MLA S.R.Srinivas: ನನ್ನ ಮಗನ ಟ್ರ್ಯಾಪ್ ಮಾಡುವ ಕೆಲಸ ನಡೆದಿದೆ: ಶಾಸಕ ವಾಸಣ್ಣ ತಿರುಗೇಟು
ತಾಲ್ಲೂಕಿನ ಚೇಳೂರಿನ ಎಪಿಎಂಸಿ ಯಾರ್ಡ್ ಆವರಣದಲ್ಲಿ 1 ಕೋಟಿ ರೂಗಳ ಸಿಸಿರಸ್ತೆ ಕಾಮಗಾರಿ ಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹನಿಟ್ರ್ಯಾಪ್ ಬಗ್ಗೆ ಮಾತನಾಡುವ ವ್ಯಕ್ತಿಗೆ ಯಾಕೆ ಭಯ ಹುಟ್ಟಿದೆ. ಅಂತಹ ಮಾಡಬಾರದ್ದು ಮಾಡಿದ್ದಕ್ಕೆ ಈ ಭಯ ಕಾಣುತ್ತಿದೆ ಎನಿಸುತ್ತದೆ. ಚಿಲ್ಲರೆ ಮಾತು ಗಳು, ಕೀಳುಮಟ್ಟದ ರಾಜಕಾರಣ ಅವರ ಚರಿತ್ರೆ ತಿಳಿಸುತ್ತದೆ
-
ಗುಬ್ಬಿ: ಕೀಳು ರಾಜಕಾರಣ ಮಾಡಲು ಸಾಕ್ಷ್ಯಾಧಾರ ರಹಿತ ಆರೋಪ ಮಾಡಿದ ವ್ಯಕ್ತಿ ಕೊಟ್ಟ ಆಡಿಯೋ ಸಾಕ್ಷಿಯಲ್ಲೇ ಪಕ್ಕದಲ್ಲಿ ಕುಳಿತು ಪಿಸುಮಾತಿನಲ್ಲಿ ಹೇಳಿಕೊಡುತ್ತಿದ್ದವರ ಬಗ್ಗೆ ತಿಳಿಯುತ್ತೆ. ಇದು ನನ್ನ ತೇಜೋವಧೆಗೆ ಬಳಸಿದ ಷಡ್ಯಂತ್ರ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ (MLA S.R. Srinivas) ಕುಟುಕಿದರು.
ತಾಲ್ಲೂಕಿನ ಚೇಳೂರಿನ ಎಪಿಎಂಸಿ ಯಾರ್ಡ್ ಆವರಣದಲ್ಲಿ 1 ಕೋಟಿ ರೂಗಳ ಸಿಸಿರಸ್ತೆ ಕಾಮಗಾರಿ ಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹನಿಟ್ರ್ಯಾಪ್ ಬಗ್ಗೆ ಮಾತನಾಡುವ ವ್ಯಕ್ತಿಗೆ ಯಾಕೆ ಭಯ ಹುಟ್ಟಿದೆ. ಅಂತಹ ಮಾಡಬಾರದ್ದು ಮಾಡಿದ್ದಕ್ಕೆ ಈ ಭಯ ಕಾಣುತ್ತಿದೆ ಎನಿಸುತ್ತದೆ. ಚಿಲ್ಲರೆ ಮಾತು ಗಳು, ಕೀಳುಮಟ್ಟದ ರಾಜಕಾರಣ ಅವರ ಚರಿತ್ರೆ ತಿಳಿಸುತ್ತದೆ ಎಂದು ಗುಡುಗಿದರು.
ಕಳೆದ ಮೂರು ತಿಂಗಳಿಂದ ನನ್ನ ಮಗನ ಭೇಟಿ ಮಾಡಲಾಗಿಲ್ಲ. ಆರೋಪ ಮಾಡಿದ ವ್ಯಕ್ತಿಯ ಬಳಿಯ ಹುಡುಗರು ನನ್ನ ಮಗನನ್ನು ಭೇಟಿ ಮಾಡಿ ಮದುವೆ ಆಗುವ ಹಿನ್ನಲೆ ಹಣ ಕೇಳಿದ್ದಾನೆ. ಈ ಸಂಬಂಧದ ಮಾತುಗಳು ತಿರುಚಿ ಹೇಳಲಾಗಿದೆ. ನನ್ನ 40 ವರ್ಷದ ರಾಜಕೀಯ ಬದುಕಿನಲ್ಲಿ ಯಾರಿಗೂ ತೊಂದರೆ ನೀಡಿಲ್ಲ. ಆ ಮನುಷ್ಯನ ಪಕ್ಕ ಕುಳಿತವರಿಗೆ ಕೇಳಿ ನನ್ನ ಬಗ್ಗೆ ತಿಳಿಯುತ್ತೆ. ನನ್ನ ಪ್ರತಿಸ್ಪರ್ಧಿ ದಿಲೀಪ್ ಕೇಳಿ, ಹೊನ್ನಗಿರಿಗೌಡರು, ಬೆಟ್ಟಸ್ವಾಮಿ, ಲೋಕಣ್ಣ ಇವರಿಗೆ ಯಾವತ್ತಾ ದರೂ ತೊಂದರೆ ನೀಡಿದ್ದೀನಾ ಹೇಳಲಿ ಅವರೇ ಎಂದ ಅವರು ನನ್ನ ವಿರುದ್ಧ ಯಾವ ತಂತ್ರ ಬಳಸಲು ಆಗದೇ ಅಪಪ್ರಚಾರ ಮಾಡಲು ಮುಂದಾಗಿದ್ದಾರೆ. ವೈಯಕ್ತಿಕ ನಿಂದನೆ ಮಾಡಿ ರಾಜಕಾರಣ ಮಾಡಬಾರದು. ನೇರ ಮತದಾರನ ಬಳಿ ಹೋಗಿ ರಾಜಕಾರಣ ಮಾಡಬೇಕು ಎಂದರು.
ಇದನ್ನೂ ಓದಿ: Gubbi News: ಗುಬ್ಬಿಯಲ್ಲಿ ಮರಗಳ ಮಾರಣಹೋಮ : ಅರಣ್ಯ ಇಲಾಖೆ ಮೇಲೆ ಸಾರ್ವಜನಿಕರ ಆಕ್ರೋಶ
ಚುನಾವಣೆಯಲ್ಲಿ ಎಂದಿಗೂ ನನ್ನ ಪ್ರತಿಸ್ಪರ್ಧಿಗಳ ಬಗ್ಗೆ ಮಾತನಾಡಿಲ್ಲ. ಈ ವ್ಯಕ್ತಿ ಯಾರೂ ಅಂತಾನೂ ಗೊತ್ತಿಲ್ಲ. ಇವರ ಬಗ್ಗೆ ಏನೂ ತಿಳಿದಿಲ್ಲ. ಅದರ ಅವಶ್ಯಕತೆನೂ ಇಲ್ಲ. ಗಂಡಸು ಅಂತ ಹೆತ್ತಿ ಮರಕ್ಕೆ ಹಾಕಿದ್ದಾರೆ. ಅಂದರೆ ಇನ್ಯಾರು ಗಂಡು ಮಕ್ಕಳನ್ನು ಹೆತ್ತಿಲ್ವೇ ಎಂದು ಛೇಡಿಸಿದ ಅವರು ರಾಜಕಾರಣ, ಅಧಿಕಾರ ನೀಡಿರುವುದು ನನ್ನ ಕ್ಷೇತ್ರದ ಜನರು. ಅವರಿಗೆ ನಾನು ತಲೆ ಬಾಗು ತ್ತಾನೆ. ಇನ್ಯಾರಿಗೂ ಭಯ ಪಡುವ ವ್ಯಕ್ತಿ ನಾನಲ್ಲ ಎಂದು ಪ್ರತಿಕ್ರಿಯಿಸಿ ನಿಖಿಲ್ ಕುಮಾರ ಸ್ವಾಮಿ ಡಿಸಿಎಂ ಅವರ ಬಗ್ಗೆ ಹಗುರ ಮಾತನಾಡಿದ್ದು ಸರಿಯಲ್ಲ. ಅವರ ರಾಜಕಾರಣ ಅನುಭವದಷ್ಟು ನಿಖಿಲ್ ಅವರಿಗೆ ವಯಸ್ಸು ಆಗಿಲ್ಲ. ಮನಸ್ಸೋ ಇಚ್ಚೆ ಮಾತು ಯೋಗ್ಯತೆ ಮೀರಿ ಆಡಿದ್ದು ಸರಿಯಲ್ಲ. ಐದು ಬಾರಿ ಶಾಸಕನಾಗಿ ನಾನು ಎಂದಿಗೂ ಸಿಎಂ ಡಿಸಿಎಂ ಬಗ್ಗೆ ಮಾತನಾಡಲು ಯೋಚನೆ ಮಾಡುತ್ತೇನೆ ಎಂದರು.
ಸಿ.ಟಿ.ರವಿ ಮಾತು ಕೇವಲ ಪ್ರಚೋದನೆಯಿಂದ ಕೂಡಿರುತ್ತೆ. ಬಿಜೆಪಿ ಧರ್ಮ ಹೋರಾಟ ಹೆಸರಿನಲ್ಲಿ ಇಡೀ ದೇಶವನ್ನೇ ಉಸಿರುಗಟ್ಟಿಸುತ್ತಾರೆ ಎಂದು ಅವರು ಪಟ್ಟಣದಲ್ಲಿ ನಡೆದಿರುವ ವೈಟ್ ಟ್ಯಾಪಿಂಗ್ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ನಂತರ ಬಾಕ್ಸ್ ಚರಂಡಿ ಮಾಡಿ ಮಳೆ ನೀರು ಸುಗಮವಾಗಿ ಹರಿಯುವ ವ್ಯವಸ್ಥೆ ಮಾಡಲಾಗುವುದು. ಕೆಲಸ ಮುಗಿಯದ ಕಾರಣ ಅಡಚಣೆ ಯಾಗಿದೆ. ಕೆಲ ದಿನದಲ್ಲಿ ಎಲ್ಲವೂ ಸೇರಿಹೋಗಲಿದೆ. ಉಳಿದಂತೆ ಗುಬ್ಬಿ ತಾಲ್ಲೂಕಿನಲ್ಲಿ ಅಭಿವೃದ್ದಿ ಕಾಮಗಾರಿಗಳು ನಿರಂತರ ನಡೆದಿದೆ. ಈ ದಿನ ಸುಮಾರು 3 ಕೋಟಿ ರೂಗಳ ಐದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಓಂಕಾರ್ ಪ್ರಸಾದ್, ಮಾಜಿ ಸದಸ್ಯರಾದ ಜಯಮಾಲ ಸದಾ ಶಿವಯ್ಯ, ಮಂಜುನಾಥ್, ಲಕ್ಷ್ಮೀಪತಿ, ಮುಖಂಡರಾದ ಪಾಂಡುರಂಗಯ್ಯ , ಪ್ರಸಾದ್, ಚಂದ್ರಕಲಾ ಚಿದಾನಂದ್, ನಿರಂಜನ್, ಕೆಂಚಕುಮಾರ್, ದಿವಾಕರಯ್ಯ, ಗುತ್ತಿಗೆದಾರ ಸಿದ್ದರಾಮಯ್ಯ ಇನ್ನಿತರರು ಭಾಗವಹಿಸಿದ್ದರು.