ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur News: ತುಮಕೂರಿನಲ್ಲಿ ಜಿಲ್ಲಾ ಮಟ್ಟದ ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಎಸ್‌ಸಿ, ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ ನೂತನ ಘಟಕ ಉದ್ಘಾಟನೆ

​ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸಂಘದ ತುಮಕೂರು ಜಿಲ್ಲಾ ಘಟಕದ ಸ್ಥಾಪನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಅವರು ಮಾತನಾಡಿದರು. 10ಕ್ಕೂ ಹೆಚ್ಚು ಸಂಪಾದಕರನ್ನು ಹೊಂದಿರುವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಸಂಘಟನೆಗಳನ್ನು ಪ್ರಾರಂಭಿ ಸುವ ತೀರ್ಮಾನದಂತೆ, ಪ್ರಥಮ ಬಾರಿಗೆ ತುಮಕೂರಿನಲ್ಲಿ ನೂತನ ಘಟಕವನ್ನು ಯಶಸ್ವಿಯಾಗಿ ಉದ್ಘಾಟಿಸಲಾಗಿದೆ ಎಂದರು.

ಎಸ್‌ಸಿ, ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ ನೂತನ ಘಟಕ ಉದ್ಘಾಟನೆ

-

Profile
Ashok Nayak Oct 4, 2026 9:29 PM

​ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳಿಗಾಗಿ ಮತ್ತು ಪತ್ರಿಕಾರಂಗದ ಏಳಿಗೆಗಾಗಿ ಒಗ್ಗೂಡಿ ಹೋರಾಡುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯ ಅಧ್ಯಕ್ಷ ಚೆಲುವರಾಜ್ ತಿಳಿಸಿದರು.

​ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸಂಘದ ತುಮಕೂರು ಜಿಲ್ಲಾ ಘಟಕದ ಸ್ಥಾಪನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತನಾಡಿದರು. 10ಕ್ಕೂ ಹೆಚ್ಚು ಸಂಪಾದಕರನ್ನು ಹೊಂದಿರುವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಸಂಘಟನೆಗಳನ್ನು ಪ್ರಾರಂಭಿಸುವ ತೀರ್ಮಾನದಂತೆ, ಪ್ರಥಮ ಬಾರಿಗೆ ತುಮಕೂರಿನಲ್ಲಿ ನೂತನ ಘಟಕವನ್ನು ಯಶಸ್ವಿಯಾಗಿ ಉದ್ಘಾಟಿಸಲಾಗಿದೆ ಎಂದರು.

2001ರಲ್ಲಿ ಮಲ್ಲಿಕಾರ್ಜುನ ಖರ್ಗೆ(Mallikarjuna Kharge)ಯವರು ಹಾಕಿಕೊಟ್ಟ ಬುನಾದಿಯ ಮೇಲೆ ಕಳೆದ 26 ವರ್ಷ ಗಳಿಂದ ಸಂಘಟನೆಯು ಸಂಪಾದಕರ ಸೌಲಭ್ಯ ಹಾಗೂ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸ್ಮರಿಸಿದರು.

ಇದನ್ನೂ ಓದಿ: Tumkur News: ಎನ್‌ಎಚ್‌ಎಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.28 ರಂದು ಬೃಹತ್ ಕಾಲ್ನಡಿಗೆ ಜಾಥಾ: ಮಮಿತ್ ಗಾಯಕವಾಡ್

​ಸಂಪಾದಕರಿಗೆ ಕಾರ್ಯಾಗಾರ ಹಾಗೂ ತಂತ್ರಜ್ಞಾನದ ಅಳವಡಿಕೆ: ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೇರಗೋಡು ಮಾತನಾಡಿ, ಸಂಪಾದಕರು ಪತ್ರಿಕೆಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಮುಂಬರುವ ದಿನಗಳಲ್ಲಿ ಪತ್ರಿಕೆಗಳ ನಿರ್ವಹಣೆ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆಯ ಕುರಿತು ಸಂಪಾದಕರಿಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

​ರಾಜ್ಯ ಸಂಘಟನಾ ಕಾರ್ಯದರ್ಶಿ ಟೆಲಕ್ಸ್ ರವಿಕುಮಾರ್ ಮಾತನಾಡಿ, ಪತ್ರಿಕಾರಂಗದಲ್ಲಿ ಸಾಮಾಜಿಕ ನ್ಯಾಯ ಹಾಗೂ ಶೋಷಿತರ ಧ್ವನಿಯನ್ನು ಬಲಪಡಿಸಲು ಯುವಕರು ಜ್ಞಾನ ಮತ್ತು ವೃತ್ತಿ ಕೌಶಲ್ಯದೊಂದಿಗೆ ಮಾಧ್ಯಮ ಕ್ಷೇತ್ರಕ್ಕೆ ಬರಬೇಕು ಎಂದು ಕರೆ ನೀಡಿದರು. ಅಲ್ಲದೆ, ಪತ್ರಿಕೆಗಳಿಗೆ ಜಾಹೀರಾತು ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಪಾಲಿಸಬೇಕೆಂದು ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.

​ಒಗ್ಗಟ್ಟಿನ ಸಂದೇಶ: ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೀಶ್ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಚಿ.ನಿ. ಪುರುಷೋತ್ತಮ್ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಎಲ್ಲರೂ ಭಿನ್ನಾಭಿಪ್ರಾಯ ಮರೆತು ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

​ತುಮಕೂರು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು: ​ಗೌರವಾಧ್ಯಕ್ಷರು: ಗಂಗಾ ಹನುಮಯ್ಯ (ಮಾಜಿ ಶಾಸಕರು ಹಾಗೂ ಸಂಪಾದಕರು, ಅಮೃತವಾಣಿ)

​ಅಧ್ಯಕ್ಷರು: ಪರಮೇಶ್ ಎಚ್.ಎಸ್.

​ಗೌರವ ಉಪಾಧ್ಯಕ್ಷರು: ಜಯನುಡಿ ಜಯಣ್ಣ

​ಪೋಷಕರು: ಸೊಗಡು ವೆಂಕಟೇಶ್, ಮಾರುತಿ ಗಂಗಾಹನುಮಯ್ಯ

​ಉಪಾಧ್ಯಕ್ಷರು: ಕಂಬಣ್ಣ

​ಪ್ರಧಾನ ಕಾರ್ಯದರ್ಶಿ: ರಘು ಎ.ಎನ್.

​ಕಾರ್ಯದರ್ಶಿ: ರವಿಕುಮಾರ್ ಚಿಂಪುಗಾನಹಳ್ಳಿ

​ಖಜಾಂಚಿ: ಸತೀಶ್ ಹಾರೋಗೆರೆ

​ಸಂಘಟನಾ ಸಂಚಾಲಕರು: ಸುರೇಶ್

​ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಈ.ರಘುರಾಮ್, ನಿರ್ದೇಶಕರುಗಳಾದ ಜಯಣ್ಣ ಬೆಳಗೆರೆ, ಜಗನ್ನಾಥ್‌ಕಾಳೇನಹಳ್ಳಿ, ಸುರೇಶ್ ವತ್ಸ, ಮಾರುತಿ ಪ್ರಸಾದ್, ಮಧು, ಕಣಿಮಯ್ಯ, ಯೋಗಿ ಮೆಲ್ಲಕಲಹಳ್ಳಿ, ರಾಮಚಂದ್ರಯ್ಯ, ವೀರಣ್ಣ, ವೆಂಕಟಾಚಲ, ಹರೀಶ್ ಆಚಾರ್ಯ, ಸಿದ್ದೇಶ್, ವಿನಯ್, ದಾದಾಪೀರ್, ಸುರೇಶ್ ನರಸಿಂಹಮೂರ್ತಿ, ಇತರರು ಭಾಗವಹಿಸಿದ್ದರು.