ಮಧುಗಿರಿಯಲ್ಲಿ ಎಲ್‌ಟಿ ಎಬಿ ಕೇಬಲ್ ಅಳವಡಿಕೆ, ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂಸದ ವಿ.ಸೋಮಣ್ಣ, ಶಾಸಕ ಕೆ.ಎನ್.ರಾಜಣ್ಣ
ಗ್ರಾಮೀಣ ಜನತೆಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರದ ಐಆರ್‌ಎಫ್‌ಸಿ ಮತ್ತು ಬಿಎನ್‌ಪಿಎಂ ಇಂಡಿಯಾ ಪ್ರೈ.ಲಿ. ಸಂಸ್ಥೆಯ ಸಿ.ಎಸ್.ಆರ್ ಅನುದಾನದಲ್ಲಿ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
-
ಮಧುಗಿರಿ: ಪಟ್ಟಣದಲ್ಲಿ ಎಲ್‌ಟಿ ಎಬಿ ಕೇಬಲ್ ಅಳವಡಿಕೆ ಕಾಮಗಾರಿ ಹಾಗೂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ತುಮಕೂರು ಸಂಸದ ವಿ.ಸೋಮಣ್ಣ (V Somanna) ಹಾಗೂ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ (KN Rajanna) ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಗ್ರಾಮೀಣ ಜನತೆಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರದ ಐಆರ್‌ಎಫ್‌ಸಿ ಮತ್ತು ಬಿಎನ್‌ಪಿಎಂ ಇಂಡಿಯಾ ಪ್ರೈ.ಲಿ. ಸಂಸ್ಥೆಯ ಸಿ.ಎಸ್.ಆರ್ ಅನುದಾನದಲ್ಲಿ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಬಡವನಹಳ್ಳಿಯಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕ್ಷೇತ್ರದ ಆಪನಹಳ್ಳಿ, ಪಿಟ್ಟೇನಹಳ್ಳಿ, ತುಂಗೋಟಿ, ರಂಗಾಪುರ ಗೊಲ್ಲರಹಟ್ಟಿ, ಸಂಜೀವಪುರ ಹಾಗೂ ಶಿವನಗೆರೆ ಗುಡಿಬಂಡೆ, ಲಕ್ಷ್ಮೀ ಪುರ, ಪಿಟ್ಟೇನಹಳ್ಳಿ, ತುಂಗೋಟಿ, ರಂಗಾಪುರ ಗೊಲ್ಲರಹಟ್ಟಿ,ಲಕ್ಷ್ಮೀದೇವಿಪುರ, ಬೇಡತ್ತೂರು, ನಿರ್ಕಲ್ ಗೊಲ್ಲರಹಟ್ಟಿ, ಹೊಸಕೋಟೆ, ಚಿಕ್ಕಯಲ್ಕೂರು, ಉಪ್ಪಾರಹಳ್ಳಿ, ಜಿ ಹೊಸಹಳ್ಳಿ, ಕೆಂಪಾಪುರ, ಕಡಗತ್ತೂರು, ಆಡ್ಲು, ರೆಡ್ಡಿಹಳ್ಳಿ, ಗಂಜಲಗುಂಟೆ ಹಾಗೂ ಗೊಂದಿಹಳ್ಳಿ ಸಂಜೀವಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಕಾರಿಗೆ ಚಾಲನೆ ನೀಡಲಾಗಿದೆ.
ಇನ್ನು ಮಧುಗಿರಿ ಪಟ್ಟಣದ ವಿದ್ಯುತ್ ಮಾರ್ಗಗಳ ಎಲ್.ಟಿ.ಎ.ಬಿ ಕೇಬಲ್ ಅಳವಡಿಕೆ ಕಾಮಗಾರಿಯ ಶಂಕುಸ್ಥಾಪನೆಯನ್ನು ಮಧುಗಿರಿ ಪುರಸಭೆ ಅವರಣದಲ್ಲಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿಅಧಿಕಾರಿಗಳು, ಮುಖಂಡರುಗಳು, ವಿವಿಧ ಪಕ್ಷಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.