ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಳುವಿಗೆ ರಾಜ್ಯಭಾಷೆ ಸ್ಥಾನ ಸೇರಿ ಹಲ ಘೋಷಣೆ ನಿರೀಕ್ಷೆ ಕರಾವಳಿ ಕೇಂದ್ರಿತವಾದ 35 ವಿಚಾರಗಳನ್ನು ಚರ್ಚಿಸುವ ಸಾಧ್ಯತೆ: ಇಂದು ಕರಾವಳಿಯಲ್ಲಿ ಮಂತ್ರಿಮಂಡಲ ಸಭೆ

ದ.ಕನ್ನಡ, ಉಡುಪಿ ಮತ್ತು ಉ.ಕನ್ನಡ ಜಿಗಳಿಗೆ ಸಂಬಂಧಿಸಿದ ಸಂಪುಟ ಸಭೆಯಾದರೂ, ಮೀನು ಗಾರಿಕೆ, ಪ್ರವಾಸೋದ್ಯಮ, ಕಂದಾಯ ಭೂಮಿ, ಪಿಲಿಕುಳ ಅಭಿವೃದ್ಧಿ, ಕೋಸ್ಟಲ್ ರೋಡ್, ಸಿಆರ್ ಝಡ್ ಸಡಿಲಿಕೆ ಮುಂತಾದ 35ಕ್ಕೂ ಹೆಚ್ಚು ಮಂಗ ಳೂರು ಕೇಂದ್ರೀಕೃತ ಅಭಿವೃದ್ಧಿ ಯೋಜನೆಗಳ ವಿಷಯ ಮಂಡನೆ ನಡೆಯಲಿವೆ. ಕ್ರೂಸ್ ಟೂರಿಸಂ, ಬೋಟ್ ಹೌಸ್, ಹೂಡಿಕೆ ಹೆಚ್ಚಳ, ಕಡಲ ತೀರ ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ತೀರ್ಮಾನ ನಿರೀಕ್ಷಿಸಲಾಗಿದೆ.

ಇಂದು ಕರಾವಳಿಯಲ್ಲಿ ಮಂತ್ರಿಮಂಡಲ ಸಭೆ

-

Profile
Ashok Nayak Sep 18, 2026 8:59 AM

ಮಂಗಳೂರು: ಇಲ್ಲಿನ ಜಿಲ್ಲಾಧಿಕಾರಿ ಕಾರ್ಯಾಲಯದ ಪ್ರಜೌಸೌಧದ ಸಭಾಂಗಣದಲ್ಲಿ, ಶುಕ್ರವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಸಂಜೆ ವಿಮಾನದ ಮೂಲ ಕ ಮಂಗಳೂರಿಗೆ ತೆರಳಿದ್ದು, ಕರಾವಳಿ ಭಾಗದ ಹಲವು ಸಮಸ್ಯೆಗಳ ಕುರಿತು ಚರ್ಚಿಸಲು ಸಿದ್ಧತೆ ನಡೆಸಿದ್ದಾರೆ.

ದ.ಕನ್ನಡ, ಉಡುಪಿ ಮತ್ತು ಉ.ಕನ್ನಡ ಜಿಗಳಿಗೆ ಸಂಬಂಧಿಸಿದ ಸಂಪುಟ ಸಭೆಯಾದರೂ, ಮೀನು ಗಾರಿಕೆ, ಪ್ರವಾಸೋದ್ಯಮ, ಕಂದಾಯ ಭೂಮಿ, ಪಿಲಿಕುಳ ಅಭಿವೃದ್ಧಿ, ಕೋಸ್ಟಲ್ ರೋಡ್, ಸಿಆರ್ ಝಡ್ ಸಡಿಲಿಕೆ ಮುಂತಾದ 35ಕ್ಕೂ ಹೆಚ್ಚು ಮಂಗ ಳೂರು ಕೇಂದ್ರೀಕೃತ ಅಭಿವೃದ್ಧಿ ಯೋಜನೆಗಳ ವಿಷಯ ಮಂಡನೆ ನಡೆಯಲಿವೆ. ಕ್ರೂಸ್ ಟೂರಿಸಂ, ಬೋಟ್ ಹೌಸ್, ಹೂಡಿಕೆ ಹೆಚ್ಚಳ, ಕಡಲ ತೀರ ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ತೀರ್ಮಾನ ನಿರೀಕ್ಷಿಸಲಾಗಿದೆ.

ತುಳು ಭಾಷೆಗೆ 2ನೇ ರಾಜ್ಯಭಾಷೆಯ ಸ್ಥಾನಮಾನ ಸಿಗಬೇಕೆಂದು ಸ್ಥಳೀಯ ನಾಯಕರು ಒತ್ತಾಯಿಸಿದ್ದು, ಆ ಬಗ್ಗೆಯೂ ಚರ್ಚೆಯಾಗುವ ನಿರೀಕ್ಷೆಯಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, “ರಾಜ್ಯವು ಸುಮಾರು ೩೪೦ ಕಿ.ಮೀ. ಉದ್ದದ ಸಮುದ್ರ ತೀರವನ್ನು ಹೊಂದಿದೆ. ಈ ಅಪಾರ ಸಾಧ್ಯತೆಗಳನ್ನು ಬಳಸಿಕೊಂಡು ಕರಾವಳಿ ಹಾಗೂ ಮಲೆನಾಡಿನ ಚಿತ್ರಣವನ್ನೇ ಬದಲಿಸಬೇಕಿದೆ.

ಇದನ್ನೂ ಓದಿ: IT Park at Kalaburagi: ಸ್ಪೋರ್ಟ್ಸ್ ಸಿಟಿ, ಕೆಆರ್‌ಐಎ, ಕೋಟಿ ವೃಕ್ಷ ಅಭಿಯಾನ ಸೇರಿ ಹಲವು ಯೋಜನೆ: ಕಲಬುರಗಿಗೆ ಐಟಿ ಪಾರ್ಕ್, 50 ಸಾವಿರ ನಿವೇಶನ

ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಇಲ್ಲಿನ ಯುವಜನರು ಉದ್ಯೋಗ ಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುವುದೇ ಸರ್ಕಾರದ ಮುಖ್ಯ ಉದ್ದೇಶ" ಎಂದರು. “ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವಿದ್ಯಾವಂತ, ಪ್ರಜ್ಞಾವಂತ ಹಾಗೂ ಅಪ್ರತಿಮ ಪ್ರತಿಭಾವಂತರ ದಂಡೇ ಇದೆ. ರಾಜ್ಯದ ಬೇರೆಲ್ಲೂ ಕಾಣಸಿಗದ ಇಂತಹ ಮಾನವ ಸಂಪನ್ಮೂಲಕ್ಕೆ ಸ್ಥಳೀಯ ವಾಗಿಯೇ ಶಕ್ತಿ ತುಂಬುವ ಕೆಲಸವಾಗಬೇಕಿದೆ. ಸಾಮರ್ಥ್ಯದ ದೃಷ್ಟಿಯಿಂದ ಈ ನೆಲ ಯಾವುದರಲ್ಲೂ ಹಿಂದಿಲ್ಲ" ಎಂದರು.

ದೀರ್ಘಕಾಲದ ಬೇಡಿಕೆಗಳಿಗೆ ಒತ್ತು: ಕರಾವಳಿಯ ಜನರು ಕಳೆದ ಮೂರು-ನಾಲ್ಕು ದಶಕಗಳಿಂದ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಬಿಜೆಪಿ ಶಾಸಕರು ಮತ್ತು ಸಂಸದರು ಸೇರಿದಂತೆ ಹಲವು ಜನಪ್ರತಿನಿಧಿಗಳು ತಮ್ಮ ಗಮನ ಸೆಳೆದಿದ್ದಾರೆ ಎಂದ ಮುಖ್ಯ ಮಂತ್ರಿಗಳು, “ಸರ್ಕಾರ ಕೈಹಿಡಿಯದಿದ್ದರೆ ಇನ್ನಾರು ನಮ್ಮ ನೆರವಿಗೆ ಬರುತ್ತಾರೆ ಎಂಬ ನಿರೀಕ್ಷೆ ಯಲ್ಲಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಶುಕ್ರವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸಮಗ್ರವಾಗಿ ಚರ್ಚಿಸಿ ಸ್ಪಷ್ಟ ತೀರ್ಮಾನ ಪ್ರಕಟಿಸಲಾಗುವುದು" ಎಂದು ಭರವಸೆ ನೀಡಿದರು.

ಕಸ್ತೂರಿರಂಗನ್, ಬರ: ಅಧಿವೇಶನದಲ್ಲಿ ಚರ್ಚೆ

ಕಸ್ತೂರಿರಂಗನ್ ವರದಿ ಜಾರಿಯಿಂದ ಕರಾವಳಿ ಮತ್ತು ಮಲೆನಾಡಿನ ರೈತರು ಹಾಗೂ ಸ್ಥಳೀಯ ನಿವಾಸಿಗಳಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಪ್ರತಿಕ್ರಿಯಿಸಿದ ಸಿಎಂ ಶಿವಕುಮಾರ್, “ವರದಿಯನ್ನು ತಿರಸ್ಕರಿಸುವ ಸ್ಪಷ್ಟ ನಿಲುವನ್ನು ಸರ್ಕಾರ ಹೊಂದಿದ್ದರೂ, ಈ ವಿಚಾರದಲ್ಲಿ ನಾನಾ ಆಯಾಮದ ಒತ್ತಡಗಳು ಹಾಗೂ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಮುಂಬರುವ ವಿಶೇಷ ಅಧಿವೇಶನದಲ್ಲಿ ಎಲ್ಲ ಶಾಸಕರಿಗೂ ಮುಕ್ತವಾಗಿ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸಲಾಗು ವುದು" ಎಂದರು. “ಶಾಸನಸಭೆ ಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ನಾನೇ ಖುದ್ದಾಗಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿಗಳನ್ನು ಪರಿಶೀಲಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಏನೇನು ಬೇಡಿಕೆಗಳು

ಯುವಜನತೆಗೆ ಉದ್ಯೋಗವೊದಗಿಸಲು ಯೋಜನೆ, ಪ್ರವಾಸೋದ್ಯಮದ ಅಭಿವೃದ್ಧಿ

100-150 ಎಕರೆ ಜಾಗವನ್ನು ಗುರುತಿಸಿ ತಾರಾ ಹೋಟೆಲ್ ನಿರ್ಮಾಣಕ್ಕೆ ಕ್ರಮ

ತಲಪಾಡಿಯಿಂದ ಬೈಂದೂರುವರೆಗೆ ಕರಾವಳಿ ಮಾರ್ಗ ಅಭಿವೃದ್ಧಿಯಾಗಬೇಕು

ಉಡುಪಿಯ ಬೆಳಪುವಿನಲ್ಲಿ ಅರ್ಧಕ್ಕೆ ನಿಂತಿ ರುವ ಕ್ರೀಡಾ ವಿಶ್ವವಿದ್ಯಾನಿಲಯ ನಿರ್ಮಾಣ ಕಾಮಗಾರಿಯನ್ನು ಪುನಾರಂಭಿಸಬೇಕು, ಈ ಕಾರ್ಯಕ್ಕೆ ಆದ್ಯತೆ ನೀಡಬೇಕು

ಮೀನುಗಾರಿಕಾ ಕಾಲೇಜು ಅಭಿವೃದ್ಧಿ, ಉಡುಪಿ ಜಿಲ್ಲೆಯ ಅಜ್ಜರಕಾಡುವಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ

ಮಂಗಳಾ ಕ್ರೀಡಾಂಗಣ ಅಭಿವೃದ್ಧಿ ಯಾಗಬೇಕು, ವಿವಿಧ ತಾಲೂಕುಗಳಲ್ಲಿ ಕ್ರೀಡಾಂಗಣಗಳು ನಿರ್ಮಾಣವಾಗಬೇಕು

ಕರಾವಳಿಯಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕೇಂದ್ರ, ದೇಗುಲ ಪ್ರವಾ ಸೋದ್ಯಮಕ್ಕೆ ಪ್ರಾಧಾನ್ಯತೆ ನೀಡಬೇಕು

ಕರಾವಳಿಯಲ್ಲಿ ಯಕ್ಷಗಾನ, ಕಂಬಳದ ಜೊತೆಗೆ ವಿವಿಧ ಪರಂಪರೆಯ ಕಲೆಗಳಿಗೆ ಕನಿಷ್ಠ 10 ಕೋಟಿ ರು. ಬಜೆಟ್ ಮೀಸಲಿಡಬೇಕು

ಕೊಣಾಜೆಯಿಂದ ಮಣಿಪಾಲದವರೆಗೆ ಮೆಟ್ರೋ ಲೈನ್ ನಿರ್ಮಾಣವಾಗಬೇಕು