ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಸಿಂಪಲ್‌ʼ ಸುನಿಯ 'ದೇವರು ರುಜು ಮಾಡಿದನು' ಚಿತ್ರಕ್ಕಾಗಿ ಭರ್ಜರಿ ಸ್ಟೆಪ್‌ ಹಾಕಿದ ʻಟಗರುʼ ಖ್ಯಾತಿಯ ಅಂಥೋನಿ ದಾಸನ್; ರಿಲೀಸ್‌ ಆಯ್ತು ಸಖತ್‌ ಸಾಂಗ್

Devaru Ruju Madidanu Movie: 'ದೇವರು ರುಜು ಮಾಡಿದನು' ಚಿತ್ರದ 'ಹ್ಯಾಪಿ ಬರ್ತಡೇ' ಪ್ರಮೋಷನಲ್ ಸಾಂಗ್ ಬಿಡುಗಡೆಯಾಗಿದೆ. ಸಿಂಪಲ್‌ ಸುನಿ ನಿರ್ದೇಶನದ ಈ ಮ್ಯೂಸಿಕಲ್ ಜರ್ನಿ ಸಿನಿಮಾದಲ್ಲಿ ರಂಗಭೂಮಿ ಕಲಾವಿದ ವಿರಾಜ್ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ʻಟಗರು ಬಂತು ಟಗರುʼ ಖ್ಯಾತಿಯ ಅಂಥೋನಿ ದಾಸನ್ ಈ ಹಾಡನ್ನು ಹಾಡಿರುವುದು ವಿಶೇಷ.

'ದೇವರು ರುಜು ಮಾಡಿದನು' ಚಿತ್ರದ ಹಾಡಿಗೆ ಧ್ವನಿಯಾದ ಅಂಥೋನಿ ದಾಸನ್

-

Avinash GR
Avinash GR Dec 14, 2025 7:59 PM

ಈಚೆಗಷ್ಟೇ ತೆರೆಕಂಡ ʻಗತವೈಭವʼ ಸಿನಿಮಾದ ನಂತರ ನಿರ್ದೇಶಕ ಸಿಂಪಲ್‌ ಸುನಿ ಈಗ ʻದೇವರು ರುಜು ಮಾಡಿದನುʼ ಚಿತ್ರ ಕೈಗೆತ್ತಿಗೊಂಡಿದ್ದಾರೆ. ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದ ವಿರಾಜ್ ಹೀರೋ ಆಗಿ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡುತ್ತಿದ್ದಾರೆ. ಶೀರ್ಷಿಕೆ ಮೂಲಕ ಕುತೂಹಲ ಹೆಚ್ಚಿಸಿರುವ ʻದೇವರು ರುಜು ಮಾಡಿದನುʼ ಸಿನಿಮಾದ ಪ್ರಮೋಷನಲ್ ಸಾಂಗ್ ಅನ್ನು ಬಿಡುಗಡೆ ಮಾಡಲಾಗಿದೆ.

ʻದೇವರು ರುಜು ಮಾಡಿದನುʼ ಸಿನಿಮಾದ ಹ್ಯಾಪಿ ಬರ್ತಡೇ ಹಾಡು ರಿಲೀಸ್ ಮಾಡಲಾಗಿದೆ. ಈ ಹಾಡನ್ನು ಟಗರು ಬಂತು ಟಗರು ಖ್ಯಾತಿಯ ಗಾಯಕ ಅಂಥೋನಿ ದಾಸ್ ಅವರು ಹಾಡಿರುವುದು ವಿಶೇಷ. ಅಷ್ಟೇ ಅಲ್ಲದೆ, ಈ ಪ್ರಮೋಷನಲ್‌ ಸಾಂಗ್‌ನಲ್ಲಿ ಅಂಥೋನಿ ದಾಸನ್ ಕೂಡ ಕಾಣಿಸಿಕೊಂಡಿದ್ದಾರೆ. ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋವಿಂದ್ ರಾಜ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.

Moda Kavida Vatavarana: ಸಿಂಪಲ್‌ ಸುನಿ ಹೊಸ ಸಿನಿಮಾ ಘೋಷಣೆ; ‘ಮೋಡ ಕವಿದ ವಾತಾವರಣಕ್ಕೆ ಹೀರೋ ಆದ ಶೀಲಮ್

ಸಿಂಪಲ್ ಸುನಿ ಏನಂದ್ರು

"ನನ್ನ ಮುಂದಿನ ದೇವರು ರುಜು ಮಾಡಿದನು ಒಂದು ಮ್ಯೂಸಿಕಲ್ ಜರ್ನಿ ಸಿನಿಮಾ. ಈ ಚಿತ್ರದಲ್ಲಿ ಒಟ್ಟು 12 ಹಾಡುಗಳು ಇದ್ದಾವೆ. ವಿರಾಜ್ ಅದ್ಭುತ ಡ್ಯಾನ್ಸರ್. ಈ ಹಾಡಿನಲ್ಲಿ ಮಸ್ತಾಗಿ ಡ್ಯಾನ್ಸ್‌ ಮಾಡಿದ್ದಾರೆ. ಈ ಹಾಡನ್ನು ಹಾಡಿದ್ದಕ್ಕಾಗಿ ನಾನು ಆಂಥೋನಿ ಸರ್‌ಗೆ ಋಣಿಯಾಗಿರುತ್ತೇನೆ. ಈ ಹಾಡನ್ನು ಪ್ರಮೋಷನ್ ಮಾಡಲು ಅವರು ಬೆಂಗಳೂರಿಗೆ ಬಂದಿದ್ದಾರೆ. ಹಾಗಾಗಿ ನಮಗೂ ಖುಷಿಯಾಗಿದೆ. ಇದಕ್ಕೆ ಹೇಳುವುದು ಸಿನಿಮಾ ದೊಡ್ಡದು ಅಂತ. ನಾಗಾರ್ಜುನ್ ಶರ್ಮಾ ಅವರು‌ ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ. ಈ ಚಿತ್ರದ ನಾಯಕಿ ಕೀರ್ತಿ ಕೃಷ್ಣ ಅವರು ಅದ್ಭುತ ನಟಿ. ಉತ್ತಮ ಕಲಾವಿದರ ತಂಡ ನಮ್ಮ ಚಿತ್ರದಲ್ಲಿ ಇದೆ" ಎನ್ನುತ್ತಾರೆ ಸಿಂಪಲ್‌ ಸುನಿ.

Gathavaibhava Movie: ತೆರೆಮೇಲೆ ಮತ್ತೊಮ್ಮೆ ಸಿಂಪಲ್‌ ಸುನಿ 'ಗತವೈಭವ'

ಹೀರೋ ವಿರಾಜ್‌ ಹೇಳಿದ್ದೇನು?

"ಸಿನಿಮಾ ಅನ್ನೋದು ಕನಸು, ದಾರಿ,‌ ಜೀವನ. ಚಿಕ್ಕ ವಯಸ್ಸಿನಿಂದ ನಾನು ಇದನ್ನೇ ಅಂದುಕೊಂಡು ಬಂದಿದ್ದೇನೆ. ಈಗ ಅದನ್ನೇ ಫಾಲೋ ಮಾಡುತ್ತಿದ್ದೇನೆ. ನಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ಆಗುವುದಿಲ್ಲ. ಬೇರೆಯದ್ದೇ ಆಗುತ್ತದೆ. ಇದನ್ನು ದೇವರು ರುಜು ಮಾಡಿರುತ್ತಾನೆ. ಹ್ಯಾಪಿ ಬರ್ತಡೇ ಹಾಡಿಗೆ ಮಾಸ್ ರೂಪ ಕೊಟ್ಟಿದ್ದೇವೆ. ಇದು ಎಲ್ಲರ ಹುಟ್ಟುಹಬ್ಬಕ್ಕೆ ಬೇಕಾಗುವ ಹಾಡು. ಇದನ್ನು ಹೊರತುಪಡಿಸಿ ಇನ್ನೂ ಬಹಳ ಅದ್ಭುತ ಹಾಡುಗಳು ನಮ್ಮ ಚಿತ್ರದಲ್ಲಿವೆ" ಎನ್ನುತ್ತಾರೆ ವಿರಾಜ್.

ಈ ರಿಲೀಸ್‌ ಆಗಿರುವ ಹ್ಯಾಪಿ ಬರ್ತ್‌ಡೇ ಸಾಂಗ್‌ಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಥೋನಿ ದಾಸನ್ ಜೊತೆಗೆ ವಿರಾಜ್ ಕೂಡ ಹ್ಯಾಪಿ ಬರ್ತಡೇ ಗೀತೆಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ʻದೇವರು ರುಜು ಮಾಡಿದನುʼ ಚಿತ್ರದಲ್ಲಿ ವಿರಾಜ್‌ಗೆ ಜೋಡಿಯಾಗಿ ಕೀರ್ತಿ ಕೃಷ್ಣ ಹಾಗೂ ದ್ವಿತಾ ರೈ ಅಭಿನಯಿಸುತ್ತಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ನಿರ್ದೇಶನ ಎಲ್ಲವನ್ನೂ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ ಸಿಂಪಲ್ ಸುನಿ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಚಿತ್ರಕ್ಕಿದೆ.