ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kalaburagi Central Jail: ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಜಾ ಅಪರಾಧಿಗಳು ಎಸ್ಕೇಪ್ ಪ್ರಕರಣ: ಬಸ್‌ನಲ್ಲಿ ಪರಾರಿಯಾಗುತ್ತಿದ್ದ ಕೈದಿ ಹುಮನಾಬಾದ್‌ನಲ್ಲಿ ವಶಕ್ಕೆ!

ಸೋಮವಾರ ಮಧ್ಯರಾತ್ರಿ ಕಲಬುರಗಿ ಜೈಲಿನಿಂದ ಮೂವರು ಕೈದಿಗಳು ನಾಪತ್ತೆಯಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಸಂತೋಷ್, ಕಲಬುರಗಿ ಕಡೆಯಿಂದ ಬೀದರ್ ಕಡೆಗೆ ಹೋಗುತ್ತಿದ್ದ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಬಸ್‌ನಲ್ಲಿ ಪರಾರಿಯಾಗುತ್ತಿದ್ದ ಕೈದಿ ಹುಮನಾಬಾದ್‌ನಲ್ಲಿ ವಶಕ್ಕೆ!

-

Profile
Ashok Nayak Jul 15, 2026 1:58 AM

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಸೋಮವಾರ ಮಧ್ಯರಾತ್ರಿ ಸಿನಿಮಾ ಶೈಲಿಯಲ್ಲಿ ಪರಾರಿಯಾಗಿದ್ದ ಮೂವರು ಅಪರಾಧಿಗಳ ಪೈಕಿ ಓರ್ವನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕಲಬುರಗಿಯಿಂದ ಬಸ್‌ನಲ್ಲಿ ಬೀದರ್ ಕಡೆಗೆ ತಪ್ಪಿಸಿ ಕೊಂಡು ಹೋಗುತ್ತಿದ್ದ ಆರೋಪಿ ಸಂತೋಷ್‌ ನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Kalaburagi Breaking: ಕಲಬುರಗಿ ಜೈಲಿನಿಂದ ಮೂವರು ಕೈದಿಗಳು ಪರಾರಿ: ಗೃಹ ಸಚಿವರ ತವರಿನಲ್ಲೇ ಭದ್ರತಾ ವೈಫಲ್ಯ?

ಆರ್‌ಟಿಓ ಸರ್ಕಲ್ ಬಳಿ ಪೊಲೀಸ್ ಕಾರ್ಯಾಚರಣೆ

ಸೋಮವಾರ ಮಧ್ಯರಾತ್ರಿ ಕಲಬುರಗಿ ಜೈಲಿನಿಂದ ಮೂವರು ಕೈದಿಗಳು ನಾಪತ್ತೆಯಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಸಂತೋಷ್, ಕಲಬುರಗಿ ಕಡೆಯಿಂದ ಬೀದರ್ ಕಡೆಗೆ ಹೋಗುತ್ತಿದ್ದ ಸರ್ಕಾರಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಹುಮನಾಬಾದ್ ಪೊಲೀಸರು, ಹುಮನಾಬಾದ್‌ನ ಆರ್‌ಟಿಓ (RTO) ಸರ್ಕಲ್ ಬಳಿ ಬಸ್ ತಡೆದು ತಪಾಸಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.

Kalaburagi central Jail missin

ಪ್ರಕರಣದ ಹಿನ್ನೆಲೆ: ಯಾರು ಈ ಸಂತೋಷ್?: ಬಂಧಿತ ಆರೋಪಿ ಸಂತೋಷ್ ಬೀದರ್ ಜಿಲ್ಲೆಯ ಸಂತಪೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾ ಲಯದಿಂದ ಶಿಕ್ಷೆಗೆ ಗುರಿಯಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಹುಮನಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ, ಬೀದರ್ ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ಆತನನ್ನು ಕಲಬುರಗಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮುಂದುವರಿದ ಇಬ್ಬರು ಕೈದಿಗಳ ಪತ್ತೆ ಕಾರ್ಯ

ಜೈಲಿನಿಂದ ಪರಾರಿಯಾಗಿರುವ ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡು ಕಾಟ ನಡೆಸುತ್ತಿದ್ದು, ನೆರೆಹೊರೆಯ ಜಿಲ್ಲೆಗಳಲ್ಲೂ ಹೈ-ಅಲರ್ಟ್ ಘೋಷಿಸಲಾಗಿದೆ. ಜೈಲು ಭದ್ರತೆಯ ಲೋಪದೋಷಗಳ ಬಗ್ಗೆಯೂ ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.