2nd PUC Results: ಇಂದು ಮಧ್ಯಾಹ್ನ 3 ಗಂಟೆಗೆ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ, ರಿಸಲ್ಟ್ ಈ ರೀತಿ ಚೆಕ್ ಮಾಡಿ
ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸಂಬಂಧಿತ ಕಾಲೇಜುಗಳಿಗೂ ಸಹ ದಿನಾಂಕ 09-04-2026ರ ಮಧ್ಯಾಹ್ನ 3.00 ಗಂಟೆಗೆ ಫಲಿತಾಂಶ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು. ಕರ್ನಾಟಕ ಒನ್ ಮೊಬೈಲ್ ಆಪ್ (KarnatakaOne Mobile App) ನಲ್ಲಿಯೂ ಇದನ್ನು ಪಡೆಯಬಹುದು.
ಪಿಯುಸಿ ಫಲಿತಾಂಶ -
ಬೆಂಗಳೂರು, ಏ.09: ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆಗೆ ಇಂದು ತೆರೆಬೀಳಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ರ ದ್ವಿತೀಯ ಪಿಯುಸಿ (ಪರೀಕ್ಷೆ-1) ಫಲಿತಾಂಶವನ್ನು (2nd PUC exam result) ಇಂದು (ಏಪ್ರಿಲ್ 9, ಗುರುವಾರ) ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಿದೆ.
ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸಂಬಂಧಿತ ಕಾಲೇಜುಗಳಿಗೂ ಸಹ ದಿನಾಂಕ 09-04-2026ರ ಮಧ್ಯಾಹ್ನ 3.00 ಗಂಟೆಗೆ ಫಲಿತಾಂಶ ಪಟ್ಟಿಯನ್ನು ಲಭ್ಯಗೊಳಿಸಲಾಗುವುದು. ಕರ್ನಾಟಕ ಒನ್ ಮೊಬೈಲ್ ಆಪ್ (KarnatakaOne Mobile App) ನಲ್ಲಿಯೂ ಇದನ್ನು ಪಡೆಯಬಹುದು.
ಈ ವರ್ಷ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಲಭ ಲಭ್ಯವಾಗುವಂತೆ ಮಾಡಲು ಮಂಡಳಿಯು ಹಲವಾರು ತಾಂತ್ರಿಕ ಸುಧಾರಣೆಗಳನ್ನು ತಂದಿದೆ. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಂಡಳಿಯ ವತಿಯಿಂದ ನೇರವಾಗಿ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಫಲಿತಾಂಶದ ಮಾಹಿತಿ ರವಾನೆಯಾಗಲಿದೆ.
ಡಿಜಿಟಲ್ ಅಂಕಪಟ್ಟಿ (DigiLocker): ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಫಲಿತಾಂಶ ಪ್ರಕಟವಾದ ತಕ್ಷಣವೇ ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು ಡಿಜಿಲಾಕರ್ (DigiLocker) ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಧ್ಯಾಹ್ನ 3.00 ಗಂಟೆಯಿಂದ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯವಿರುತ್ತದೆ.
ಅಂಕಪಟ್ಟಿ ಡೌನ್‌ಲೋಡ್ ಹೇಗೆ?:
ವಿದ್ಯಾರ್ಥಿಗಳು www.digilocker.gov.in ಗೆ ಭೇಟಿ ನೀಡಬಹುದು ಅಥವಾ ಮಂಡಳಿ ಒದಗಿಸಿರುವ ಈ ವೀಡಿಯೊ ಲಿಂಕ್ https://tinyurl.com/mw84wmh9 ಬಳಸಿ ಪ್ರಕ್ರಿಯೆಯನ್ನು ತಿಳಿದುಕೊಳ್ಳಬಹುದು.
ಸಹಾಯ ವಿಡಿಯೋ: ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡುವ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಮಂಡಲಿಯು ಈ ವಿಡಿಯೋ ಲಿಂಕ್ ಅನ್ನು ಒದಗಿಸಿದೆ: https://tinyurl.com/mw84wmh9. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೊಳಗಾಗದೆ ಅಧಿಕೃತ ಜಾಲತಾಣಗಳ ಮೂಲಕ ಫಲಿತಾಂಶವನ್ನು ಪಡೆಯುವಂತೆ ಮಂಡಲಿಯ ಅಧ್ಯಕ್ಷರು ಕೋರಿದ್ದಾರೆ.