ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tulu as 2nd Official Language: ಮಂಗಳೂರಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧಾರ ದ.ಕನ್ನಡ ಜಿಲ್ಲೆಗೆ ಮಂಗಳೂರು ಎಂದು ನಾಮಕರಣ?

ಇಡೀ ಕರಾವಳಿ ಮತ್ತು ಮಲೆನಾಡು ಭಾಗದ ಸಮಗ್ರ ಮುಖಚಿತ್ರವನ್ನೇ ಬದಲಿಸಬಲ್ಲ ಬರೋಬ್ಬರಿ 32,611 ಕೋಟಿ ರು. ಮೊತ್ತದ ಬೃಹತ್ ಮೂಲ ಸೌಕರ್ಯ, ಶಿಕ್ಷಣ, ಬಂದರು ಹಾಗೂ ಪ್ರವಾ ಸೋದ್ಯಮ ಯೋಜನೆಗಳ ಪ್ಯಾಕೇಜ್‌ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.

ತುಳು 2ನೇ ಆಡಳಿತ ಭಾಷೆ

-

Profile
Ashok Nayak Sep 19, 2026 7:55 AM

ಜಿತೇಂದ್ರ ಕುಂದೇಶ್ವರ, ಮಂಗಳೂರು

ತುಳುನಾಡಿನ ಜನರ ದಶಕಗಳ ಸಾಂಸ್ಕೃತಿಕ ಹಾಗೂ ಭಾಷಿಕ ಅಸ್ಮಿತೆಯ ತೀವ್ರ ಹೋರಾಟಕ್ಕೆ ಕೊನೆಗೂ ಸರ್ಕಾರದ ಅಧಿಕೃತ ಐತಿಹಾಸಿಕ ಮುದ್ರೆ ಬಿದ್ದಿದೆ. ಕಡಲನಗರಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಮಾವೇಶಗೊಂಡ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಸೀಮಿತವಾಗಿ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯನ್ನಾಗಿ ಅಧಿಕೃತವಾಗಿ ಅಂಗೀಕರಿಸಲಾಗಿದೆ.

ಇಡೀ ಕರಾವಳಿ ಮತ್ತು ಮಲೆನಾಡು ಭಾಗದ ಸಮಗ್ರ ಮುಖಚಿತ್ರವನ್ನೇ ಬದಲಿಸಬಲ್ಲ ಬರೋಬ್ಬರಿ 32,611 ಕೋಟಿ ರು. ಮೊತ್ತದ ಬೃಹತ್ ಮೂಲ ಸೌಕರ್ಯ, ಶಿಕ್ಷಣ, ಬಂದರು ಹಾಗೂ ಪ್ರವಾ ಸೋದ್ಯಮ ಯೋಜನೆಗಳ ಪ್ಯಾಕೇಜ್‌ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕು ಮಾರ್, ನಮ್ಮದು ಜನರ ನೈಜ ಭಾವನೆಗಳನ್ನು ಕೇವಲ ಮಾತಿನಲ್ಲಷ್ಟೇ ಸೀಮಿತವಾಗಿಡದೆ, ನೇರ ಕೃತಿಯಲ್ಲಿ ಗೌರವಿಸುವ ಪಕ್ಕಾ ಬದ್ಧತೆಯ ಸರ್ಕಾರ ಎಂದಿದ್ದಾರೆ.

ಇದನ್ನೂ ಓದಿ: Tulu Development Authority: ತುಳು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒತ್ತಾಯ

‘ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡಬೇಕೆಂಬ ಕೂಗು ಇವತ್ತಿನದಲ್ಲ; ದಶಕಗಳಿಂದಲೂ ಜನರ ಎದೆಯಾಳ ದಲ್ಲಿದ್ದ ಬೇಡಿಕೆ. ಈ ಹಿಂದೆ ಅಧಿಕಾರದಲ್ಲಿದ್ದ ವರು ಇದನ್ನು ಏಕೆ ಜಾರಿಗೊಳಿಸಲಿಲ್ಲ ಎಂಬ ರಾಜಕೀಯ ಕೆಸರೆರಚಾಟಕ್ಕೆ ನಾನು ಇಳಿಯುವು ದಿಲ್ಲ. ರಾಜ ಕೀಯ ಟೀಕೆಗಳು ಕಾಲಕ್ರಮೇಣ ಸಾಯುತ್ತವೆ, ಆದರೆ ನಾವು ಸಮಾಜಕ್ಕೆ ನೀಡಿದ ಗಟ್ಟಿಯಾದ ಕೆಲಸಗಳು ಶಾಶ್ವತವಾಗಿ ಚರಿತ್ರೆಯಲ್ಲಿ ಉಳಿಯು ತ್ತವೆ. ಉಭಯ ಜಿಲ್ಲೆಗಳಲ್ಲಿ ಇನ್ಮುಂದೆ ತುಳು ರಾಜ್ಯದ ಅಽಕೃತ ಹೆಚ್ಚುವರಿ ಆಡಳಿತ ಭಾಷೆಯಾಗಿ ವಿರಾಜಿಸಲಿದೆ’ ಎಂದು ಸಿಎಂ ಹೇಳಿದ್ದಾರೆ.

ನಿರ್ಣಯಗಳು

ಉಡುಪಿ, ದಕ್ಷಿಣ ಕನ್ನಡದಲ್ಲಿ ಅಧಿಕೃತ ಆಡಳಿತ ಭಾಷೆಯಾಗಿ ತುಳು; ಸಚಿವ ಸಂಪುಟದ ಐತಿಹಾಸಿಕ ಮುದ್ರೆ

ದಕ್ಷಿಣ ಕನ್ನಡಕ್ಕೆ ಮಂಗಳೂರೆಂದು ನಾಮಕರಣಕ್ಕೆ ಚಿಂತನೆ: ಸಾರ್ವಜನಿಕರ ಆಕ್ಷೇಪಣೆ, ಅಭಿಪ್ರಾಯಕ್ಕೆ ಸ್ವಾಗತ

ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿಗೆ ಒಪ್ಪಿಗೆ, ಸಿಎಂ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಮಂಡಳಿ

ಮಂಗಳೂರಿನಲ್ಲಿ ಜಲ ಮೆಟ್ರೋ; 12 ದ್ವೀಪಗಳ ಸಮಗ್ರ ಅಭಿವೃದ್ಧಿ, 3 ಜಿಲ್ಲೆಗಳು ವಿಶೇಷ ಸಮುದ್ರ ವಲಯ

ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 6,925 ಕೋಟಿ ರು. ವೆಚ್ಚದ ಬಂದರು, ಕಾರವಾರ ರನ್‌ವೇ ವಿಸ್ತರಣೆ

ಪುತ್ತೂರಿನ ಮೆಡಿಕಲ್ ಕಾಲೇಜಿಗೆ 549 ಕೋಟಿ ರು., ದ.ಕನ್ನಡ, ಉಡುಪಿಯ ಒಟ್ಟು ಕಂಬಳಕ್ಕೆ 1 ಕೋಟಿ ರು

ಸಿಎಂ ಸಂಚಾರ

ಬೆಳಗ್ಗೆ 8.30: ಯುವಜನರೊಂದಿಗೆ ಬೆಳಗ್ಗೆ ಉಪಾಹಾರ; ಕರಾವಳಿ ಪ್ರವಾಸೋದ್ಯಮ ನೀತಿಯ ಬಗ್ಗೆ ವಿಸ್ತೃತ ಸಂವಾದ

ಬೆಳಗ್ಗೆ 10: ಕದ್ರಿ ಮಂಜುನಾಥೇಶ್ವರ ಸ್ವಾಮಿ ದರ್ಶನ, ರುದ್ರಾಭಿಷೇಕ ಹಾಗೂ ಅನ್ನದಾನ ಸೇವೆಗಳಿಗೆ ಚಾಲನೆ

ಬೆ.11.30: ಸರ್ಕಿಟ್ ಹೌಸ್ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ, ವೀರಯೋಧರಿಗೆ ಪುಷ್ಪ ನಮನ ಗೌರವ

ಸರ್ಕಿಟ್ ಹೌಸ್‌ನಿಂದ ತೆರೆದ ಅಂಬಾರಿ ಬಸ್‌ನಲ್ಲಿ ಪಡೀ ಲ್‌ನಲ್ಲಿರುವ ಪ್ರಜಾಸೌಧಕ್ಕೆ ಸಚಿವ ರೊಂದಿಗೆ ಸಂಚಾರ

ಮ.1: ಪ್ರಜಾಸೌಧದ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ, ಹಲವು ವಿಚಾರಗಳ ಕುರಿತು ಚರ್ಚೆ, ನಿರ್ಣಯ

ಮ.3:30: ಸಂಪುಟಸಭೆಯ ಮಹತ್ವದ ನಿರ್ಣಯಗಳು, ಅನುದಾನಗಳ ಕುರಿತು ಸಿಎಂ ವಿಸ್ತೃತ ಪತ್ರಿಕಾಗೋಷ್ಠಿ