ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Mangaluru Honey Trap Case: ಉದ್ಯಮಿಗೆ ಹನಿಟ್ರ್ಯಾಪ್ ಮಾಡಿ 2.77 ಕೋಟಿ ವಸೂಲಿ; ಮಂಗಳೂರಿನಲ್ಲಿ ಕಾಂಗ್ರೆಸ್‌ ಮುಖಂಡ ಸೇರಿ ಇಬ್ಬರು ಅರೆಸ್ಟ್‌

ಅಶ್ಲೀಲ ಫೋಟೊ-ವಿಡಿಯೊಗಳನ್ನು ಪತ್ನಿಗೆ ತೋರಿಸುವುದಾಗಿ ಉದ್ಯಮಿಗೆ ಬ್ಲ್ಯಾಕ್​ ಮೇಲ್ ​ ಮಾಡಿದ್ದ ಆರೋಪಿಗಳು, ಸೂಸೈಡ್​ ಕಥೆ ಕಟ್ಟಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿಗೆ ಹನಿಟ್ರ್ಯಾಪ್; ಕಾಂಗ್ರೆಸ್‌ ಮುಖಂಡ ಸೇರಿ ಇಬ್ಬರು ಅರೆಸ್ಟ್‌

ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್‌. -

Prabhakara R
Prabhakara R Jun 9, 2026 8:23 PM

ಮಂಗಳೂರು: ಉದ್ಯಮಿಗೆ ಹನಿಟ್ರ್ಯಾಪ್‌, ಬ್ಲ್ಯಾಕ್‌ಮೇಲ್‌ (Mangaluru Honey Trap Case) ಮಾಡಿ 2.77 ಕೋಟಿ ರೂ. ವಸೂಲಿ ಮಾಡಿರುವ ಆರೋಪದಲ್ಲಿ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಅಲಿಯಾಸ್‌ ಇಬ್ರಾಹಿಂ ಹಾಗೂ ಜಿತೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಫೋಟೊ-ವಿಡಿಯೊಗಳನ್ನು ಪತ್ನಿಗೆ ತೋರಿಸುವುದಾಗಿ ಉದ್ಯಮಿಗೆ ಬ್ಲ್ಯಾಕ್​ ಮೇಲ್ ​ ಮಾಡಿದ ಆರೋಪಿಗಳು, ಸೂಸೈಡ್​ ಕಥೆ ಕಟ್ಟಿ ಕೋಟ್ಯಂತರ ರೂಪಾಯಿ ವಸೂಲಿ ಪೊಲೀಸರ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

ಉದ್ಯಮಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದು ಹೇಗೆ?

2024ರಲ್ಲೇ ಖ್ಯಾತ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಆರೋಪಿ ಜಿತೇಶ್, ಉದ್ಯಮಿಯ ಅಶ್ಲೀಲ ಫೋಟೊ, ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆಟ ಶುರು ಮಾಡಿದ್ದ. ಹಣ ಕೊಡದಿದ್ದರೆ ಪತ್ನಿಗೆ ವಿಡಿಯೊ ತೋರಿಸುವುದಾಗಿ ಉದ್ಯಮಿಗೆ ಬೆದರಿಕೆ ಹಾಕಿದ್ದ. ಮೊದಲಿಗೆ ಜಿತೇಶ್​ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್​ಗೆ ಉದ್ಯಮಿ ಹಣ ನೀಡಿದ್ದರಂತೆ.

ಈ ಬಗ್ಗೆ ಯುವ ಕಾಂಗ್ರೆಸ್ ಮುಖಂಡ ನಿಜಾಮ್​ಗೆ ಉದ್ಯಮಿಯೇ ಮಾಹಿತಿ ನೀಡಿದ್ದರಂತೆ. ಆದರೆ ಉದ್ಯಮಿಯ ಸಹಾಯಕ್ಕೆ ಹೋಗದ ಕಾಂಗ್ರೆಸ್ ಮುಖಂಡ, ಜಿತೇಶ್ ಜತೆ ಸೇರಿ ಉದ್ಯಮಿಗೆ ಇನ್ನಷ್ಟು ಬ್ಲ್ಯಾಕ್​​ಮೇಲ್ ಮಾಡಿದ್ದಾನೆ. ಉದ್ಯಮಿಯಿಂದ ನಿಜಾಮ್​ ಮತ್ತೆ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದು, ಈವರೆಗೆ ಬರೋಬ್ಬರಿ 2.77 ಕೋಟಿ ದೋಚಿದ್ದಾರೆ.

ಆತ್ಮಹತ್ಯೆ ಕಥೆ ಕಟ್ಟಿ ವಂಚನೆ!

ಜಿತೇಶ್ ಆತ್ಮಹತ್ಯೆ ಕಥೆ ಕಟ್ಟಿ ಉದ್ಯಮಿ ಬಳಿ ನಿಜಾಮ್ ಹಣ ವಸೂಲಿ ಮಾಡಿದ್ದಾನೆ. ಸದ್ಯ ಹನಿಟ್ರ್ಯಾಪ್ ಕೇಸ್​​ನಲ್ಲಿ ನಿಜಾಮ್ ಮತ್ತು ಜಿತೇಶ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ 'ಆತ್ಮಹತ್ಯೆ' ಕಥೆ ಬಯಲಾಗಿದೆ.

2024ರ ಮೇ ತಿಂಗಳಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ನಿಜಾಮ್ ಉದ್ಯಮಿ ಬಳಿ ಸುಳ್ಳು ಹೇಳಿದ್ದನಂತೆ. ಡೆತ್‌ನೋಟ್‌ನಲ್ಲಿ ಉದ್ಯಮಿ ಹೆಸರು ಬರೆದಿರುವುದಾಗಿ ಕಥೆ ಸೃಷ್ಟಿಸಿ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಜಿತೇಶ್ ನೇಣಿಗೆ ಶರಣಾದ ರೀತಿ ಹಾಗೂ ಅಂತ್ಯಕ್ರಿಯೆಯ ಫೋಟೊ ಹಾಕಿ ಉದ್ಯಮಿಗೆ ಬ್ಲ್ಯಾಕ್ ಮೇಲ್ ಮಾಡಿದ್ದು, ಜೀವಂತವಾಗಿದ್ದವನು ಸತ್ತಿದ್ದಾನೆ ಎಂದು ಹೇಳಿ ಕೇಸ್‌ ಹಾಕುವ ಬೆದರಿಕೆ ಹಾಕಲಾಗಿದೆ. ಇದರಿಂದ ಉದ್ಯಮಿ ಹೆಸರಿ ಹಣ ನೀಡಿದ್ದಾರೆ.

ಜಿತೇಶ್ ಆತ್ಮಹತ್ಯೆ ಕಥೆ ನಂಬಿದ್ದ ಮಂಗಳೂರಿನ ಉದ್ಯಮಿ 2024 ರಿಂದ 2026ರವರೆಗೆ ಕೋಟ್ಯಂತರ ರೂಪಾಯಿ ಹಣ ಕೊಟ್ಟಿದ್ದಾರೆ. ಆರೋಪಿಗಳು ಎರಡು ವರ್ಷಗಳಿಂದ 2 ಕೋಟಿ 77 ಲಕ್ಷದಷ್ಟು ಹಣ ವಸೂಲಿ ಮಾಡಿದ್ದಾರೆ. ಆದರೆ ಮಂಗಳೂರಿನಲ್ಲಿ ಇತ್ತೀಚೆಗೆ ಉದ್ಯಮಿಗೆ ಕಣ್ಣಿಗೆ ಜಿತೇಶ್ ಬಿದ್ದಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ಜೀವಂತ ಇರೋದು ನೋಡಿ ಉದ್ಯಮಿಯೇ ಶಾಕ್ ಆಗಿದ್ದಾರೆ. ಬಳಿಕ ಉದ್ಯಮಿ ಈ ಸಂಬಂಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉದ್ಯಮಿ ದೂರಿನ ಆಧಾರದಲ್ಲಿ ಜಿತೇಶ್ ಜಾಗೂ ನಿಝಾಮ್ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ರಾಜ್ಯದ ಹಲವು ನಾಯಕರ ಜೊತೆಗಿನ ನಿಜಾಮ್ ಫೋಟೊ ಇದೀಗ ವೈರಲ್ ಆಗುತ್ತಿದೆ.

Davanagere News: ದಾವಣಗೆರೆಯಲ್ಲಿ ನೀಚ ಕೃತ್ಯ; ಪತಿಯೊಂದಿಗೆ ಜಗಳವಾಡಿ ತವರಿಗೆ ಹೋಗುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್!

ಯುವ ಕಾಂಗ್ರೆಸ್‌ನಿಂದ ‌ಉಚ್ಚಾಟನೆ

ಹನಿಟ್ರ್ಯಾಪ್ ಪ್ರಕರಣದಲ್ಲಿ ಬಂಧನವಾದ ಹಿನ್ನೆಲೆ ನಿಜಾಮ್ ಅವರನ್ನು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮತ್ತು ಯುವ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಯುವ ಕಾಂಗ್ರೆಸ್ ದ.ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ನವಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.