ಸಿಂಗಲ್ ಪಡೆಯಲು ಡೇವಿಡ್ ಮಿಲ್ಲರ್ ನಿರಾಕರಿಸಿದ್ದೇಕೆ? ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ ಫ್ಯಾನ್ಸ್!
ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ. ಡೇವಿಡ್ ಮಿಲ್ಲರ್ ಒಂದು ರನ್ ಪಡೆಯಲು ನಿರಾಕರಣೆ ಹಾಗೂ ಅಂಪೈರ್ ವಿವಾದಾತ್ಮ ತೀರ್ಪಿನಿಂದ ಅಭಿಮಾನಿಗಳು ಈ ರೀತಿ ಆರೋಪಿಸಿದ್ದಾರೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಕೇವಲ ಒಂದು ರನ್‌ನಿಂದ ಗೆದ್ದು ಬೀಗಿತ್ತು.
ಗುಜರಾತ್ ಜಯಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಂದು ರನ್ ಸೋಲು. -
ನವದೆಹಲಿ: ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC vs GT) ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಅವರು ಕೆಲ ಬಲವಾದ ಕಾರಣಗಳನ್ನೂ ನೀಡಿದ್ದಾರೆ. ಬುಧವಾರ ರಾತ್ರಿ ತೀವ್ರ ರೋಚಕತೆಯಿಂದ ಕೂಡಿದ್ದ ಟೂರ್ನಿಯ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಒಂದು ರನ್‌ನಿಂದ ಸೋಲು ಒಪ್ಪಿಕೊಂಡಿತ್ತು. ಆದರೆ, ಇದನ್ನು ನಂಬಲು ಅಸಾಧ್ಯ. ಏಕೆಂದರೆ ಕೊನೆಯ ಎರಡು ಎಸೆತಗಳಲ್ಲಿ ಡೆಲ್ಲಿಗೆ ಗೆಲ್ಲಲು ಕೇವಲ ಎರಡು ರನ್ ಅಗತ್ಯವಿತ್ತು ಹಾಗೂ ಕ್ರೀಸ್‌ನಲ್ಲಿ ಡೇವಿಡ್ ಮಿಲ್ಲರ್ (David Miller) ಇದ್ದರು. ಆದರೆ, ಮಿಲ್ಲರ್ 5 ಹಾಗೂ 6ನೇ ಎಸೆತಗಳಲ್ಲಿ ದೊಡ್ಡ ಹೊಡೆಗ ಗಳಿಸಿ ಕನಿಷ್ಠ ಎರಡು ರನ್ ಗಳಿಸಲೂ ಅಸಾಧ್ಯವಾಗಲಿಲ್ಲ.
ಗಾಯದ ಹೊರತಾಗಿಯೂ ಕ್ರೀಸ್‌ಗೆ ಬ್ಯಾಟ್ ಮಾಡಲು ಬಂದಿದ್ದ ಡೇವಿಡ್ ಮಿಲ್ಲರ್, ಕೊನೆಯ ಮೂರು ಓವರ್‌ಗಳಲ್ಲಿ45 ರನ್ ಅಗತ್ಯವಿದ್ದಾಗ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಕಗಿಸೊ ರಬಾಡ ಅವರು 18ನೇ ಓವರ್‌ನಲ್ಲಿ ಅತ್ಯುತ್ತಮ ಬೌಲ್ ಮಾಡಿದರು ಹಾಗೂ ಕೊನೆಯ ಎರಡು ಓವರ್‌ಗಳಿಗೆ 36 ರನ್ ಅಗತ್ಯದ ಸಮೀಕರಣವನ್ನು ತಂದರು. ಆದರೆ, 19ನೇ ಓವರ್‌ನಲ್ಲಿ ಸಿರಾಜ್‌ಗೆ ಮಿಲ್ಲರ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದರು. ನಂತರ ವಿಪ್ರಜ್ ನಿಗಮ್ ಅವರು ಕೂಡ ಒಂದು ಬೌಂಡರಿ ಸಿಡಿಸಿದರು. ಅಂತಿಮವಾಗಿ ಡಿಸಿ 19ನೇ ಓವರ್‌ನಲ್ಲಿ 23 ರನ್ ಕಲೆ ಹಾಕಿತು.
ನಂತರ ಕೊನೆಯ ಓವರ್‌ನಲ್ಲಿ 13 ರನ್ ಅಗತ್ಯವಿದ್ದಾಗ ವಿಪ್ರಜ್ ನಿಗಮ್ ಮೊದಲನೇ ಎಸೆತದಲ್ಲಿಯೇ ಬೌಂಡರಿ ಬಾರಿಸಿದರು ಹಾಗೂ ನಾಲ್ಕನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಿದ್ದರು. ನಂತರ ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್ ಬೇಕಿತ್ತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಈ ಪಂದ್ಯವನ್ನು ಗೆಲ್ಲಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಪ್ರಸಿಧ್ ಕೃಷ್ಣ ಒತ್ತಡದ ಸನ್ನಿವೇಶವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಐದನೇ ಎಸೆತದಲ್ಲಿ ಮಿಲ್ಲರ್ ಸುಲಭವಾಗಿ ಸಿಂಗಲ್ ರನ್ ಪಡೆಯಬಹುದಿತ್ತು ಆದರೆ, ಸ್ಟ್ರೈಕ್ ಉಳಿಸಿಕೊಂಡು ಕೊನೆಯ ಎಸೆತದಲ್ಲಿ ಪಂದ್ಯವನ್ನು ಮುಗಿಸಲು ಬಯಸಿದ್ದರು. ಹಾಗಾಗಿ ಕುಲ್ದೀಪ್ ಯಾದವ್‌ಗೆ ಸ್ಟ್ರೈಕ್ ನೀಡಲಿಲ್ಲ. ಅಂತಿಮವಾಗಿ ಕೊನೆಯ ಎಸೆತದಲ್ಲಿ ಮಿಲ್ಲರ್ ಚೆಂಡನ್ನು ಹೊಡೆಯುವಲ್ಲಿ ವಿಫಲರಾಗಿ ಬೈಸ್ ರೂಪದಲ್ಲಿ ಒಂದು ರನ್ ಪಡೆಯಲು ಪ್ರಯತ್ನಿಸಿದರೂ ಕುಲ್ದೀಪ್, ರನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡೆಲ್ಲಿ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿತು.
Hey DC fans look at this, it was clearly a six but the umpire gave four without any proper explanation. That cost you 2 points@IPL @StarSportsIndia @JioHotstar @DelhiCapitals
— Towsif Jaman ❁ (@sifan_2803) April 8, 2026
David Milar
Axar Pate
subhman Gill
Buttler
DC vs GT IPL 2026 pic.twitter.com/pAmScAsftD
ಸೋಶಿಯಲ್ ಮೀಡಿಯಾದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ
ಡೇವಿಡ್ ಮಿಲ್ಲರ್ ಅವರ ಸಿಂಗಲ್ ರನ್ ನಿರಾಕರಣೆ ಸ್ಪಷ್ಟವಾದ ತಪ್ಪು ನಿರ್ಧಾರವೆಂದು ಕ್ರಿಕೆಟ್ ವಿಶ್ಲೇಷಕರು ಟೀಕಿಸಿದರೂ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಬೇರೆ ತರ್ಕವೊಂದನ್ನು ಮುಂದಿಟ್ಟಿದ್ದಾರೆ ಮತ್ತು ಇಲ್ಲಿ ಮ್ಯಾಚ್ ಫಿಕ್ಸ್ ಆಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಮಿಲ್ಲರ್ ಅವರ ಆ ನಿರ್ಧಾರದ ಜೊತೆಗೆ, ಅವರ ಒಂದು ಶಾಟ್ ಬೌಂಡರಿಯ ಬಳಿ ಬಿದ್ದರೂ ಅದನ್ನು ಫೋರ್ ಎಂದು ನೀಡಲಾಗಿದೆ ಮತ್ತು ಅದರ ರಿಪ್ಲೇಗಳನ್ನು ತೋರಿಸಲಿಲ್ಲ ಎಂಬ ವಿಷಯವನ್ನೂ ಕೆಲವರು ಉಲ್ಲೇಖಿಸಿದ್ದಾರೆ.