ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA S R Srinivas: ಬಿಡದಿ ರೈತರ ಸಂಕಷ್ಟಕ್ಕೆ ಕುಮಾರಸ್ವಾಮಿ ಕಾರಣ : ಶಾಸಕ ವಾಸಣ್ಣ

ಕೇಂದ್ರ ಸಚಿವರಾಗಿ ಒಂದು ಕೈಗಾರಿಕೆ ರಾಜ್ಯಕ್ಕೆ ತರಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ತಕ್ಷಣ ಅವರ ಮೇಲಿನ ದ್ವೇಷ ಮತ್ಸರ ಹೆಚ್ಚು ಮಾಡಿಕೊಂಡು ಅವರನ್ನು ಸಿಎಂ ಎಂದು ಒಪ್ಪಿಕೊಳ್ಳಲ್ಲ ಎಂದು ಹೇಳುತ್ತಾರೆ. 18 ಸೀಟು ಪಡೆದು ಇವರು ಒಪ್ಪಿ ಏನೂ ಆಗಬೇಕಿಲ್ಲ. ಸುಖಾಸುಮ್ಮನೆ ಒಕ್ಕಲಿಗ ಮುಖಂಡರ ಬೆಳವಣಿಗೆ ಸಹಿಸದೆ ತುಳಿಯುವುದು ಹೇಗೆ ಎಂದೇ ಕಾಲಹರಣ ಮಾಡುತ್ತಿದ್ದಾರೆ

ಬಿಡದಿ ರೈತರ ಸಂಕಷ್ಟಕ್ಕೆ ಕುಮಾರಸ್ವಾಮಿ ಕಾರಣ : ಶಾಸಕ ವಾಸಣ್ಣ

-

Profile
Ashok Nayak Jul 21, 2026 11:01 AM

ಗುಬ್ಬಿ: ಕುಮಾರಸ್ವಾಮಿ ಅವರ ಯೋಜನೆಯಾಗಿದ್ದ ಬಿಡದಿ ಟೌನ್ ಶಿಪ್(Bidadi Township) ನಿರ್ಮಾಣಕ್ಕೆ ಒಳಪಡುವ ಗ್ರಾಮಗಳ ಜಮೀನನ್ನು ರೆಡ್ ಝೋನ್ ಎಂದು ಗುರುತಿಸಿ ಹಾಗೆಯೇ ಬಿಟ್ಟು ಈಗ ಯೋಜನೆಗೆ ವಿರೋಧ ಎನ್ನುತ್ತಿದ್ದಾರೆ. ಹೇಳೋದು ಒಂದು ಮಾಡೋದು ಒಂದು ಮನಸ್ಸಿನಲ್ಲಿ ಬರಿಯ ದ್ವೇಷ ಅಸೂಯೆ ಇದೆ. ರೈತರ ಸಂಕಷ್ಟಕ್ಕೆ ಅವರೇ ಕಾರಣ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S R Srinivas) ದೂರಿದರು.

ತಾಲ್ಲೂಕಿನ ಚೇಳೂರು ಹೋಬಳಿ ಕೊಡಿಯಾಲ ಗ್ರಾಮದ ಕಾಲೋನಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 54 ಲಕ್ಷ ರೂಗಳ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ರೆಡ್ ಝೋನ್ ಎಂದು ಗುರುತು ಮಾಡಿದ ನಂತರದಲ್ಲಿ ಅಲ್ಲಿನ ರೈತರು ಜಮೀನು ಯಾವುದೇ ರೀತಿಯಲ್ಲಿ ಅಭಿವೃದ್ದಿ ಮಾಡುವಂತಿಲ್ಲ. ಪರಭಾರೆ ಮಾಡಲಿಕ್ಕೆ ಆಗೋದಿಲ್ಲ. ಹೀಗೆ ಅಲ್ಲಿನ ರೈತರನ್ನು ಕಷ್ಟಕ್ಕೆ ಸಿಲುಕಿಸಿ ಈಗ ಅವರ ಮುಂದೆ ಹೋರಾಟ ಎನ್ನುತ್ತಾ ಓಡಾಡ್ತಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: Gubbi News: ದಸಂಸ ನೂತನ ತಾಲ್ಲೂಕು ಸಂಚಾಲಕರಾಗಿ ಕಡಬ ಶಂಕರ್ ಪುನರಾಯ್ಕೆ

ಕೇಂದ್ರ ಸಚಿವರಾಗಿ ಒಂದು ಕೈಗಾರಿಕೆ ರಾಜ್ಯಕ್ಕೆ ತರಲಿಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡ ಲಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ತಕ್ಷಣ ಅವರ ಮೇಲಿನ ದ್ವೇಷ ಮತ್ಸರ ಹೆಚ್ಚು ಮಾಡಿಕೊಂಡು ಅವರನ್ನು ಸಿಎಂ ಎಂದು ಒಪ್ಪಿಕೊಳ್ಳಲ್ಲ ಎಂದು ಹೇಳುತ್ತಾರೆ. 18 ಸೀಟು ಪಡೆದು ಇವರು ಒಪ್ಪಿ ಏನೂ ಆಗಬೇಕಿಲ್ಲ. ಸುಖಾಸುಮ್ಮನೆ ಒಕ್ಕಲಿಗ ಮುಖಂಡರ ಬೆಳವಣಿಗೆ ಸಹಿಸದೆ ತುಳಿಯುವುದು ಹೇಗೆ ಎಂದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು ಈ ಹಿಂದೆ ನಮಗೂ ಕಾಂಗ್ರೆಸ್ ಮೈತ್ರಿಯಲ್ಲಿ ಸರ್ಕಾರ ರಚಿಸಿ ಸಚಿವ ಸ್ಥಾನ ಕೊಡುವ ಆಸೆ ಹುಟ್ಟಿಸಿ ಯುಡಿಯೂರಪ್ಪ ಅವರಿಗೆ ಕೈ ಕೊಟ್ಟಿದ್ದರು. ಇದು ಎಲ್ಲರಿಗೂ ತಿಳಿದಿದೆ ಎಂದರು.

ಬರಗಾಲ ರಾಜ್ಯದಲ್ಲಿ ಕಂಡ ತಕ್ಷಣ ರಾಜ್ಯ ಸರ್ಕಾರ ಅಲರ್ಟ್ ಘೋಷಿಸಿ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಸಭೆ ನಡೆಸಿ ಟಾಸ್ಕ್ ಫೋರ್ಸ್ ಮೂಲಕ ತುರ್ತು ಕ್ರಮಕ್ಕೆ ಸೂಚಿಸಲಾಗಿದೆ. ಮೇವು ಕಿಟ್ ವಿತರಣೆ ಪಶು ಇಲಾಖೆ ಹಾಗೂ ಹಾಲು ಒಕ್ಕೂಟ ಮೂಲಕ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ 80 ಲಕ್ಷ ರೂ ನೀಡಿ ತುರ್ತು ಕ್ರಮಕ್ಕೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದ ಅವರು ಹೂವಿನಕಟ್ಟೆ ಎರಡು ಹಾಸ್ಟೆಲ್ ಗಳಿಗೆ ನೀರಿನ ಅಭಾವ ವಿಚಾರ ತಿಳಿದ ತಕ್ಷಣ ಎರಡು ಪ್ರತ್ಯೇಕ ಬೋರ್ ಕೊರೆಸಲಾಯಿತು. ಈ ಪೈಕಿ ಒಂದು ವಿಫಲವಾಗಿದೆ. ಮತ್ತೊಂದು ಬೋರ್ ಕೊರೆಸಲು ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಕೊಡಿಯಾಲ ಮಹದೇವು, ಚೇಳೂರು ಶಿವನಂಜಪ್ಪ, ರಂಗಧಾಮು, ಶಾರದಮ್ಮ, ಪುಷ್ಪ, ರಾಮಕೃಷ್ಣಪ್ಪ, ವಜ್ರಯ್ಯ, ರವಿ, ಗುತ್ತಿಗೆದಾರ ಕುಮಾರ್, ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇ ಚಂದ್ರಶೇಖರ್ ಇತರರು ಇದ್ದರು.