ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಮೋದಿ ದೀರ್ಘಾವಧಿ ಆಡಳಿತಕ್ಕೆ ಗುಬ್ಬಿಯಲ್ಲಿ ವಿಶೇಷ ಪೂಜೆ

ಅತ್ಯಧಿಕ ಅವಧಿಯ ಚುನಾಯಿತ ಪ್ರಧಾನಿಯಾಗಿ ಇಡೀ ವಿಶ್ವ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಹನ್ನೆರಡು ವರ್ಷದ ಅಧಿಕಾರ ವಿಶ್ವಕ್ಕೆ ಮಾದರಿಯಾಗಿದೆ. ಜಾಗತಿಕ ಮಟ್ಟದಲ್ಲಿ ವಿಶೇಷ ಹೆಗ್ಗುರುತು ಹಚ್ಚಿದ ಮೋದಿ ಅವರ ಸ್ವಚ್ಛ ಆಡಳಿತ ಸರ್ವಧರ್ಮ ಸಾಕಾರ ಹಾಗೂ ಅಭಿವೃದ್ದಿಯ ಹರಿಕಾರ ಎಂದೆನಿಸಿದ್ದಾರೆ.

ಪ್ರಧಾನಿ ಮೋದಿ ದೀರ್ಘಾವಧಿ ಆಡಳಿತಕ್ಕೆ ಗುಬ್ಬಿಯಲ್ಲಿ ವಿಶೇಷ ಪೂಜೆ

-

Profile
Ashok Nayak Jun 11, 2026 12:11 AM

ಗುಬ್ಬಿ: ವಿಕಸಿತ ಭಾರತ ಕನಸಿನ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘ 4399 ದಿನಗಳ ಚುನಾಯಿತ ಪ್ರಧಾನಿ ದಾಖಲೆ ಆಡಳಿತಕ್ಕೆ ವಿಶೇಷ ಪೂಜೆಯನ್ನು ಪಟ್ಟಣದ ಶ್ರೀ ಪಂಚ ಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಬಿಜೆಪಿ ತಾಲ್ಲೂಕು ಘಟಕ ಆಯೋಜಿಸಿ ಸಂಭ್ರಮಿಸಿತು.

ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘೋಷಣೆ ಕೂಗಿ ಅಭಿನಂದನೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ಅತ್ಯಧಿಕ ಅವಧಿಯ ಚುನಾಯಿತ ಪ್ರಧಾನಿಯಾಗಿ ಇಡೀ ವಿಶ್ವ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ಹನ್ನೆರಡು ವರ್ಷದ ಅಧಿಕಾರ ವಿಶ್ವಕ್ಕೆ ಮಾದರಿಯಾಗಿದೆ. ಜಾಗತಿಕ ಮಟ್ಟದಲ್ಲಿ ವಿಶೇಷ ಹೆಗ್ಗುರುತು ಹಚ್ಚಿದ ಮೋದಿ ಅವರ ಸ್ವಚ್ಛ ಆಡಳಿತ ಸರ್ವಧರ್ಮ ಸಾಕಾರ ಹಾಗೂ ಅಭಿವೃದ್ದಿಯ ಹರಿಕಾರ ಎಂದೆನಿಸಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆ ಯಲ್ಲಿ ಮೇಕ್ ಇನ್ ಇಂಡಿಯಾ(Make In India) ಸಾಧಿಸಿ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಅವರ ಆಡಳಿತ ಮತ್ತಷ್ಟು ಶಕ್ತಿಯುತವಾಗಿ ಬೆಳೆಯಲಿ ಎಂದು ಆಶಿಸಿದರು.

ಇದನ್ನೂ ಓದಿ: Gubbi News: ಇಂದು ಅದ್ದೂರಿ ಬಸವ ಜಯಂತಿ: ಯಶಸ್ವಿಗೆ ಆಚರಣಾ ಸಮಿತಿ ಮನವಿ

ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪ್ರಧಾನಿ ಮೋದಿ ಅವರ ಹನ್ನೆರಡು ವರ್ಷದಲ್ಲಿ ಯಾವುದೇ ಕಪ್ಪು ಚುಕ್ಕೆ ಕಂಡಿಲ್ಲ. ದೇಶದ ಉಜ್ವಲ ಭವಿಷ್ಯಕ್ಕೆ ಮುಡುಪಾಗಿ ಜಾಗತಿಕ ಮಟ್ಟದಲ್ಲಿ ದೇಶವನ್ನು ವಿಶ್ವ ಗುರುವಾಗಿ ಬೆಳೆಸಿ ಆರ್ಥಿಕ ಸದೃಢತೆಯಲ್ಲಿ ವಿಶ್ವಕ್ಕೆ ನಾಲ್ಕನೇ ಸ್ಥಾನಕ್ಕೆ ತಂದಿದ್ದಾರೆ. ಶೀಘ್ರದಲ್ಲೇ ಮೂರನೇ ಸ್ಥಾನಕ್ಕೆ ತಲುಪಿ ಜಪಾನ್ ದೇಶವನ್ನು ಮೀರಿ ತಂತ್ರಜ್ಞಾನದಲ್ಲಿ ಬೆಳೆಯಲಿದೆ ಎಂದ ಅವರು ದಾಖಲೆಯ ಪ್ರಧಾನಿ ಯಾಗಿ ಇನ್ನೂ ಹತ್ತು ಹಲವು ಯೋಜನೆ ರೂಪಿಸಿ ಬಲಿಷ್ಠ ದೇಶ ಕಟ್ಟುತ್ತಾರೆ ಎಂದು ಶ್ಲಾಘಿಸಿದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ಮೂರನೇ ಬಾರಿಗೆ ಪ್ರಧಾನಿಯಾಗಿ ವಿಶ್ವದ 118 ದೇಶದಲ್ಲಿ ತಮ್ಮ ಛಾಪು ಮೂಡಿಸಿ ಮೋದಿ ಅಲೆಯನ್ನು ವಿಶ್ವ ವ್ಯಾಪಿ ಹರಡಿಸಿದ್ದಾರೆ. ಅವರ ಸ್ವಚ್ಛ ಆಡಳಿತಕ್ಕೆ ದಕ್ಕಿದ ದಾಖಲೆಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿ ಸಿದ್ದೇವೆ. ಮುಂದಿನ ದಿನದಲ್ಲಿ ಮತ್ತಷ್ಟು ಉತ್ತಮ ಆಡಳಿತ ನಿರೀಕ್ಷೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ರವೀಶ್, ಎನ್.ಸಿ.ಪ್ರಕಾಶ್, ಎಸ್.ನಂಜೇಗೌಡ, ಸಾಗರನಹಳ್ಳಿ ವಿಜಯ್ ಕುಮಾರ್, ಎಚ್.ಟಿ.ಭೈರಪ್ಪ, ಬಿ.ಎಸ್.ಪಂಚಾಕ್ಷರಿ, ಬೆಣಚಿಗೆರೆ ರುದ್ರೇಶ್, ಜಿ.ಆರ್.ಶಿವ ಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಯತೀಶ್, ಸಿದ್ದರಾಮಯ್ಯ, ಹೊಸಹಳ್ಳಿ ಬಸವರಾಜ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾಸಾಗರ್, ಎಪಿಕೆ ರಾಜು, ಅರಿವೇಸಂದ್ರ ಗಂಗಣ್ಣ, ಕಾರೆಕುರ್ಚಿ ಸತೀಶ್, ಯುವಮೋರ್ಚಾ ಅಧ್ಯಕ್ಷ ವಿಶ್ವನಾಥ, ಚೇತನ್ ನಾಯಕ್, ನಾಗೇಶ್, ಪ್ರಮೋದ್ ಇತರರು ಇದ್ದರು.