Netherlands prime minister: ಬೆಂಗಳೂರಿಗೆ ಬಂದಿಳಿದ ನೆದರ್ ಲ್ಯಾಂಡ್ಸ್ ಪ್ರಧಾನಿ ಡಿಕ್ ಶೂಫ್
ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿಗಳು ಫೆ.20 ರಂದು ಆರ್.ಟಿ. ನಗರದಲ್ಲಿರುವ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್ (Philips Innovation Campus), ಇನ್ಫೆಂಟ್ರಿ ರಸ್ತೆಯಲ್ಲಿರುವ ಬೆಂಗಳೂರು ಸಂಚಾರ ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ (BTP Control Centre), ಭಾರತೀಯ ವಿಜ್ಞಾನ ಸಂಸ್ಥೆ (IISc) ಗೆ ಮುಂತಾದ ಕಡೆಗಳಿಗೆ ಭೇಟಿ ನೀಡಲಿದ್ದಾರೆ.
ನೆದರ್‌ಲ್ಯಾಂಡ್ಸ್ ಪ್ರಧಾನ ಮಂತ್ರಿ ಎಚ್‌ಇ ಡಿಕ್ ಶೂಫ್ ಬೆಂಗಳೂರಿಗೆ ಆಗಮನ -
ಬೆಂಗಳೂರು, ಫೆ.20: ರಾಜಧಾನಿಯ (Bengaluru) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (Kempegowda Airport) ಇಂದು ಆಗಮಿಸಿದ ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿ (netherlands prime minister) ಎಚ್.ಇ. ಡಿಕ್ ಶೂಫ್ (H.E. Mr. Dick Schoof) ಅವರ ನಿಯೋಗವನ್ನು ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಆತ್ಮೀಯವಾಗಿ ಬರಮಾಡಿಕೊಂಡರು. ಶುಕ್ರವಾರ ಪೂರ್ತಿ ಅವರು ಭಾನುವಾರ ವಿವಿಧ ಸಂಸ್ಥೆಗಳಿಗೆ ವಿಶೇಷ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಕೆ. ಜಿ ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿಗಳು ಫೆ.20 ರಂದು ಆರ್.ಟಿ. ನಗರದಲ್ಲಿರುವ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್ (Philips Innovation Campus), ಇನ್ಫೆಂಟ್ರಿ ರಸ್ತೆಯಲ್ಲಿರುವ ಬೆಂಗಳೂರು ಸಂಚಾರ ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ (BTP Control Centre), ಭಾರತೀಯ ವಿಜ್ಞಾನ ಸಂಸ್ಥೆ (IISc) ಗೆ ಭೇಟಿ ನೀಡಲಿದ್ದಾರೆ. ನಂತರ ಬೆಂಗಳೂರಿನ ಉದ್ಯಮಿಗಳೊಂದಿಗೆ ಹೋಟೆಲ್ ಫೋರ್ ಸೀಸನ್ಸ್‌ನಲ್ಲಿ ಮಧ್ಯಾಹ್ನದ ಭೋಜನ ಸಭೆ ನಡೆಸಿ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ವಾಪಸಾಗಲಿದ್ದಾರೆ.