ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lifestyle Interview: ಮೇರುನಟ ಡಾ. ರಾಜ್‌ಕುಮಾರ್‌ರಿಂದ ಪ್ರಶಂಸೆ ಗಳಿಸಿದ್ದ ಸಬೀಹಾ ಬಾನು

Lifestyle Interview: ಮೇಡಂ ಸಬೀಹಾ ಬಾನು ದೂರದರ್ಶನದಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿ ನ್ಯೂಸ್‌ ಓದುತ್ತಿದ್ದರೇ, ಸ್ವತಃ ಡಾ. ರಾಜ್‌ಕುಮಾರ್‌ ಅವರು ಅತ್ತಿತ್ತ ಹೋಗದೇ ಒಂದೆಡೆ ಕುಳಿತು ಟಿವಿ ನೋಡುತ್ತಿದ್ದರಂತೆ. ಅಷ್ಟ್ಯಾಕೆ! ಇವರ ಔಟ್‌ಲುಕ್‌ ಅನ್ನು ಹಲವು ಮಾನಿನಿಯರು ಫಾಲೋ ಮಾಡುತ್ತಿದ್ದರಂತೆ. ಆ ಮಟ್ಟಿಗೆ ಖ್ಯಾತಿಗಳಿಸಿದ್ದ ಇವರನ್ನು ವಿಶ್ವವಾಣಿ ನ್ಯೂಸ್‌ ಮಾತನಾಡಿಸಿದಾಗ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.

ಮೇರುನಟ ಡಾ. ರಾಜ್‌ಕುಮಾರ್‌ರಿಂದ ಪ್ರಶಂಸೆ ಗಳಿಸಿದ್ದ ಸಬೀಹಾ ಬಾನು

ಚಿತ್ರಗಳು: ಸಬೀಹಾ ಬಾನು, ಹಿರಿಯ ಸುದ್ದಿವಾಚಕರು, ಚಂದನಾ

ಸಂದರ್ಶನ: ಶೀಲಾ ಸಿ. ಶೆಟ್ಟಿ

ಅಂದು ದೂರದರ್ಶನದಲ್ಲಿ ಸಬೀಹಾ ಬಾನು ಮೇಡಂ ಸುದ್ದಿ ಓದುತ್ತಿದ್ದಾರೆಂದರೇ, ಇಡೀ ಕುಟುಂಬವರ್ಗವೇ ನೋಡುತ್ತಾ ಕುಳಿತಿರುತ್ತಿತ್ತಂತೆ. ಸಾಹಿತಿಗಳು, ಲೇಖಕರು, ನಟ-ನಟಿಯರೆನ್ನದೇ ಬಹುತೇಕರು ಇವರ ಸುದ್ದಿ ವಾಚನಕ್ಕೆ ಕಾಯುತ್ತಿದ್ದರಂತೆ. ಅಷ್ಟ್ಯಾಕೆ ! ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಅವರು ಕೂಡ ಇವರ ಸುದ್ದಿವಾಚನಕ್ಕೆ ಅಭಿಮಾನಿಯಾಗಿದ್ದರಂತೆ. ಟಿವಿಯಲ್ಲಿ ಇವರ ನ್ಯೂಸ್‌ ಆರಂಭವಾಯಿತೆಂದರೇ, ನೋಡುತ್ತಾ ಕುಳಿತು ಬಿಡುತ್ತಿದ್ದರಂತೆ. ಆ ಮಟ್ಟಿಗೆ ಇವರ ನ್ಯೂಸ್‌ ಟೈಮ್‌ ಪ್ರೈಮ್‌ ಟೈಮ್‌ ಆಗಿತ್ತಂತೆ. ಇನ್ನು, ಸಬೀಹಾ ಬಾನು ಅವರ ಸಿಂಪಲ್‌ ಸೀರೆಯ ಸೆರಗಿನ ಪ್ಲೀಟಿಂಗ್‌ ಕೂಡ ಅಂದು ಸಾಕಷ್ಟು ಟ್ರೆಂಡಿಯಾಗಿತ್ತು. ನ್ಯೂಸ್‌ ರೀಡರ್ಸ್‌ ಸೀರೆ ಪ್ಲೀಟಿಂಗ್‌ ಸ್ಟೈಲ್‌ ಎಂದೇ ಹೇಳಲಾಗುತ್ತಿತ್ತು. ಅಷ್ಟರ ಮಟ್ಟಿಗೆ ಆ ಜಮಾನದಲ್ಲಿ ಖ್ಯಾತಿ ಗಳಿಸಿದ್ದ ಸಬೀಹಾ ಬಾನು ಅವರು ಪ್ರೆಸ್‌ಕ್ಲಬ್‌ ಸಮಾರಂಭವೊಂದಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ವಿಶ್ವವಾಣಿಗೆ ನೀಡಿದ ಚುಟುಕಾದ ಸಂದರ್ಶನದಲ್ಲಿ ತಮ್ಮ ಲೈಫ್‌ಸ್ಟೈಲ್‌, ಫ್ಯಾಷನ್‌- ಓಲ್ಡ್‌ ಫ್ಯಾಷನ್‌ (Lifestyle Interview) ಬಗ್ಗೆ ಹಂಚಿಕೊಂಡರು.

1

ವಿಶ್ವವಾಣಿ ನ್ಯೂಸ್‌: ನಿಮಗೆ ಇದುವರೆಗೂ ಸಿಕ್ಕ ಬೆಸ್ಟ್‌ ಕಾಂಪ್ಲಿಮೆಂಟ್‌ ಏನು ?

ಸಬೀಹಾ ಬಾನು: ಮೇರುನಟ ಡಾ. ರಾಜ್‌ಕುಮಾರ್‌ ಅವರು ದೂರದರ್ಶನದಲ್ಲಿ ತಪ್ಪದೇ ನನ್ನ ಸುದ್ದಿವಾಚನವನ್ನು ನೋಡುತ್ತಿದ್ದರಂತೆ. ಅಲ್ಲದೇ, ಶಬ್ದವೇದಿ ಸಿನಿಮಾದಲ್ಲಿ ನನ್ನದೊಂದು ನ್ಯೂಸ್‌ ಓದುವ ಝಲಕ್‌ ಇತ್ತು. ನನ್ನ ಸ್ಪಷ್ಟ ಉಚ್ಛಾರಣೆಗೆ ಬೆಸ್ಟ್‌ ಕಾಂಪ್ಲಿಮೆಂಟ್‌ ನೀಡಿದ್ದರು.

ವಿಶ್ವವಾಣಿ ನ್ಯೂಸ್‌: ಅಂದು ಪ್ರತಿದಿನ ಸೀರೆ ಉಟ್ಟು ನ್ಯೂಸ್‌ ಓದುತ್ತಿದ್ದೀರಿ? ಅನುಭವ ಹೇಗಿತ್ತು ?

ಸಬೀಹಾ ಬಾನು: ಹೌದು. ದೂರದರ್ಶನದಲ್ಲಿ ಆರಂಭದಲ್ಲಿ ಬ್ಲ್ಯಾಕ್‌ & ವೈಟ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೆವು. ಕಲರ್‌ಗೆ ಬದಲಾದ ನಂತರ ಸುದ್ದಿವಾಚಕರಿಗೆಲ್ಲಾ ಖುಷಿಯೋ ಖುಷಿ! ಅದರಲ್ಲೂ ನನಗೆ ನಾನು ಉಡುವ ಕಾಟನ್‌ಸೀರೆ, ಕಲರ್‌ಫುಲ್‌ ಆಗಿ ಕಾಣಿಸುತ್ತದಲ್ಲ ಎಂಬ ಸಂತೋಷ ಹೆಚ್ಚಿತ್ತು.

ವಿಶ್ವವಾಣಿ ನ್ಯೂಸ್‌: ನಿಮ್ಮ ಸಿಂಪಲ್‌ ಯೂನಿಕ್‌ ಫ್ಯಾಷನ್‌ನಲ್ಲಿ ಏನಿದೆ?

ಸಬೀಹಾ ಬಾನು: ಸಿಂಪಲ್‌ ಆಗಿ ಎಲಿಗೆಂಟ್‌ ಆಗಿ ಕಾಣಿಸುವ ಮೈಸೂರ್‌ ಸಿಲ್ಕ್‌ ಸೀರೆ. ಅದನ್ನು ಉಡುವುದೆಂದರೆ ನನಗಿಷ್ಟ.

2

ವಿಶ್ವವಾಣಿ ನ್ಯೂಸ್‌: ನ್ಯೂಸ್‌ ರೀಡರ್ಸ್‌ ಉಡುವ ಸೀರೆಯ ಸೆರಗಿನ ಪ್ಲೀಟಿಂಗ್‌ ವಿನ್ಯಾಸಕ್ಕೆ ಅದೇ ಹೆಸರಿನಿಂದಲೇ ಹಲವೆಡೆ ಕರೆಯಲಾಗುತ್ತದೆ. ಈ ಬಗ್ಗೆ ಹೇಳಿ?

ಸಬೀಹಾ ಬಾನು: ಅಂದು ನ್ಯೂಸ್‌ ರೀಡರ್ಸ್‌ ಅಚ್ಚುಕಟ್ಟಾಗಿ ಸೀರೆಯುಟ್ಟು ನ್ಯೂಸ್‌ ಓದುವ ರಿವಾಜು ದೂರದರ್ಶನದಲ್ಲಿತ್ತು. ಅದು ಟ್ರೆಂಡಿಯಾಗಿತ್ತು ಕೂಡ. ಮಾನಿನಿಯರು ಆ ಸೆರಗಿನ ವಿನ್ಯಾಸಕ್ಕೆ ನ್ಯೂಸ್‌ ರೀಡರ್ಸ್‌ ಸ್ಯಾರಿ ಪ್ಲೀಟಿಂಗ್‌ ಎಂದು ಹೇಳುತ್ತಿದ್ದರು. ಈಗಲೂ ಕೆಲವರು ಹಾಗೆಯೇ ಹೇಳುತ್ತಾರೆ. ಕೇಳಿದಾಗ ಖುಷಿಯಾಗುತ್ತದೆ.

ವಿಶ್ವವಾಣಿ ನ್ಯೂಸ್‌: ಅಂದಿಗೂ ಇಂದಿಗೂ ಟಿವಿ ನ್ಯೂಸ್‌ ರಿಡರ್ಸ್‌ ಬಾಡಿ ಲಾಗ್ವೆಂಜ್‌, ರೀಡಿಂಗ್‌ ಸ್ಟೈಲ್‌ & ಡ್ರೆಸ್‌ಕೋಡ್‌ ಬದಲಾಗಿರುವ ಬಗ್ಗೆ ನೀವು ಹೇಳುವುದೇನು?

ಸಬೀಹಾ ಬಾನು: ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಿದೆ. ಡ್ರೆಸ್‌ಕೋಡ್‌ & ಸ್ಟೈಲಿಂಗ್‌ ಫ್ಯಾಷನ್‌ ಇಂದಿನ ಜನರೇಷನ್‌ಗೆ ತಕ್ಕಂತೆ ಬದಲಾಗಿರುವುದು ತಪ್ಪಲ್ಲ! ಆದರೆ, ಕಿರುಚುತ್ತಾ ಸುದ್ದಿ ಓದುವುದು, ಖುಷಿ-ದುಃಖ ಎಲ್ಲವಕ್ಕೂ ಒಂದೇ ವಾಯ್ಸ್‌ನಲ್ಲಿ ಓದುವುದು, ವ್ಯಾಕರಣದ ತಪ್ಪು ಉಚ್ಛಾರಣೆ ಇಂದು ಹೆಚ್ಚಾಗಿದೆ. ಅದು ಬದಲಾಗಬೇಕಿದೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Holiday Fashion: ಸಮ್ಮರ್‌ ಹಾಲಿಡೇ ಫ್ಯಾಷನ್‌ಗೆ ಇಲ್ಲಿವೆ 5 ಕೂಲ್‌ ಐಡಿಯಾ