ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Eshwar B Khandre: ಹಿರೇಹಳ್ಳಿ ಪಂಚಾಯ್ತಿ ರಸ್ತೆ, ಚರಂಡಿ ಅಭಿವೃದ್ಧಿಗೆ 25 ಲಕ್ಷ ರೂ.: ಈಶ್ವರ ಖಂಡ್ರೆ

ತುಮಕೂರು ಸಿದ್ದಗಂಗಾ ಮಠ(Tumkur Siddaganga Mutt)ದಲ್ಲಿ ಶಿಕ್ಷಕರ ದಿನ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ಹಿರೇಹಳ್ಳಿ ಪಂಚಾಯತಿಗೆ ದಿಢೀರ್ ಭೇಟಿ ನೀಡಿದ ಸಚಿವರಿಗೆ ಗ್ರಾಮಸ್ಥರು ಕೆರೆಯ ಬಗ್ಗೆ ತಿಳಿಸಿದಾಗ, ಕೆರೆ ಅಂಗಳಕ್ಕೆ ಖುದ್ದು ತೆರಳಿ ಪರಿಶೀಲಿಸಿದ ಸಚಿವರು, ಕಾನೂನು ರೀತ್ಯ ಒತ್ತುವರಿ ತೆರವಿಗೆ ಮತ್ತು ಕೆರೆ ಪುನಶ್ಚೇತನಕ್ಕೆ ಕ್ರಮ ವಹಿಸಲು ಸೂಚಿಸಿದರು.

ಹಿರೇಹಳ್ಳಿ ಕೆರೆ ಒತ್ತುವರಿ ತೆರವಿಗೆ ಈಶ್ವರ ಖಂಡ್ರೆ ಆದೇಶ

-

Profile
Ashok Nayak Sep 5, 2026 7:29 PM

ತುಮಕೂರು: ತಾಲೂಕು ಹಿರೇಹಳ್ಳಿ ಕೆರೆಗೆ ಹಠಾತ್ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ(Eshwar B Khandre) 18 ಎಕರೆ ಕೆರೆಯಲ್ಲಿ ಅರ್ಧದಷ್ಟು ಒತ್ತುವರಿಯಾಗಿದ್ದು ಕೂಡಲೇ ತೆರವಿಗೆ ಕ್ರಮ ವಹಿಸುವಂತೆ ಸಿಇಓಗೆ ಆದೇಶ ನೀಡಿದ್ದಾರೆ.

ತುಮಕೂರು ಸಿದ್ದಗಂಗಾ ಮಠ(Tumkur Siddaganga Mutt)ದಲ್ಲಿ ಶಿಕ್ಷಕರ ದಿನ ಕಾರ್ಯಕ್ರಮಕ್ಕೆ ಹೋಗುವ ಮಾರ್ಗದಲ್ಲಿ ಹಿರೇಹಳ್ಳಿ ಪಂಚಾಯತಿಗೆ ದಿಢೀರ್ ಭೇಟಿ ನೀಡಿದ ಸಚಿವರಿಗೆ ಗ್ರಾಮಸ್ಥರು ಕೆರೆಯ ಬಗ್ಗೆ ತಿಳಿಸಿದಾಗ, ಕೆರೆ ಅಂಗಳಕ್ಕೆ ಖುದ್ದು ತೆರಳಿ ಪರಿಶೀಲಿಸಿದ ಸಚಿವರು, ಕಾನೂನು ರೀತ್ಯ ಒತ್ತುವರಿ ತೆರವಿಗೆ ಮತ್ತು ಕೆರೆ ಪುನಶ್ಚೇತನಕ್ಕೆ ಕ್ರಮ ವಹಿಸಲು ಸೂಚಿಸಿದರು.

WhatsApp Image 2026-09-05 at 7.16.43 PMik

ಕೆರೆಗೆ ಪಕ್ಕದಲ್ಲೇ ಇರುವ ಕೈಗಾರಿಕೆಯಿಂದ ರಾಸಾಯನಿಕ ತ್ಯಾಜ್ಯ ಹರಿಸುತ್ತಿದ್ದು, ಇದರಿಂದ ಕೆರೆಯ ನೀರು ಕಲುಷಿತವಾಗುತ್ತಿದೆ. ಜಾನುವಾರುಗಳು ಮೃತಪಡುತ್ತಿವೆ. ಜನರಿಗೆ ಚರ್ಮವ್ಯಾಧಿ ಬರುತ್ತಿದೆ ಎಂದು ಜನರು ದೂರಿದರು.

ಇದನ್ನೂ ಓದಿ: Eshwar B Khandre: ಕಲುಷಿತ ನೀರು ಪೂರೈಸಿದರೆ ಕಠಿಣ ಕ್ರಮ: ಈಶ್ವರ ಖಂಡ್ರೆ

ಈ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ವಹಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಲು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಈಶ್ವರ ಖಂಡ್ರೆ ಸೂಚಿಸಿದರು.

ಪಂಚಾಯ್ತಿ ಕಚೇರಿಯಲ್ಲಿ ಹಾಜರಾತಿ ಪುಸ್ತಕ ಪರಿಶೀಲಿಸಿದ ಸಚಿವರು, ಪಂಚಾಯತಿ ಮುಂದಿನ ರಸ್ತೆ ಮತ್ತು ಚರಂಡಿಯ ಅಭಿವೃದ್ಧಿಗಾಗಿ 25 ಲಕ್ಷ ರೂ. ಮಂಜೂರು ಮಾಡುವುದಾಗಿ ಸ್ಥಳದಲ್ಲೇ ಘೋಷಿಸಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಬೇಕು. ಎಂದರು.

ಇದೇ ವೇಳೆ ಹಿರೇಹಳ್ಳಿಯಲ್ಲಿ ನಿರ್ಮಾಣವಾಗಿರುವ ಯೋಗೀಶ್ ಲೇಔಟ್ ನವರು ಬೇರೆಯವರ ಜಮೀನಿಗೆ ತ್ಯಾಜ್ಯನೀರು ಹರಿಸುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು, ಲೇಔಟ್ ಮಾಲೀಕರಿಗೆ ನೋಟೀಸ್ ನೀಡಿ ಸಮಸ್ಯೆ ಸರಿಪಡಿಸುವಂತೆ ಕ್ರಮವಹಿಸಿ ಎಂದರು.