AN Kantamma: ಮಧುಗಿರಿ ಕೋರ್ಟ್ ನ್ಯಾಯಾಧೀಶೆ ಎ.ಎನ್. ಕಾಂತಮ್ಮ ಹೃದಯಾಘಾತದಿಂದ ನಿಧನ
AN Kantamma: ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಧೀಶೆ ಎ.ಎನ್. ಕಾಂತಮ್ಮ (43) ಅವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 2025ರ ಜೂನ್‌ನಿಂದ ನ್ಯಾಯಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ನಿಧನಕ್ಕೆ ಮಧುಗಿರಿ ತಾಲೂಕಿನ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ಮಧುಗಿರಿ ನ್ಯಾಯಾಧೀಶೆ ಎ.ಎನ್. ಕಾಂತಮ್ಮ. -
ಮಧುಗಿರಿ, ಏ.16: ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಎ.ಎನ್. ಕಾಂತಮ್ಮ(43) (AN Kantamma) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಗ್ರಾಮದವರಾದ ಇವರು ಮಧುಗಿರಿಯಲ್ಲಿ 2025ರ ಜೂನ್ ನಿಂದ ನ್ಯಾಯಧೀಶೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅವಿವಾಹಿತರಾದ ಇವರು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಮಧುಗಿರಿ ತಾಲೂಕಿನ ವಕೀಲರು, ನ್ಯಾಯಾಲಯದ ಸಿಬ್ಬಂದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ಮಧುಗಿರಿ ತಹಸೀಲ್ದಾರ್‌ಗೆ 25 ಸಾವಿರ ರೂ. ದಂಡ
ಮಧುಗಿರಿ: ಮಾಹಿತಿ ಹಕ್ಕು ಕಾಯ್ದೆ ಅಡಿ ಬಗರ್ ಹುಕುಂ ಸಾಗುವಳಿ ಚೀಟಿಯ ನಕಲು ಪ್ರತಿಗಾಗಿ ಸಲ್ಲಿಸಿದ್ದ ಅರ್ಜಿದಾರರ ಕೋರಿಕೆ ಉಪೇಕ್ಷೆ ಹಾಗೂ ಮಾಹಿತಿ ಆಯೋಗದ ನೋಟಿಸ್‌ಗೆ ಸಮರ್ಪಕ ಸಮಜಾಯಿಷಿ ನೀಡದಿದ್ದರಿಂದ ತಹಸೀಲ್ದಾರ್ ಎಚ್. ಶ್ರೀನಿವಾಸ ಅವರಿಗೆ 25 ಸಾವಿರ ರೂ. ದಂಡ ವಿಧಿಸಿದೆ.
ಕೊಡಿಗೇನಹಳ್ಳಿ ಹೋಬಳಿ ದೊಡ್ಡಮಾಲೂರು ಗ್ರಾಮದ ಬಗರ್‌ಹುಕುಂ ಸಾಗುವಳಿ ಚೀಟಿಯ ವಿಚಾರವಾಗಿ ನೀಡಿದ ಮನವಿಗೆ ನಿಗದಿತ ಅವಧಿಯಲ್ಲಿ ಸಮರ್ಪಕ ಮಾಹಿತಿ ದೊರಕದೆ ಮಾಹಿತಿ ಆಯೋಗದ ಮೊರೆ ಹೋಗಿದ್ದರು.
Chikkaballapuara news: ಮಂತ್ರಾಲಯ ಬಳಿ ಭೀಕರ ಅಪಘಾತ, ಚಿಕ್ಕಮಗಳೂರಿನ 8 ಮಂದಿ ಭಕ್ತರು ದುರ್ಮರಣ
ಇದಕ್ಕೆ ಸಂಬಂಧಿಸಿ ಮಾಹಿತಿ ಆಯೋಗ ಇಬ್ಬರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿತ್ತು. ವಿಚಾರಣೆಗೆ ಗೈರಾಗಿರುವುದು ಮತ್ತು ಆಯೋಗದ ನಿರ್ದೇಶನಗಳನ್ನು ಲಘುವಾಗಿ ಪರಿಗಣಿಸಿದ್ದರಿಂದ ಮಾರ್ಚ್ 2026ರ ವೇತನ ಕಡಿತಗೊಳಿಸಿ ದಂಡದ ಹಣವನ್ನು ಆರ್‌ಟಿಐ ಫೆನಾಲ್ಟಿ ಖಾತೆಗೆ ಜಮಾ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ. ಮುಂದಿನ ವಿಚಾರಣೆಯಂದು ಮಧುಗಿರಿ ತಹಸೀಲ್ದಾರ್‌ಗೆ ಖುದ್ದು ಹಾಜರಾಗಲು ಆದೇಶಿಸಿದೆ.