ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಜೈ ಭೀಮ್ ಘೋಷಣೆಯೊಂದಿಗೆ ಯುವತಿಯರ ಸಂಭ್ರಮ : ಅಂಬೇಡ್ಕರ್ ಆದರ್ಶ ಸಾರಿದ ಅಲಸೂರುದಿನ್ನೆ ಯುವತಿಯರು

ಕಾರ್ಯಕ್ರಮದಲ್ಲಿ ಬಾಲಕಿಯರು ಸಂವಿಧಾನದ ಪೀಠಿಕೆಯನ್ನು ವಾಚಿಸುವ ಮೂಲಕ ಗ್ರಾಮ ಸ್ಥರಿಗೆ ಸಂವಿಧಾನದ ಮಹತ್ವ ಮತ್ತು ಸಮಾನತೆಯ ಸಂದೇಶವನ್ನು ಸಾರಿದರು. ಮಹಿಳೆಯರು ಹಾಗೂ ಯುವತಿಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಆಶಯವನ್ನು ಕಾರ್ಯಕ್ರಮ ಪ್ರತಿಬಿಂಬಿಸಿತು.

ಜೈ ಭೀಮ್ ಘೋಷಣೆಯೊಂದಿಗೆ ಯುವತಿಯರ ಸಂಭ್ರಮ

ತಾಲ್ಲೂಕಿನ ಕಸಬಾ ಹೋಬಳಿಯ ಅಲಸೂರುದಿನ್ನೆ ಗ್ರಾಮದಲ್ಲಿ ಯುವತಿಯರು ಹಾಗೂ ಬಾಲಕಿಯರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ವಿಭಿನ್ನವಾಗಿ ಆಚರಿಸಲಾಯಿತು. -

Profile
Ashok Nayak May 14, 2026 12:57 AM

ಶಿಡ್ಲಘಟ್ಟ: ತಾಲ್ಲೂಕಿನ ಕಸಬಾ ಹೋಬಳಿಯ ಅಲಸೂರುದಿನ್ನೆ ಗ್ರಾಮದಲ್ಲಿ ಯುವತಿ ಯರು ಹಾಗೂ ಬಾಲಕಿಯರ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ವಿಭಿನ್ನವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಲಕಿಯರು ಸಂವಿಧಾನದ ಪೀಠಿಕೆಯನ್ನು ವಾಚಿಸುವ ಮೂಲಕ ಗ್ರಾಮಸ್ಥರಿಗೆ ಸಂವಿಧಾನದ ಮಹತ್ವ ಮತ್ತು ಸಮಾನತೆಯ ಸಂದೇಶವನ್ನು ಸಾರಿದರು. ಮಹಿಳೆಯರು ಹಾಗೂ ಯುವತಿಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂಬ ಆಶಯವನ್ನು ಕಾರ್ಯಕ್ರಮ ಪ್ರತಿಬಿಂಬಿಸಿತು.

ಇದನ್ನೂ ಓದಿ: Shidlaghatta News: ಯುವಕರು ಕ್ರೀಡೆಯನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಸಾಧನೆಯ ದಾರಿಯಾಗಿಯೂ ಪರಿಗಣಿಸಬೇಕು: ಸಿ.ಎಂ. ಬೈರೇಗೌಡ

ಗ್ರಾಮದ ಬಾಲಕಿಯರು ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮ ಆಯೋಜಿಸಿ, ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಸಂದೇಶ ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಗ್ರಾಮದ ಯುವಕರು ಸಹಕಾರ ನೀಡಿ ಯುವತಿಯರಿಗೆ ಬೆಂಬಲವಾಗಿ ನಿಂತರು.

ನಂತರ ಬಾಲಕಿಯರು ಜೈ ಭೀಮ್ ಹಾಡಿಗೆ ನೃತ್ಯ ಪ್ರದರ್ಶನ ನೀಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸುಪ್ರಿತಾ, ನಾಗಲಕ್ಷ್ಮಿ, ಚಾರ್ಲಿಯಾ, ಗೌತಮಿ, ನವ್ಯ, ಸ್ವಾತಿ ಸೇರಿದಂತೆ ಗ್ರಾಮದ ಅಂಜಿನಪ್ಪ, ನಲ್ಲಪ್ಪ, ಗಜ, ಅಂಬರೀಷ್, ವಕೀಲ ನರಸಿಂಹಮೂರ್ತಿ, ನಾಗರಾಜ್, ಗಂಗಾಧರ್, ಮಂಜುನಾಥ್, ಗೋಪಾಲ್, ಮನೋಜ್, ಚರಣ್, ನಾರಾಯಣಸ್ವಾಮಿ, ಕೃಷ್ಣಪ್ಪ, ವಸಂತ್ ಮತ್ತಿತರರು ಉಪಸ್ಥಿತರಿದ್ದರು.

image

“ವಿದ್ಯಾರ್ಥಿ ದಶೆಯಲ್ಲಿಯೇ ಡಾ. ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳನ್ನು ಅರಿತುಕೊಳ್ಳುವುದರಿಂದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡುತ್ತದೆ. ಯುವತಿಯರೇ ಮುನ್ನಡೆಸಿ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಷಯ.”

— ಸುಪ್ರಿತಾ ನಲ್ಲಪ್ಪ