Mahakumbh 2025: ಮಹಾಕುಂಭ ಮೇಳದಲ್ಲಿ ನಡೀತು ವಿದೇಶಿ ಯುವತಿಯ ಜೊತೆ ಭಾರತೀಯ ಯುವಕನ ವಿವಾಹ!
ಉತ್ತರ ಪ್ರದೇಶದ ಮಹಾಕುಂಭ ಮೇಳದಲ್ಲಿ ಹಲವಾರು ವಿಶೇಷತೆಗಳು ನಡೆಯುತ್ತಿವೆ. ವಿದೇಶಿ ಯುವತಿಯೊಬ್ಬಳು ಮಹಾಕುಂಭ ಮೇಳದಲ್ಲಿ ಭಾರತೀಯ ಯುವಕನನ್ನು ವರಿಸಿದ್ದಾಳೆ. ಸದ್ಯ ಈ ಸುದ್ದಿ ಎಲ್ಲಡೆ ವೈರಲ್ ಆಗುತ್ತಿದೆ.

Viral News Of Mahakumbh

ಲಖನೌ: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ (Mahakumbha) ನಡೆಯುತ್ತಿದೆ. ಕೋಟ್ಯಾಂತರ ಭಕ್ತರು ಮಹಾಕುಂಭ ಮೇಳಕ್ಕೆ ಆಗಮಿಸುತ್ತಿದ್ದಾರೆ. ಪ್ರಯಾಗರಾಜ್ ಹಲವು ವಿಶಿಷ್ಟಗಳಿಗೆ ಸಾಕ್ಷಿಯಾಗುತ್ತದೆ. ಇದೀಗ ಗ್ರೀಕ್ ಯುವತಿಯೊಬ್ಬಳು ಮಹಾಕುಂಭ ಮೇಳದಲ್ಲಿ ಭಾರತೀಯ ಯುವಕನನ್ನು ವರಿಸಿದ್ದಾಳೆ. ಗ್ರೀಕ್‌ನ ಪೆನೆಲೋಪ್ ಹಾಗೂ ಸಿದ್ಧಾರ್ಥ್ ವಿವಾಹವಾಗಿದ್ದಾರೆ. (Viral News) ಈ ಮದುವೆ ಜುನಾ ಅಖಾರದ ಮಹಾಮಂಡಲೇಶ್ವರ ಸ್ವಾಮಿ ಯತೀಂದ್ರಾನಂದ ಗಿರಿ ಸಮ್ಮುಖದಲ್ಲಿ ನಡೆದಿದೆ.
ಪೆನೆಲೋಪ್ ಕೆಲ ವರ್ಷಗಳ ಹಿಂದೆ ಸನಾತನ ಧರ್ಮಕ್ಕೆ ಸೇರ್ಪಡೆಗೊಂಡಿದ್ದಳು. ಆಕೆ ಶಿವನ ಭಕ್ತೆಯಾಗಿದ್ದು, ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸಿದ್ಧಾರ್ಥ್ ಕೂಡ ಆಧ್ಯಾತ್ಮ ಹಾಗೂ ಯೋಗದಲ್ಲಿ ಆಸಕ್ತಿ ಹೊಂದಿದ್ದರು. ಇದೀಗ ಇವರಿಬ್ಬರೂ ವಿವಾಹವಾಗಿದ್ದಾರೆ. ಮದುವೆಯ ಸಂದರ್ಭದಲ್ಲಿ ವಧುವಿನ ತಾಯಿ ಸೇರಿದಂತೆ ಹಲವಾರು ಸಂಬಂಧಿಕರು ಉಪಸ್ಥಿತರಿದ್ದರು.
ಈ ಬಗ್ಗೆ ಮಾತನಾಡಿದ ಯುವತಿ ಈ ಅನುಭವವನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ಮಹಾಕುಂಭ ಮೇಳದಲ್ಲಿ ನಮ್ಮ ಮದುವೆಯಾಗಿರುವುದು ತುಂಬಾ ವಿಶೇಷವಾಗಿದೆ.ನಾನು ಎಂದಿಗೂ ಭಾರತೀಯ ವಿವಾಹದಲ್ಲಿ ಪಾಲ್ಗೊಂಡಿರಲಿಲ್ಲ. ಇಂದು ನಾನೇ ವಧುವಾಗಿದ್ದೇನೆ. ಸನಾತನ ಸಂಪ್ರದಾಯದಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದು ಹೇಳಿದ್ದಾಳೆ.
ಈ ಸುದ್ದಿಯನ್ನೂ ಓದಿ : Viral News: ಮಹಾಕುಂಭ ಮೇಳಕ್ಕೆ ಹೋಗಲು ದರೋಡೆ ಮಾಡಿ ಪೊಲೀಸರ ಅತಿಥಿಯಾದ ಭೂಪ!
ವರ ಸಿದ್ಧಾರ್ಥ್ ಮಾತನಾಡಿ , ನಾನು ಈ ರೀತಿಯಲ್ಲಿ ವಿವಾಹವಾಗುತ್ತೇನೆ ಎಂದು ಭಾವಿಸಿರಲಿಲ್ಲ. ಇದೊಂದು ಪುಣ್ಯ ಸ್ಥಳವಾಗಿದ್ದು, ಎಲ್ಲಾ ದೇವರ ಆಶೀರ್ವಾದವನ್ನು ನಾವು ಪಡೆಯುತ್ತೇವೆ ಎಂದು ಹೇಳಿದ್ದಾರೆ. ದಂಪತಿಗಳು ಮೇಳ ಮುಗಿಯುವವರೆಗೂ ಪ್ರಯಾಗ್ ರಾಜ್‌ನಲ್ಲಿ ಇರಲು ನಿರ್ಧರಿಸಿದ್ದಾರೆ ಮತ್ತು ಅವರು ಜನವರಿ 29 ರಂದು ಪವಿತ್ರ ಸ್ನಾನ ಮಾಡುವುದಾಗಿ ತಿಳಿಸಿದ್ದಾರೆ.