ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೈಸೂರಿನ ಪ್ರೀತಿಗೆ ಮನಸೋತ ಪ್ರಧಾನಿ ಮೋದಿ: "ನಿಮ್ಮ ಆತಿಥ್ಯ ಅದ್ಭುತವಾಗಿತ್ತು" ಎಂದು ಕನ್ನಡದಲ್ಲೇ ಧನ್ಯವಾದ

ಶುಕ್ರವಾರ ಕರ್ನಾಟಕ ಪ್ರವಾಸದಲ್ಲಿದ್ದ ನರೇಂದ್ರ ಮೋದಿ, ಮೈಸೂರಿನಲ್ಲಿ ದೊರೆತ ಆತ್ಮೀಯ ಹಾಗೂ ಅದ್ಧೂರಿ ಸ್ವಾಗತಕ್ಕೆ ಧನ್ಯವಾದ ತಿಳಿಸಿದ್ದಾರೆ. ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೆ ನಗರದಾದ್ಯಂತ ಭರ್ಜರಿ ರೋಡ್ ಶೋ ಮತ್ತು ಅಭೂತಪೂರ್ವ ಸ್ವಾಗತ ಕೋರಲಾಗಿತ್ತು.

ಮೈಸೂರಿನ ಪ್ರೀತಿಗೆ ಮನಸೋತ ಪ್ರಧಾನಿ ಮೋದಿ; ಹೇಳಿದ್ದೇನು?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 14, 2026 2:01 PM

ನವದೆಹಲಿ: ಶುಕ್ರವಾರ ಕರ್ನಾಟಕ ಪ್ರವಾಸದಲ್ಲಿದ್ದ ನರೇಂದ್ರ ಮೋದಿ, (Narendra Modi) ಮೈಸೂರಿನಲ್ಲಿ (Myosre) ದೊರೆತ ಆತ್ಮೀಯ ಹಾಗೂ ಅದ್ಧೂರಿ ಸ್ವಾಗತಕ್ಕೆ ಧನ್ಯವಾದ ತಿಳಿಸಿದ್ದಾರೆ. ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೆ ನಗರದಾದ್ಯಂತ ಭರ್ಜರಿ ರೋಡ್ ಶೋ ಮತ್ತು ಅಭೂತಪೂರ್ವ ಸ್ವಾಗತ ಕೋರಲಾಗಿತ್ತು. ಮೈಸೂರು ಭೇಟಿಯ ವಿವಿಧ ಕ್ಷಣಗಳನ್ನು ಒಳಗೊಂಡ ವಿಶೇಷ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಅವರು ಜನರ ಪ್ರೀತಿಗೆ ಧನ್ಯವಾದ ತಿಳಿಸಿದರು.

ಈ ಕುರಿತು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ, "ಧನ್ಯವಾದಗಳು ಮೈಸೂರು, ನಿಮ್ಮ ನಿನ್ನೆಯ ಆತಿಥ್ಯ ಅದ್ಭುತವಾಗಿತ್ತು!" ಎಂದು ಬರೆದುಕೊಳ್ಳುವ ಮೂಲಕ ಮೈಸೂರಿನ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿನ್ನೆ ಬೆಂಗಳೂರಿನ ಕಾರ್ಯಕ್ರಮದ ಬಳಿಕ ಮೈಸೂರಿಗೆ ಭೇಟಿ ನೀಡಿದ್ದರು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ, ಭಾರತದ ಮೊಟ್ಟಮೊದಲ ಎಲ್‌ಇಡಿ ಡೋಮ್ ತಾರಾಲಯವಾದ 'ಕಾಸ್ಮೋಸ್-ಮೈಸೂರು' (COSMOS-Mysuru) ಅನ್ನು ಉದ್ಘಾಟಿಸಿದ್ದಾರೆ. ಅಲ್ಲದೆ, ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ನಮನ ಸಲ್ಲಿಸಿ, ಕನ್ನಡದಲ್ಲೇ ಮಾತು ಆರಂಭಿಸುವ ಮೂಲಕ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರ ಮನಗೆದ್ದರು.

ಪೋಸ್ಟ್‌ ನೋಡಿ



ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಸೇರಿದಂತೆ 15,600 ಕೋಟಿ ರೂ. ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಬಳಿಕ ಮೈಸೂರಿಗೆ ಆಗಮಿಸಿದ್ದರು. ಪ್ರಧಾನಿಗಳ ಈ ಸರಳ ಮತ್ತು ಆತ್ಮೀಯ ಕನ್ನಡದ ಸಂದೇಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

7.5 ಕಿ.ಮೀ. ಉದ್ದದ ನಮ್ಮ ಮೆಟ್ರೋ ಪಿಂಕ್‌ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ

ಮೈಸೂರಿನಲ್ಲಿ ಸ್ಥಾಪಿಸಲಾಗಿರುವ ಕಾಸ್ಮೋಸ್ ತಾರಾಲಯವು ಭಾರತದ ಮೊದಲ ಎಲ್‌ಇಡಿ ಡೋಮ್ ತಾರಾಲಯವಾಗಿದೆ. ಇದನ್ನು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಇದು ವಿಶ್ವದಲ್ಲೇ ಮೊದಲ 15 ಡಿಗ್ರಿ ಓರೆಯಾದ, 15 ಮೀಟರ್ ವ್ಯಾಸದ ಎಲ್‌ಇಡಿ ಡೋಮ್ ಆಗಿದೆ. ಈ ವಿನ್ಯಾಸವು ಪ್ರೇಕ್ಷಕರಿಗೆ ಬಾಹ್ಯಾಕಾಶದ ನೈಜ ಅನುಭವವನ್ನು ನೀಡುತ್ತದೆ.