ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gubbi News: ಮಡೇನಹಳ್ಳಿ ದೇವಾಲಯಕ್ಕೆ 2.50 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಸಂಸ್ಥೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಂತಿ ಮಾತನಾಡಿ ಆರ್ಥಿಕ ಚಟು ವಟಿಕೆಯ ಮೂಲಕ ಆರಂಭವಾದ ಶ್ರೀ ಕ್ಷೇತ್ರ ಸಂಸ್ಥೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಸಹ ತೊಡಗಿಸಿಕೊಂಡಿದೆ. ಸಾಮಾಜಿಕವಾಗಿ ಕೆರೆಗಳ ಪುನಶ್ಚೇತನ, ಬಡವರಿಗೆ ಮಾಸಾಶನ, ವಸತಿ ಯೋಜನೆ ಜೊತೆಗೆ ಮಹಿಳಾ ಸಬಲೀಕರಣ ನಡೆಸುವ ಮೂಲಕ ಮನೆಮಾತಾದ ಸಂಸ್ಥೆ ಪುರಾತನ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಗುರುತಿಸಿಕೊಂಡಿದೆ

ಮಡೇನಹಳ್ಳಿ ದೇವಾಲಯಕ್ಕೆ 2.50 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಸಂಸ್ಥೆ

-

Profile
Ashok Nayak May 5, 2026 10:12 PM

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಮಡೇನಹಳ್ಳಿ ಗ್ರಾಮದ ಶ್ರೀ ತಿರುಮಲ ಹಾಗೂ ಚಿಕ್ಕಮ್ಮ ದೊಡ್ಡಮ್ಮ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 2.50 ಲಕ್ಷ ರೂಗಳ ದೇಣಿಗೆ ಡಿಡಿಯನ್ನು ದೇವಾಲಯ ಸಮಿತಿಗೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಂತಿ ಮಾತನಾಡಿ, ಆರ್ಥಿಕ ಚಟು ವಟಿಕೆಯ ಮೂಲಕ ಆರಂಭವಾದ ಶ್ರೀ ಕ್ಷೇತ್ರ ಸಂಸ್ಥೆ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯದಲ್ಲಿ ಸಹ ತೊಡಗಿಸಿಕೊಂಡಿದೆ. ಸಾಮಾಜಿಕವಾಗಿ ಕೆರೆಗಳ ಪುನಶ್ಚೇತನ, ಬಡವರಿಗೆ ಮಾಸಾಶನ, ವಸತಿ ಯೋಜನೆ ಜೊತೆಗೆ ಮಹಿಳಾ ಸಬಲೀಕರಣ ನಡೆಸುವ ಮೂಲಕ ಮನೆಮಾತಾದ ಸಂಸ್ಥೆ ಪುರಾತನ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಗುರುತಿಸಿಕೊಂಡಿದೆ. ವೀರೇಂದ್ರ ಹೆಗ್ಗಡೆ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಯೋಜನೆ ರಾಜ್ಯದಲ್ಲಿ ಸಾಕಾರಗೊಳ್ಳುವ ಕೆಲಸ ಮಾಡುತ್ತಿದೆ ಎಂದರು.

ಇದನ್ನೂ ಓದಿ: Gubbi News: ಲಿಂಕ್ ಕೆನಾಲ್ ಬೇಡ, ಮುಖ್ಯನಾಲೆ ಅಗಲೀಕರಣ ಮಾಡಿ : ಶಾಸಕ ಎಸ್.ಆರ್.ಶ್ರೀನಿವಾಸ್

ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ.ಲಿಂಗಪ್ಪ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಕೊಪ್ಪ ವಲಯದ ನಮ್ಮ ಗ್ರಾಮದ ದೇವಾಲಯ ಜೀರ್ಣೋದ್ಧಾರಕ್ಕೆ ಮುಂದಾದ ಭಕ್ತರು ಆರ್ಥಿಕ ನೆರವು ನೀಡುತ್ತಿದ್ದಾರೆ. ನಮ್ಮ ದೇವಾಲಯದ ಬಗ್ಗೆ ತಿಳಿದ ಧರ್ಮಸ್ಥಳ ಸಂಸ್ಥೆ ಕೂಡಾ ನಮ್ಮ ಕಾರ್ಯಕ್ಕೆ ಕೈಜೋಡಿಸಿದೆ. ಅವರು ನೀಡಿದ 2.50 ಲಕ್ಷ ರೂಗಳ ದೇಣಿಗೆ ದೇವಾಲಯದ ಪೂರ್ಣ ಕಾರ್ಯಕ್ಕೆ ಬಳಸುತ್ತೇವೆ. ಮಡೇನಹಳ್ಳಿ ಸೇರಿದಂತೆ ಸುತ್ತಲ ಗ್ರಾಮಸ್ಥರು ಈ ಸಹಕಾರಕ್ಕೆ ಸಂತಸ ವ್ಯಕ್ತಪಡಿಸಿ ದ್ದಾರೆ. ಇದೇ ಮಾದರಿಯಲ್ಲಿ ಧರ್ಮಸ್ಥಳ ಸಂಸ್ಥೆ ತಾಲ್ಲೂಕಿನ ಎಲ್ಲಾ ದೇವಾಲಯಗಳ ಪುನಶ್ಚೇತನಕ್ಕೆ ಸಹಕಾರ ನೀಡಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಖಜಾಂಚಿ ಸಿದ್ದರಾಮಣ್ಣ, ಕಾರ್ಯದರ್ಶಿ ಮಲ್ಲೇಶ್, ಒಕ್ಕೂಟದ ಅಧ್ಯಕ್ಷೆ ಹೇಮಲತಾ, ಮೇಲ್ವಿಚಾರಕಿ ದೀಪಿಕಾ ಸೇರಿದಂತೆ ಊರಿನ ಗಣ್ಯರು, ಭಕ್ತರು ಹಾಜರಿದ್ದರು.