳೇ ದೇಶದ ಭವಿಷ್ಯವಾಗಿದ್ದು, ಸಮಾಜ ನಿಮ್ಮನ್ನು ಕೋಟಿ ಕಣ್ಣುಗಳಿಂದ ನೋಡುತ್ತಿದೆ ಎಂಬ ಎಚ್ಚರ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ನಿರಂತರ ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿ, ಯಶಸ್ಸಿನ ಗುರಿ ತಲುಪುವ ಸಂಕಲ್ಪ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಯಲ್ಲೂ ಅಪಾರ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಹೊರ ತರುವ ಕೆಲಸವನ್ನು ಬೋಧಕರು ಮಾಡಬೇಕು ಎಂದರು.

ಇದನ್ನೂ ಓದಿ: Chikkaballapur News: ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಿ ಕೃಷಿ ಅಭಿವೃದ್ಧಿಗೆ ಸಹಕಾರ: ವಿ.ಮಧುಚಂದ್ರ

ವಿದ್ಯಾರ್ಥಿ ಜೀವನ ಸರಳವಾಗಿ ಅರಳಲು ಅವಕಾಶ ಕಲ್ಪಿಸಬೇಕು. ಮನುಷ್ಯನ ನಿಜವಾದ ಆಸ್ತಿ ಜ್ಞಾನ, ಕರುಣೆ ಹಾಗೂ ಪ್ರೀತಿ. ಸುಳ್ಳು, ಕಿತಾಪತಿ, ಕ್ರೌರ್ಯದ ಮಾತುಗಳಿಗೆ ಜೀವನದಲ್ಲಿ ಅವಕಾಶ ನೀಡಬಾರದು. ಸತ್ಯಕ್ಕೆ ಗೌರವ ಹಾಗೂ ಸುಳ್ಳಿಗೆ ಪುರಸ್ಕಾರ ದೊರೆಯುತ್ತಿರುವ ಸಾಂಸ್ಕೃತಿಕ ಅಧಃಪತನದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಕಂಡುಕೊಳ್ಳುವ ಕೆಲಸ ಮಾಡ ಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಮ ಭಾರತದಲ್ಲಿ ನೈಜ ಸಂಬಂಧಗಳು ಇನ್ನೂ ಉಳಿದಿವೆ. ನಾಗರಿಕತೆಗೆ ಮುನ್ನ ಜನಪದ ಗೀತೆಗಳು ಸಭ್ಯ ಸಮಾಜ ನಿರ್ಮಾಣಕ್ಕೆ ದಾರಿ ತೋರಿಸಿವೆ. ಅಮ್ಮನ ಜೋಗುಳವೇ ಎಲ್ಲ ಸಂಗೀತದ ಮೂಲವಾಗಿದ್ದು, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.

27cbpm2cul ok

ಪ್ರಾಧ್ಯಾಪಕ ಚಂದ್ರಪ್ಪ ಮಾತನಾಡಿ, ಸಂಸ್ಕಾರವಂತ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಮಾತ್ರ ವಲ್ಲದೆ ಮನೆ ಹಾಗೂ ಊರಿಗೂ ಭೂಷಣ. ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ಬಯಸುವುದು ಅಲ್ಪಾವಧಿಯ ಬೆಳವಣಿಗೆಗೆ ಕಾರಣವಾಗಬಹುದು. ಪರಿಶ್ರಮಪಟ್ಟು ಓದಿದರೆ ದೀರ್ಘಾವಧಿಯಲ್ಲಿ ಉತ್ತಮ ಫಲ ಪಡೆಯಲು ಸಾಧ್ಯ ಎಂದರು.

ಕಾಲೇಜಿನ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಸಿ.ಎಂ.ಮುನಿಕೃಷ್ಣಪ್ಪ ಮಾತನಾಡಿ, ಬಡ ಕುಟುಂಬಗಳಿಂದ ಬಂದ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ಸಂತಸ ತಂದಿದೆ. ಪೋಷಕರ ನಂಬಿಕೆಯನ್ನು ಉಳಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಫಲಿತಾಂಶ ದಾಖಲಿಸುವ ಗುರಿ ಹೊಂದಿದ್ದೇವೆ ಎಂದರು.

27cbpm3i ok

ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ‘ಫ್ರೆಶರ್ಸ್ ಡೇ’ ಆಯೋಜಿಸಿ, ಅವರಲ್ಲಿ ನಾಯಕತ್ವ ದ ಗುಣ ಬೆಳೆಸಲು ಮುಂದಾಗಿದ್ದೇವೆ. ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಪ್ರೀತಿಯಿಂದ ಸ್ವಾಗತಿಸುವ ಮೂಲಕ ಕಾಲೇಜಿನಲ್ಲಿ ಸಹೋದರತ್ವದ ಭಾವ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಅತಿಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ 30ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪಠ್ಯೇತರ ಚಟುವಟಿಕೆಗಳ ಪ್ರದರ್ಶನ ನಡೆಯಿತು.

ಭಾರತ ಥ್ರೋಬಾಲ್ ತಂಡದ ತರಬೇತುದಾರ ಮೊಹಮ್ಮದ್ ಅಬೀಬ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಾಧ್ಯಾಪಕ ಆನಂದ್, ವಕೀಲ ಮಂಜುನಾಥ್, ನಾಗೇಶ್ ಅಂಗಟ್ಟಿ, ಸಲಾವುದ್ದೀನ್, ಸಿ.ವಿ. ವೆಂಕಟೇಶ್, ಗೋವರ್ಧನ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.