Chinthamani News: ಕರ್ತವ್ಯನಿಷ್ಠ ಅಧಿಕಾರಿಗೆ ಗೌರವ: ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳಿಧರ್ ಪಿ ಬೀಳ್ಕೊಡುಗೆ ಸಮಾರಂಭ
ಮುರಳಿಧರ್ ಅವರು ತಮ್ಮ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಅಧಿಕಾರಿಗಳು ವರ್ಗಾವಣೆಗೊಳ್ಳುವುದು ಸಹಜ, ಆದರೆ ತಾವು ಕೆಲಸ ಮಾಡಿದ ಕ್ಷೇತ್ರದಲ್ಲಿ ಜನಮಾನಸದಲ್ಲಿ ಉಳಿಯುವುದು ಮುಖ್ಯ
-
ಚಿಂತಾಮಣಿ: ಉಪ ವಿಭಾಗದಲ್ಲಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಡಿವೈಎಸ್ಪಿ ಮುರಳಿಧರ್ ಪಿ.ಅವರು ಹೊಸಪೇಟೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ಅವರಿಗೆ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭವು ಅರ್ಥ ಪೂರ್ಣವಾಗಿ ಜರುಗಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಾಲ್ ಚೌಕ್ಸೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ,ಮುರಳಿಧರ್ ಅವರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇದನ್ನೂ ಓದಿ: Chinthamani News: ಹೊಸ ರೂಪದಲ್ಲಿ ಸ್ಮೈಲ್ ನೆಸ್ಟ್: ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದಂತ ಚಿಕಿತ್ಸಾ ಕೇಂದ್ರ ಲೋಕಾರ್ಪಣೆ
ಮುರಳಿಧರ್ ಅವರು ತಮ್ಮ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅಧಿಕಾರಿ ಗಳು ವರ್ಗಾವಣೆಗೊಳ್ಳುವುದು ಸಹಜ, ಆದರೆ ತಾವು ಕೆಲಸ ಮಾಡಿದ ಕ್ಷೇತ್ರದಲ್ಲಿ ಜನಮಾನಸದಲ್ಲಿ ಉಳಿಯುವುದು ಮುಖ್ಯ ಎಂದು ಎಸ್ಪಿ ಕುಶಾಲ್ ಚೌಕ್ಸೆ ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಡಿವೈಎಸ್ಪಿ ಮುರಳಿಧರ್ ಅವರು, ಚಿಂತಾಮಣಿಯಲ್ಲಿ ಕೆಲಸ ಮಾಡಿದ ಅನುಭವ ಮತ್ತು ಸಹೋದ್ಯೋಗಿಗಳ ಸಹಕಾರವನ್ನು ನೆನೆದು ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು,ಪೊಲೀಸ್ ಸಿಬ್ಬಂದಿ ಹಾಗೂ ಗಣ್ಯರು ಭಾಗವಹಿಸಿದ್ದರು.