ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Organ Donation: ಪತಿಯ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪತ್ನಿ

ಮೆದುಳಿನ ಹಿಂಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆ ಉಂಟಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗಗಳನ್ನು ದಾನ ಮಾಡಲು ಅವರ ಪತ್ನಿ ನಿರ್ಧರಿಸಿದ್ದಾರೆ. ಈ ಮೂಲಕ ಪತಿಯ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಜೀವ; ಪತಿಯ ಅಂಗಾಂಗ ದಾನ ಮಾಡಿದ ಪತ್ನಿ

Organ Donation

Profile Pushpa Kumari Apr 3, 2025 7:56 PM

ರಾಮನಗರ: ಕೆಲವು ದುರಂತಗಳು ಅನಿರೀಕ್ಷಿತವಾಗಿ ಸಂಭವಿಸಿ, ಕ್ಷಣಾರ್ಧದಲ್ಲಿ ಜೀವನವನ್ನು ಬದಲಾಯಿಸುತ್ತವೆ. ಅಂತಹ ಒಂದು ಕಥೆ ರಾಮನಗರದ ಗ್ರಾಮೀಣ ಪ್ರದೇಶದ 35 ವರ್ಷದ ಕೃಷ್ಣ ಸಿ. ಅವರದ್ದು. ಯಾವುದೇ ಆರೋಗ್ಯ ಸಮಸ್ಯೆ‌ಗಳಿರಲಿಲ್ಲವಾದರೂ, ಕೃಷ್ಣ ಅವರ ಮೆದುಳಿನ ಹಿಂಭಾಗದಲ್ಲಿ ತೀವ್ರವಾದ ಪಾರ್ಶ್ವವಾಯು ಉಂಟಾಗಿತ್ತು. ಪಾರ್ಶ್ವ ವಾಯುವಿಗೆ 4ರಿಂದ 5 ದಿನಗಳ ಮೊದಲು ಅವರು ತಲೆನೋವು, ತಲೆ ತಿರುಗುವಿಕೆ ಮತ್ತು ವಾಂತಿಯಿಂದ ಬಳಲುತ್ತಿದ್ದರು. ಕೃಷ್ಣ ಅವರ ಕುಟುಂಬ, ವಿಶೇಷವಾಗಿ ಅವರ ಪತ್ನಿ ಪ್ರಿಯಾಂಕಾ, ಅವರಿಗೆ ಅತ್ಯುತ್ತಮ ವೈದ್ಯಕೀಯ ಆರೈಕೆ ನೀಡಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿದರೂ ಸುಧಾರಿಸಲಿಲ್ಲ.

ಈ ಸಂದರ್ಭ ತುರ್ತು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಹಲವು ಆಸ್ಪತ್ರೆ ಗಳಿಗೆ ಸ್ಥಳಾಂತರಿಸಲಾಯಿತು. ಆದರೆ ಅವರ ಸ್ಥಿತಿ ಸುಧಾರಿಸಲಿಲ್ಲ. ಅವರ ರಕ್ತದೊತ್ತಡವನ್ನು ಬೆಂಬಲಿಸಲು ಅವರಿಗೆ ನಿರಂತರ ಔಷಧಿಗಳ ಅಗತ್ಯ ವಿತ್ತು ಮತ್ತು ಅವರ ಗ್ಲ್ಯಾಸ್ಗೋ ಕೋಮಾ ಸ್ಕೇಲ್ (ಜಿಸಿಎಸ್) ಸ್ಕೋರ್ ಕುಗ್ಗುತ್ತಲೇ ಇತ್ತು,. ಇದು ಅವರ ಮೆದುಳು ಕಾಂಡಕ್ಕೆ ಗಂಭೀರ ಹಾನಿಯನ್ನು ಉಂಟು ಮಾಡಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಕೃಷ್ಣ ಅವರನ್ನು 2025ರ ಫೆಬ್ರವರಿ 22ರಂದು ಹೆಚ್ಚಿನ ವಿಶೇಷ ಆರೈಕೆಗಾಗಿ ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹಳೆಯ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಡಾ. ಸುನಿಲ್ ಕಾರಂತ್, ಛೇರ್ಮನ್, HOD ಮತ್ತು ಕನ್ಸಲ್ಟೆಂಟ್ - ಕ್ರಿಟಿಕಲ್ ಕೇರ್ ಮೆಡಿಸಿನ್‌ ಇವರ ನೇತೃತ್ವದ ವೈದ್ಯಕೀಯ ತಂಡವು ರಕ್ತದೊತ್ತಡ, ಶ್ವಾಸಕೋಶದ ಆರೈಕೆ ಮತ್ತು ನಿರಂತರ ಮೇಲ್ವಿಚಾರಣೆಗೆ ಬೆಂಬಲ ನೀಡುವುದು ಸೇರಿದಂತೆ ಸಾಧ್ಯವಾದ ಎಲ್ಲ ಚಿಕಿತ್ಸೆ ನೀಡಿದರೂ ಮೆದುಳಿನ ನಿಷ್ಕ್ರಿಯದಿಂದ ಸಾವನ್ನಪ್ಪಿದರು.

organ  donating

ಈ ಹೃದಯವಿದ್ರಾವಕ ಸುದ್ದಿ ಕುಟುಂಬವನ್ನು ಧ್ವಂಸಗೊಳಿಸಿತು. ಆರ್ಥಿಕ ಸ್ವಾತಂತ್ರ್ಯವಿಲ್ಲದ ಗೃಹಿಣಿಯಾಗಿದ್ದ ಅವರ ಪತ್ನಿ ಪ್ರಿಯಾಂಕಾ ತಮ್ಮ 5 ವರ್ಷದ ಮಗನೊಂದಿಗೆ ಹೇಗೆ ಮುಂದಿನ ಜೀವನವನ್ನು ಸಾಗಿಸುವುದು ಎಂಬ ಅನಿಶ್ಚಿತತೆಯನ್ನು ಎದುರಿಸಿದರು. ಅಪಾರ ದುಃಖದ ಹೊರ ತಾಗಿಯೂ, ಅವರು ಜೀವನವನ್ನು ಬದಲಾಯಿಸುವ ಧೈರ್ಯಶಾಲಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಮ್ಮ ಪತಿಯ ಅಂಗಗಳನ್ನು ದಾನ (Organ Donation) ಮಾಡಲು ಆಯ್ಕೆ ಮಾಡಿಕೊಂಡರು. ಆ ಮೂಲಕ ಅಗತ್ಯವಿರುವ ಹಲವಾರು ಜನರ ಜೀವಗಳನ್ನು ಉಳಿಸುವ ನಿಸ್ವಾರ್ಥ ಕಾರ್ಯವನ್ನು ಮಾಡಲು ನಿರ್ಧರಿಸಿದರು.

ಅಂಗಾಂಗ ದಾನದ ಬಗ್ಗೆ ಚರ್ಚೆಗಳು ಸಾಮಾನ್ಯವಲ್ಲದ ಗ್ರಾಮೀಣ ಹಿನ್ನೆಲೆಯಿಂದ ಬರುವ ಅವರ ಈ ಉದಾತ್ತ ಕಾರ್ಯವು ಗಮನ ಸೆಳೆದಿದೆ. ಅಂಗಾಂಗ ಕಸಿ ಕಾಯ್ದೆಯ ಪ್ರಕಾರ ಪ್ರಕ್ರಿಯೆಯು ನಡೆಯುವುದನ್ನು ಖಚಿತ ಪಡಿಸಿಕೊಳ್ಳಲು ಆಸ್ಪತ್ರೆಯು ರಾಜ್ಯ ಅಂಗಾಂಗ ದಾನ ಪ್ರಾಧಿಕಾರವಾದ ಜೀವ ಸಾರ್ಥಕತೆಯೊಂದಿಗೆ ಕೆಲಸ ಮಾಡಿತು. ಎರಡು ಮೂತ್ರಪಿಂಡಗಳು, ಹೃದಯ, ಯಕೃತ್ತು ಮತ್ತು ಕಾರ್ನಿಯಾಗಳು ಸೇರಿದಂತೆ ದಾನ ಮಾಡಿದ ಅಂಗಗಳನ್ನು ಯಶಸ್ವಿಯಾಗಿ ಕಸಿ ಮಾಡ ಲಾಯಿತು ಮತ್ತು ಹಲವಾರು ಜೀವಗಳನ್ನು ಉಳಿಸಲು ಸಹಾಯ ಮಾಡಿತು.

ಇದನ್ನು ಓದಿ: Girl death: ಜ್ಯೂಸ್‌ ಎಂದು ಭಾವಿಸಿ ಕಳೆನಾಶಕ ಸೇವಿಸಿ ಬಾಲಕಿ ಸಾವು, ಪೋಷಕರ ನಿರ್ಲಕ್ಷ್ಯದಿಂದ ಅನಾಹುತ

ಕನ್ಸಲ್ಟೆಂಟ್ ಡಾ. ನಾರಾಯಣ ಸ್ವಾಮಿ ಮಾತನಾಡಿ, “ತೀವ್ರವಾದ ಮಿದುಳಿನ ಗಾಯದ ಸಂದರ್ಭಗಳಲ್ಲಿ, ಕುಟುಂಬ ಸದ್ಸಯರು ಆಗಾಗ್ಗೆ ಆಘಾತಕ್ಕೊಳಗಾಗುತ್ತಾರೆ ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಹೆಚ್ಚು ಸಮಯವಿರುವುದಿಲ್ಲ. ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸುವುದು ಉದಾತ್ತ ಕಾರ್ಯ ಮಾತ್ರವಲ್ಲದೆ, ಅಪಾರ ಧೈರ್ಯದ ಕಾರ್ಯವಾಗಿದೆ. ತನ್ನ ಸ್ವಂತ ದುಃಖದ ಹೊರತಾಗಿಯೂ, ಅವರ ಪತ್ನಿಯ ನಿರ್ಧಾರವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ.