ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

OBC Reserved Constituencies: ಚುನಾವಣೆಯಲ್ಲಿ ಎಸ್‌ಟಿ, ಎಸ್‌ಟಿಯಂತೆ ಒಬಿಸಿ ಮೀಸಲು ಕ್ಷೇತ್ರ ಕೊಡಬೇಕು: ಕೆ.ಎನ್‌.ರಾಜಣ್ಣ

KN Rajanna: ದೇಶದಲ್ಲಿ ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್ ಜಾರಿಯಾಗಲು ಚುನಾವಣೆಯಲ್ಲಿ ಒಬಿಸಿ ಮೀಸಲು ಕ್ಷೇತ್ರ ನೀಡಬೇಕು ಅಮೆರಿಕದಲ್ಲಿ ಎರಡು ಬಾರಿ ಮಾತ್ರ ಅಧ್ಯಕ್ಷರಾಗಲು ಅವಕಾಶ ಇದ್ದಂತೆ ನಮ್ಮ ದೇಶದಲ್ಲೂ ಅಧಿಕಾರ ಸೀಮಿತಗೊಳಿಸಬೇಕು ಎಂದು ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಸ್‌ಟಿ, ಎಸ್‌ಟಿಯಂತೆ ಒಬಿಸಿ ಮೀಸಲು ಕ್ಷೇತ್ರ ಕೊಡಬೇಕು ಎಂದ ಕೆ.ಎನ್‌.ರಾಜಣ್ಣ

-

Prabhakara R Prabhakara R Oct 28, 2025 8:02 PM

ತುಮಕೂರು, ಅ.28: ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಎಸ್‌ಸಿ, ಎಸ್‌ಟಿ ಮೀಸಲು ಕ್ಷೇತ್ರಗಳು ಇರುವಂತೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೂ (ಒಬಿಸಿ) ಮೀಸಲು ಕ್ಷೇತ್ರ (OBC Reserved Constituencies) ಕೊಡಬೇಕು ಎಂದು ಮಧುಗಿರಿ ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್‌.ರಾಜಣ್ಣ (KN Rajanna) ಹೇಳಿದ್ದಾರೆ. ಮಹಿಳಾ ಮೀಸಲಾತಿ ತರುವ ಚಿಂತನೆಯಂತೆ ಹಿಂದುಳಿದ ವರ್ಗಕ್ಕೂ ಮೀಸಲಾತಿ ಕೊಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದೇಶದಲ್ಲಿ ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್ ಜಾರಿಯಾಗಬೇಕು. ಅಮೆರಿಕದಲ್ಲಿ ಎರಡು ಬಾರಿ ಮಾತ್ರ ಅಧ್ಯಕ್ಷರಾಗಲು ಅವಕಾಶ ಇದ್ದಂತೆ ನಮ್ಮ ದೇಶದಲ್ಲೂ ಅಧಿಕಾರ ಸೀಮಿತಗೊಳಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನವೆಂಬರ್ 14 ರವರೆಗೂ ಏನೂ ನಡೆಯಲ್ಲ. ಈಗ ಎಲ್ಲರೂ ಗಾಳಿಯಲ್ಲಿ ಗುಂಡು ಹೊಡೆದಂಗೆ ಮಾತನಾಡುತ್ತಿದ್ದಾರೆ. ದಲಿತರು ಸಿಎಂ ಆಗಿಲ್ಲ ಅನ್ನೋ ಕೂಗೂ ಇದೆ. ಎಲ್ಲರಿಗೂ ಕಾಂಗ್ರೆಸ್ ಅನುಕೂಲ ಮಾಡಿ ಕೊಟ್ಟಿದೆ. ಹಾಗಂತ ಈಗಲೇ ಮುನಿಯಪ್ಪ, ಪರಮೇಶ್ವರ್ ಸಿಎಂ ಆಗ್ತಾರೆ ಅಂತಲ್ಲ. ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಅನ್ನೋ ಬಯಕೆ ನನ್ನದು. ಮೂವರು ಡಿಸಿಎಂ ಮಾಡಲು ನಾನೇ ಹೇಳಿದ್ದೆ. ಕಳೆದ ಲೋಕಸಭೆ ಅದು ಅನುಕೂಲ ಆಗುತಿತ್ತು. ಹಾಗಾಗಿ ನಾನು ವಾದ ಮಾಡಿದ್ದ ಎಂದು ಹೇಳಿದರು.

ಕೆ.ಎನ್‌.ರಾಜಣ್ಣ ಅವರ ವಿಡಿಯೋ ಇಲ್ಲಿದೆ



ಇನ್ನು ಈಗ ಅಲ್ಪಸಂಖ್ಯಾತರು ಸೇರಿ ಮೂವರು ಡಿಸಿಎಂ ಮಾಡಿದರೆ ಒಳ್ಳೆಯದು. ರಾಜಕಾರಣದಲ್ಲಿ ಹೇಳೋದು ಮಾಡೋದು ಬಹಳ ವ್ಯತ್ಯಾಸ ಇದೆ. ನಾನು ನಿಲ್ಲಲ್ಲ ಅಂತ ಹೇಳಿದ್ದೆ, ಮುಂದೆ ನಿಲ್ಲಲ್ಲ ಅಂತ ಯಾವ ಗ್ಯಾರಂಟಿ. ಹಾಗೆಯೇ ಸಿದ್ದರಾಮಯ್ಯರಿಗೆ ಒತ್ತಡ ಬಂದಿದೆ. ಸಿಎಂ ಯಾರಾಗಬೇಕು ಅನ್ನೋದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿದ್ದರಾಮಯ್ಯರೇ ಸಿಎಂ ಆಗಿ ಮುಂದುವರಿಬೇಕು ಎಂಬ ಆಶಯ ಇದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru Tunnel Road: ತೇಜಸ್ವಿ ಸೂರ್ಯ ತಮ್ಮ ಕ್ಷೇತ್ರದ ಜನಕ್ಕೆ ಸಾರ್ವಜನಿಕ ಸಾರಿಗೆ ಬಳಸುವಂತೆ ಹೇಳಲಿ: ಡಿಕೆಶಿ

ಭಾರತದಲ್ಲಿ ಎಷ್ಟು ಮೀಸಲು ಲೋಕಸಭಾ ಕ್ಷೇತ್ರಗಳಿವೆ?

ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿದ್ದು, ಇದರಲ್ಲಿ 84 ಪರಿಶಿಷ್ಟ ಜಾತಿ ಹಾಗೂ 47 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರಗಳಾಗಿವೆ. ಇನ್ನು ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಎಸಿ ಮೀಸಲು ಕ್ಷೇತ್ರಗಳು 5 (ವಿಜಯಪುರ, ಕಲಬುರಗಿ, ಚಿತ್ರದುರ್ಗ, ಚಾಮರಾಜನಗರ, ಕೋಲಾರ) ಇದ್ದು, ಎಸ್‌ಟಿ ಮೀಸಲು ಕ್ಷೇತ್ರ 2 (ರಾಯಚೂರು, ಬಳ್ಳಾರಿ) ಇವೆ.

ಕರ್ನಾಟಕದಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ನೋಡುವುದಾದರೆ, ಒಟ್ಟು 224 ಕ್ಷೇತ್ರಗಳ ಪೈಕಿ 36 ಕ್ಷೇತ್ರ ಎಸ್‌ಸಿ ಮೀಸಲು ಹಾಗೂ 15 ಎಸ್‌ಟಿ ಮೀಸಲು ಕ್ಷೇತ್ರಗಳಿವೆ.

ಜನತಾ ಪ್ರಾತಿನಿಧ್ಯ ಕಾಯ್ದೆ (ಆರ್‌ಪಿಎ), 1950ರಡಿ ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಥಾನಗಳ ಮೀಸಲಾತಿ ನೀಡಲಾಗಿದೆ. ಮೀಸಲು ಕ್ಷೇತ್ರಗಳು ಸಂವಿಧಾನದಡಿ ದುರ್ಬಲ ವರ್ಗಗಳಿಗೆ, ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾದ ಕ್ಷೇತ್ರಗಳಾಗಿವೆ. ದುರ್ಬಲ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಮೀಸಲು ಕ್ಷೇತ್ರಗಳನ್ನು ವಿಂಗಡಿಸಲಾಗಿದೆ.