ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಳಿ ಕಟ್ಟುವ ಶುಭವೇಳೆ ಹೈಡ್ರಾಮಾ: ಗಂಡನ 2ನೇ ಮದುವೆಗೆ ಆಗಮಿಸಿದ ಮೊದಲ ಪತ್ನಿ; ಮುಂದೆ ನಡೆದಿದ್ದು ಯಾರೂ ಊಹಿಸದ ಘಟನೆ

Viral Video: ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದು ಭಾರಿ ಸುದ್ದಿಯಲ್ಲಿದೆ. ತನ್ನ ಪತಿಗೆ ಎರಡನೇ ಮದುವೆಯಾಗುತ್ತಿದೆ ಎಂದು ತಿಳಿದ ಪತ್ನಿ ಪೊಲೀಸರೊಂದಿಗೆ ನೇರವಾಗಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ನೀಡಿ ವಧು- ವರ ಇಬ್ಬರಿಗೂ ಅಚ್ಚರಿ ಮೂಡಿಸಿದ್ದಾಳೆ.

2ನೇ ಮದುವೆ ಆಗಲು ಸಿದ್ದತೆಯಲ್ಲಿದ್ದ ಪತಿಗೆ ಬಿಗ್ ಶಾಕ್ ಕೊಟ್ಟ ಮೊದಲನೇ ಪತ್ನಿ

ಎರಡನೇ ಮದುವೆ ಆಗಲು ಸಿದ್ದತೆಯಲ್ಲಿದ್ದ ಪತಿಯನ್ನು ತಡೆದ ಮೊದ ಪತ್ನಿ -

Profile
Pushpa Kumari Jul 27, 2026 9:00 PM

ಲಖನೌ, ಜು. 27: ಇತ್ತೀಚೆಗೆ ಮದುವೆ ಮಂಟಪದಲ್ಲಿ ನಡೆಯುವ ದಿಢೀರ್ ನಿರ್ಧಾರಗಳು, ಕೆಲವೊಂದು ತಿರುವುಗಳು ಬಂದ ಅತಿಥಿಗಳಿಗೆ ಅಚ್ಚರಿ ತರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದು ಭಾರಿ (Viral News) ಸುದ್ದಿಯಲ್ಲಿದೆ. ತನ್ನ ಪತಿಗೆ ಎರಡನೇ ಮದುವೆಯಾಗುತ್ತಿದೆ ಎಂದು ತಿಳಿದ ಪತ್ನಿ ಪೊಲೀಸರೊಂದಿಗೆ ನೇರವಾಗಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ನೀಡಿ ವಧು-ವರ ಇಬ್ಬರಿಗೂ ಶಾಕ್‌ ನೀಡಿದ್ದಾಳೆ.

ಈ ಘಟನೆ ಚಕೇರಿಯ ಚೌಧರಿ ಮ್ಯಾರೇಜ್ ಹಾಲ್‌ನಲ್ಲಿ ನಡೆದಿದ್ದು, ಚಾಮಂಗಂಜ್ ನಿವಾಸಿ ಸಹನಾ ಹಸನ್ ಎಂಬ ಮಹಿಳೆ ಪೊಲೀಸ್ ಅಧಿಕಾರಿಗಳ ಜತೆ ಮದುವೆ ಸಭಾಂಗಣಕ್ಕೆ ಬಂದಿದ್ದಾಳೆ. ವರ ಆಸಿಫ್ ಮೊಹಮ್ಮದ್ ಕಾನೂನುಬದ್ಧವಾಗಿ ವಿಚ್ಛೇದನ ನೀಡದೆ ಎರಡನೇ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದಾನೆ ಎಂದು ಅವರು ದೂರಿದ್ದಾರೆ.

ವಿಡಿಯೊ ನೋಡಿ:



ವೈರಲ್ ಆದ ವಿಡಿಯೊದಲ್ಲಿ ಪೊಲೀಸ್ ಅಧಿಕಾರಿಗಳು ನಿಂತಿರುವಾಗ ಸಹನಾ ಹಸನ್ ವೇದಿಕೆಯಲ್ಲಿದ್ದ ವಧುವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ. ವೇದಿಕೆಯ ಮೇಲಿದ್ದ ವಧುವಿನ ಜತೆಗೆ ಜಗಳವಾಡಿದ್ದು, ʼʼನಾನು ಯಾರು ಎಂದು ನಿನಗೆ ತಿಳಿದಿದೆಯೇ? ನನಗೆ ಈಗಾಗಲೇ ಈತನ ಜತೆ ಮದುವೆಯಾಗಿದ್ದೇನೆ. ನಮಗೆ ಇನ್ನು ವಿಚ್ಛೇದನ ಆಗಿಲ್ಲ. ಈ ಮದುವೆ ನಡೆಯಲು ನಾನು ಬಿಡುವುದಿಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ

ಮಹಿಳೆ ಪ್ರಕಾರ, ಸಹನಾ ಹಸನ್ ಮತ್ತು ಆಸಿಫ್ 2022ರಲ್ಲಿ ಫೇಸ್‌ಬುಕ್ ಮೂಲ ಸಂಪರ್ಕ ಆಗಿ ಪ್ರೇಮ ವಿವಾಹವಾಗಿದ್ದರು. ಅವರ ಸಂಬಂಧಕ್ಕೆ ಎರಡೂ ಕುಟುಂಬಗಳ ಒಪ್ಪಿಗೆ ದೊರೆತಿದ್ದು, ಮದುವೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಗಿತ್ತು. 2024ರಲ್ಲಿ ವೈವಾಹಿಕ ಭಿನ್ನಾಭಿಪ್ರಾಯಗಳು ಬಂದ ಕಾರಣ ಆಸಿಫ್ ವಿರುದ್ಧ ಸಹನಾ ಪ್ರಕರಣ ದಾಖಲಿಸಿದ್ದು ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ.

ಆದರೆ ಆಸಿಫ್ ತನಗೆ ತಿಳಿಸದೆ ಗುಟ್ಟಾಗಿ ಎರಡನೇ ಮದುವೆಯಾಗುತ್ತಿದ್ದಾನೆ ಎಂದು ನೆರೆದಿದ್ದ ಅತಿಥಿಗಳ ಎದುರೇ ಸಹನಾ ಕಿಡಿಕಾರಿದ್ದಾರೆ. ಘರ್ಷಣೆ ನಡೆಯುತ್ತಿದ್ದಂತೆ, ವರನು ಸ್ಥಳದಿಂದ ಹೊರ ಹೋಗಲು ಪ್ರಯತ್ನಿಸಿದ್ದು ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಆಸಿಫ್‌ನನ್ನು ವಿಚಾರಣೆಗಾಗಿ ಹತ್ತಿರದ ಪೊಲೀಸ್ ಹೊರಠಾಣೆಗೆ ಕರೆದೊಯ್ದಿದ್ದಾರೆ.