ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದುವೆಯಾಗಿ ಮಕ್ಕಳಿದ್ರೂ ಅನೈತಿಕ ಸಂಬಂಧ; ರೈಲಿಗೆ ತಲೆಕೊಟ್ಟು ಪ್ರಿಯಕರನ ಜತೆ ವಿವಾಹಿತೆ ಆತ್ಮಹತ್ಯೆ

Mandya News: ಮಂಡ್ಯ ಹೊರವಲಯದಲ್ಲಿ ವಿವಾಹಿತೆ ಹಾಗೂ ಆಕೆಯ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಮತ್ತೊಬ್ಬ ಯುವಕನ ಜತೆ ಶುರುವಾದ ಅಕ್ರಮ ಸಂಬಂಧ ಕೊನೆಗೆ ದುರಂತ ಅಂತ್ಯ ಕಂಡಿದೆ. ತನ್ನ ಪ್ರಿಯಕರನೊಂದಿಗೆ ಯುವತಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ.

ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಪ್ರಿಯಕರನ ಜತೆ ವಿವಾಹಿತೆ ಆತ್ಮಹತ್ಯೆ

-

Prabhakara R
Prabhakara R Nov 6, 2026 5:17 PM

ಮಂಡ್ಯ: ಚಲಿಸುತ್ತಿದ ರೈಲಿಗೆ ತಲೆಕೊಟ್ಟು ವಿವಾಹಿತ ಮಹಿಳೆ ಹಾಗೂ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ (Mandya) ನಗರದ ಹೊರವಲಯದಲ್ಲಿರುವ ವಿಸಿ ಫಾರಂ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಸಹನಾ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ.

8 ವರ್ಷಗಳ ಹಿಂದೆ ವಿರೇಶ್ ಎಂಬ ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಸಹನಾ (25) ಅವರಿಗೆ 6 ವರ್ಷದ ಹೆಣ್ಣು ಮಗು ಹಾಗೂ 2 ವರ್ಷದ ಗಂಡು ಮಗುವಿದೆ. ಆದರೂ ಅವರು ವಾಸವಿದ್ದ ಬಿಲ್ಡಿಂಗ್‌ನಲ್ಲೇ ಇದ್ದ ಯುವಕ ರಾಹುಲ್ (23) ಜತೆಗಿನ ಅಕ್ರಮ ಸಂಬಂಧ ಈ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಮೂಲತಃ ಮಂಡ್ಯ ಜಿಲ್ಲೆಯ ಗುನ್ನಾಯಕನಹಳ್ಳಿಯ ನಿವಾಸಿಯಾದ ಸಹನಾ ಎಂಬಾಕೆ, ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು. ಈ ನಡುವೆ ತಾವಿದ್ದ ಬಾಡಿಗೆ ಮನೆಯ ಮೇಲ್ಭಾಗದಲ್ಲಿದ್ದ ರಾಹುಲ್ ಎಂಬ ಯುವಕನೊಂದಿಗೆ ಈಕೆಗೆ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು.

ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ಬುದ್ಧಿ ಹೇಳಿದ್ದರೂ ಸಹನಾ, ರಾಹುಲ್ ಸಹವಾಸ ಬಿಟ್ಟಿರಲಿಲ್ಲ. ಕಳೆದ ಸೋಮವಾರವೂ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ತೀವ್ರ ಜಗಳವಾಗಿದ್ದು, ನಾನು ರಾಹುಲ್ ಜತೆಯೇ ಬಾಳುತ್ತೇನೆ ಎಂದಿದ್ದ ಸಹನಾಗೆ, "ನಿಮ್ಮಿಬ್ಬರನ್ನು ಬಾಳಲು ಬಿಡಲ್ಲ" ಎಂದು ಗಂಡ ವಿರೇಶ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಗಂಡನ ಬೆದರಿಕೆ ಬಳಿಕ ಮಂಗಳವಾರ ಬೆಂಗಳೂರಿನ ಮನೆಯಿಂದ ಹೊರಟಿದ್ದ ಸಹನಾ, ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದು ತಂಗಿದ್ದಳು ಎನ್ನಲಾಗಿದೆ. ಗುರುವಾರ ಮಂಡ್ಯದ ಗುನ್ನಾಯಕನಹಳ್ಳಿಗೆ ಬಂದಿದ್ದ ರಾಹುಲ್, ಸಹನಾಳನ್ನು ಪಿಕ್ ಮಾಡಿಕೊಂಡು ಗಂಡ ವಿರೇಶ್ ವಿರುದ್ಧ ದೂರು ನೀಡಲು ಇಬ್ಬರೂ ತೀರ್ಮಾನಿಸಿದ್ದರು. ಆದರೆ "ಗಂಡ ವಿರೇಶ್ ನಮ್ಮನ್ನು ನೆಮ್ಮದಿಯಿಂದ ಬಾಳಲು ಬಿಡುವುದಿಲ್ಲ" ಎಂದು ತೀವ್ರ ಮನನೊಂದ ಪ್ರೇಮಿಗಳು ಅಂತಿಮವಾಗಿ ಪ್ರಾಣ ಬಿಡಲು ನಿರ್ಧರಿಸಿದ್ದರು.

ಹೊಸೂರಿನಲ್ಲಿ ಕಟ್ಟಡ ಕಾಮಗಾರಿ ವೇಳೆ ದುರಂತ: ಮೂವರು ಕಾರ್ಮಿಕರು ಸಾವು, ನಾಲ್ವರಿಗೆ ಗಂಭೀರ ಗಾಯ

ಇಂದು ಬೆಳಿಗ್ಗೆ ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಚಲಿಸುವ ರೈಲಿಗೆ ಇಬ್ಬರೂ ತಲೆಕೊಟ್ಟು ಭೀಕರವಾಗಿ ಸಾವಿಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೆ ಪೊಲೀಸರು ಸ್ಥಳದಲ್ಲಿದ್ದ ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.