ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

V Somanna: ಪ್ರಿಯಾಂಕ್ ಖರ್ಗೆ ನಡೆನುಡಿ ತಿದ್ದಿಕೊಳ್ಳಬೇಕು : ವಿ.ಸೋಮಣ್ಣ

ಕಳೆದ ಒಂದು ವರ್ಷದಿಂದ ಆರಂಭವಾದ ರಾಜ್ಯದ 800ಕ್ಕೂ ಅಧಿಕ ರೈಲ್ವೇ ಮೇಲ್ಸೇತುವೆ ಹಾಗೂ ಕೆಳಸೇತುವೆ ಕಾಮಗಾರಿಗಳ ಪೈಕಿ ಬಹುತೇಕ ಕೆಲಸಗಳು ಈ ವರ್ಷದ ಅಂತ್ಯಕ್ಕೆ ಪೂರ್ಣ ಗೊಳ್ಳಲಿದೆ ಎಂದ ಅವರು ಎಸ್ಐಆರ್ ಬಗ್ಗೆ ಖುದ್ದು ಮುಖ್ಯಮಂತ್ರಿಗಳು ಚುನಾವಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಿದ್ದು ಸರಿಯಲ್ಲ. ಒಂದು ಕೋಟಿ ಮತದಾರರ ಡಿಲೀಟ್ ಆಗಿರುವ ಬಗ್ಗೆ ಅವರೇ ಪರಿಶೀಲನೆ ಮಾಡಲಿ

ಪ್ರಿಯಾಂಕ್ ಖರ್ಗೆ ನಡೆನುಡಿ ತಿದ್ದಿಕೊಳ್ಳಬೇಕು : ವಿ.ಸೋಮಣ್ಣ

-

Profile
Ashok Nayak Nov 11, 2026 10:26 AM

ಗುಬ್ಬಿ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಬಗ್ಗೆ ತಿಳಿದೂ ಸಹ ಪ್ರತಿಷ್ಠೆಯ ಖರ್ಗೆ ಕುಟುಂಬದ ಪ್ರಿಯಾಂಕ್ ಖರ್ಗೆ(Priyank Kharge) ನಡೆನುಡಿ ಸರಿಯಿಲ್ಲ. ಕೂಡಲೇ ತಿದ್ದಿಕೊಂಡು ಗೌರವ ಕಾಪಾಡಿಕೊಳ್ಳಲಿ ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ(V Somanna) ಸಲಹೆ ನೀಡಿದರು.

ತಾಲ್ಲೂಕಿನ ಎನ್.ನಂದಿಹಳ್ಳಿ, ಪುರ ಹಾಗೂ ಗುಬ್ಬಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ಮಾಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಿಯಾಂಕ ಖರ್ಗೆ ಅವರಿಗೆ ಹತಾಶ ಮನೋಭಾವ ಕಾಡುತ್ತಿದೆ ಎನಿಸುತ್ತಿದೆ ಎಂದರು.

ಇದನ್ನೂ ಓದಿ: V Somanna: ವಿಧಾನ ಪರಿಷತ್ತಿನ ಎಲ್ಲಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ : ವಿ.ಸೋಮಣ್ಣ

ಕಳೆದ ಒಂದು ವರ್ಷದಿಂದ ಆರಂಭವಾದ ರಾಜ್ಯದ 800ಕ್ಕೂ ಅಧಿಕ ರೈಲ್ವೇ ಮೇಲ್ಸೇತುವೆ ಹಾಗೂ ಕೆಳಸೇತುವೆ ಕಾಮಗಾರಿಗಳ ಪೈಕಿ ಬಹುತೇಕ ಕೆಲಸಗಳು ಈ ವರ್ಷದ ಅಂತ್ಯಕ್ಕೆ ಪೂರ್ಣ ಗೊಳ್ಳಲಿದೆ ಎಂದ ಅವರು ಎಸ್ಐಆರ್(SIR) ಬಗ್ಗೆ ಖುದ್ದು ಮುಖ್ಯಮಂತ್ರಿಗಳು ಚುನಾವಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಿದ್ದು ಸರಿಯಲ್ಲ. ಒಂದು ಕೋಟಿ ಮತದಾರರ ಡಿಲೀಟ್ ಆಗಿರುವ ಬಗ್ಗೆ ಅವರೇ ಪರಿಶೀಲನೆ ಮಾಡಲಿ. ನುಸುಳುಕೋರರರು, ಮೃತಪಟ್ಟವರು, ಎರಡು ಕಡೆ ಮತ ಇರುವವರ ಹೆಸರು ಮಾತ್ರ ತೆಗೆಯಲಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿದರೆ ಅರ್ಥವಿಲ್ಲ ಎಂದರು.

ನಾಲ್ಕು ವಿಧಾನಪರಿಷತ್ ಸದಸ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ರಾಜ್ಯದ ದಿಕ್ಸೂಚಿ ತೋರುತ್ತಿದೆ. ಬರಗಾಲ ಇಂದಿನ ವ್ಯವಸ್ಥೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿರುವ ಜನರು ಸ್ವಾಭಾವಿಕವಾಗಿ ಈ ಚುನಾವಣೆಯಲ್ಲಿ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಕೈಗೆತ್ತಿಕೊಂಡ 27 ರೈಲ್ವೆ ಕಾಮಗಾರಿಗಳನ್ನು ಈಗಾಗಲೇ ಮೂರು ಬಾರಿ ಪರಿಶೀಲನೆ ಮಾಡಿದ್ದೇನೆ. ಇನ್ನೆರಡು ತಿಂಗಳು ನಾಲ್ಕು ಬಾರಿ ವೀಕ್ಷಣೆ ಮಾಡುತ್ತೇನೆ. ರಾಜ್ಯದ ಎಲ್ಲಾ ಕಾಮಗಾರಿಗಳು 2027 ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಸೃಷ್ಟಿ ಮಾಡಿದ ಪ್ರಧಾನಮಂತ್ರಿ ಮೋದಿ(Narendra Modi) ಅವರು ದೇಶದ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ಉದ್ಯೋಗಕ್ಕೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಮುಂಬಡ್ತಿ ವಿಚಾರದಲ್ಲಿ ಸಹ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗುವುದು ಎಂದ ಅವರು ಎ ಮತ್ತು ಬಿ ಗ್ರೇಡ್ ಹುದ್ದೆಗಳ ಬಡ್ತಿ ವಿಚಾರದಲ್ಲಿ ಯಾವ ಗೊಂದಲ ಇದ್ದರೂ ನಿವಾರಿಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಪಿ.ಬಿ.ಚಂದ್ರಶೇಖರಬಾಬು, ಎಸ್.ಡಿ.ದಿಲೀಪ್ ಕುಮಾರ್, ಎನ್.ಸಿ.ಪ್ರಕಾಶ್, ಪಂಚಾಕ್ಷರಿ, ಸಾಗರನಹಳ್ಳಿ ವಿಜಯ್ ಕುಮಾರ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ, ಜಿ.ಎನ್.ಬೆಟ್ಟಸ್ವಾಮಿ, ಸಿ.ಎಂ.ಹಿತೇಶ್, ಚನ್ನಶೆಟ್ಟಿಹಳ್ಳಿ ಯತೀಶ್, ಹೊಸಹಳ್ಳಿ ಬಸವರಾಜು, ಜಿ.ಆರ್.ಪ್ರಕಾಶ್ ಇತರರು ಇದ್ದರು.