Gubbi News: ಅಭಿನಂದನಾ ಸಮಾರಂಭಕ್ಕೆ ದಲಿತ ಪರ ಸಂಘಟನೆಗಳಿಗೆ ಆಹ್ವಾನ: ಗುಬ್ಬಿ ಬಸವರಾಜ್
ಆದಿ ಜಾಂಬವ ಮಠ ದಿಂದ ಸಚಿವರು ಸಂಸದರು ಹಾಲಿ ಶಾಸಕರು ಮಾಜಿ ಶಾಸಕರು ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದ್ದು. ಜೊತೆಗೆ ದಲಿತ ಜನಾಂಗದ ಏಳಿಗೆಗೆ ಶ್ರೀ ಮಠ ದಿಂದ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು. ಬಾಗಲಕೋಟೆ ಜಿಲ್ಲೆ ಗುಡ್ಡದ್ದಳ್ಳಿ ತಾಲೂಕು ಹಾನಾಪುರ ಗ್ರಾಮದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಮದ್ರಾಸ್) ಉನ್ನತ ಅಧ್ಯಯನಕ್ಕಾಗಿ ತೆರಳುತ್ತಿರುವ ಕರಿಯಪ್ಪ ಮಾದಾರ ಎಂಬ ವಿದ್ಯಾರ್ಥಿಗೆ ಸನ್ಮಾನಿಸಲಾಗುವುದು
-
ಗುಬ್ಬಿ: ಆ.23ನೇ ಭಾನುವಾರ ಬೆಳಿಗ್ಗೆ 11:30ಕ್ಕೆ ಶ್ರೀ ಶಿವಮುನಿ ದೇಸಿ ಕೇಂದ್ರ ಸ್ವಾಮೀಜಿ ರವರ ನೇತೃತ್ವದಲ್ಲಿ ಕೋಡಿಹಳ್ಳಿ ಹಿರಿಯೂರು ಶಾಖೆ ಚಿತ್ರದುರ್ಗ ಜಿಲ್ಲೆಯ ಶ್ರೀ ಆದಿ ಜಾಂಬವ ಮಠದಲ್ಲಿ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು. ತಾಲೂಕಿನ ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆದಿ ಜಾಂಬವ ಯುವ ಬ್ರಿಗೇಡ್ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಗುಬ್ಬಿ ಬಸವರಾಜ್ ತಿಳಿಸಿದರು.
ಇದನ್ನೂ ಓದಿ: Gubbi News: ಮಾದಿಗ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಅವಶ್ಯ: ಕಡಬ ಶಂಕರ್
ಭೀಮ್ ಆರ್ಮಿ ತಾಲೂಕ್ ಘಟಕದ ಅಧ್ಯಕ್ಷ ನಾಗಭೂಷಣ್ ಮಾತನಾಡಿ ಆದಿ ಜಾಂಬವ ಮಠ ದಿಂದ ಸಚಿವರು ಸಂಸದರು ಹಾಲಿ ಶಾಸಕರು ಮಾಜಿ ಶಾಸಕರು ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದ್ದು. ಜೊತೆಗೆ ದಲಿತ ಜನಾಂಗದ ಏಳಿಗೆಗೆ ಶ್ರೀ ಮಠ ದಿಂದ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು. ಬಾಗಲಕೋಟೆ ಜಿಲ್ಲೆ ಗುಡ್ಡದ್ದಳ್ಳಿ ತಾಲೂಕು ಹಾನಾಪುರ ಗ್ರಾಮದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಮದ್ರಾಸ್) ಉನ್ನತ ಅಧ್ಯಯನಕ್ಕಾಗಿ ತೆರಳುತ್ತಿರುವ ಕರಿಯಪ್ಪ ಮಾದಾರ ಎಂಬ ವಿದ್ಯಾರ್ಥಿಗೆ ಸನ್ಮಾನಿಸಲಾಗುವುದು ಎಂದರು.
ಮುಖಂಡ ಶೇಷನಹಳ್ಳಿ ಗಂಗಯ್ಯ ಮಾತನಾಡಿ, ಶ್ರೀ ಸೌಮ್ಯನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ ವಿಜಯನಗರ ಶಾಖೆ ಬೆಂಗಳೂರು, ಶ್ರೀ ಶಿವಮುನಿ ದೇಸಿ ಕೇಂದ್ರ ಸ್ವಾಮೀಜಿ ಆದಿ ಜಾಂಬವ ಮಠ ಹಿರಿಯೂರ್ ಶಾಖೆ, ಶ್ರೀ ಶಿವಲಿಂಗಾನಂದ ಸ್ವಾಮೀಜಿ ಶ್ರೀ ಕಬೀರನಂದಾಶ್ರಮ ಚಿತ್ರದುರ್ಗ, ದಿವ್ಯ ಸಾನಿಧ್ಯ ವಹಿಸಲಿದ್ದು. ಉದ್ಘಾಟನೆ ಶ್ರೀ ಡಾ. ಜಿ ಪರಮೇಶ್ವರ ಉಪಮುಖ್ಯಮಂತ್ರಿಗಳು ಮತ್ತು ಕಂದಾಯ ಇಲಾಖೆ ಸಚಿವರು ಕರ್ನಾಟಕ ಸರ್ಕಾರ ಉದ್ಘಾಟನೆ ಮಾಡಲಿದ್ದು. ಕೆಎಚ್ ಮುನಿಯಪ್ಪ ಸಮಾಜ ಕಲ್ಯಾಣ ಸಚಿವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.