ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತುಮಕೂರಿನ ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಹೊಸ ತಾಳಿ ಸಮರ್ಪಿಸಿದ ಮಾಜಿ ಶಾಸಕ ಗೌರಿಶಂಕರ್

Tumkur News: ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಹಾಗೂ ಇವರ ಆಪ್ತರಾದ ಕಾಂಗ್ರೆಸ್ ಮುಖಂಡ, ಉದ್ಯಮಿ ಊರುಕೆರೆ ಜಗದೀಶ್ ಅವರು ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ದೇವಿಗೆ ಸಮರ್ಪಣೆ ಮಾಡಿದರು.

ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಹೊಸ ತಾಳಿ ಸಮರ್ಪಣೆ

ತುಮಕೂರಿನ ಹೆತ್ತೇನಹಳ್ಳಿ ಮಾರಮ್ಮನಿಗೆ ಹೊಸ ತಾಳಿ ಸಮರ್ಪಣೆ ಮಾಡಲಾಯಿತು. -

Profile
Siddalinga Swamy Feb 20, 2026 5:48 PM

ತುಮಕೂರು, ಫೆ.20: ತಾಲೂಕಿನ (Tumkur News) ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಒಡವೆ ಕಳವು ಪ್ರಕರಣದಲ್ಲಿ ದೇವಿಯ ತಾಳಿಯೂ ಕಳವಾಗಿತ್ತು. ದೇವಿಯ ಒಡವೆ ಕಳವಾಗಿ ದೊಡ್ಡ ಅಪಚಾರವಾಗಿದೆ ಎಂದು ಭಕ್ತರು ಕಳವಳಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಹಾಗೂ ಇವರ ಆಪ್ತರಾದ ಕಾಂಗ್ರೆಸ್ ಮುಖಂಡ, ಉದ್ಯಮಿ ಊರುಕೆರೆ ಜಗದೀಶ್ ಅವರು ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ಶ್ರೀ ಮಾರಮ್ಮ ದೇವಿಗೆ ಸಮರ್ಪಣೆ ಮಾಡಿದರು.

ತಹಸೀಲ್ದಾರ್ ರಾಜೇಶ್ವರಿ ಸೇರಿದಂತೆ ದೇವಸ್ಥಾನ ಸಮಿತಿ ಮುಖಂಡರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಮುಖದಲ್ಲಿ ಮಾರಮ್ಮದೇವಿಗೆ ತಾಳಿ ಸಮರ್ಪಿಸಿ ಗೌರಿಶಂಕರ್ ಮತ್ತು ಬಳಗ ವಿಶೇಷ ಪೂಜೆ ಸಲ್ಲಿಸಿದರು.

ದೇವರ ಒಡವೆ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಪತ್ತೆ ಮಾಡಿ, ಒಡವೆ ವಶಪಡಿಸಿಕೊಂಡು ದೇವರಿಗೆ ಅರ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಉದ್ಯಮಿ ಊರುಕೆರೆ ಜಗದೀಶ್ ಅವರು 30 ಲಕ್ಷ ರೂ. ವೆಚ್ಚದಲ್ಲಿ ಹೆತ್ತೇನಹಳ್ಳಿ ಮಾರಮ್ಮನ ಗರ್ಭಗುಡಿ ನಿರ್ಮಾಣ ಮಾಡಿಸಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದ್ದು, ರಾಜಗೋಪುರ ನಿರ್ಮಾಣಕ್ಕೆ ತಾವು, ಜಗದೀಶ್ ಹಾಗೂ ತಮ್ಮ ಗೆಳೆಯರ ಬಳಗ ಎಷ್ಟೇ ಖರ್ಚಾದರೂ ದೇಣಿಗೆ ನೀಡುತ್ತೇವೆ. ಭಕ್ತರು ನೀಡುವ ದೇಣಿಗೆಯ ಪ್ರತಿ ರೂಪಾಯಿಯ ಲೆಕ್ಕವನ್ನು ಪಾರದರ್ಶಕವಾಗಿ ದಾಖಲು ಮಾಡುವಂತೆ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ತಹಸೀಲ್ದಾರರಿಗೆ ಸೂಚಿಸಿದರು.

ಕಾಮಗಾರಿಗೆ ಕಲ್ಲು ಖರೀದಿಗೆಂದು ಗೌರಿಶಂಕರ್ ಅವರು ಈ ವೇಳೆ ತಹಸೀಲ್ದಾರ್ ರಾಜೇಶ್ವರಿ ಅವರಿಗೆ 2 ಲಕ್ಷ ರೂ. ದೇಣಿಗೆ ನೀಡಿದರು. ಹೆತ್ತೇನಹಳ್ಳಿ ಮಾರಮ್ಮದೇವಿಗೆ ರಾಜ್ಯಾದ್ಯಂತ ಲಕ್ಷಾಂತರ ಭಕ್ತಬಳಗವಿದೆ. ಭಕ್ತರ ಇಷ್ಟಾರ್ಥ ಸಿದ್ಧಿಸುವ, ಕೋರಿಕೆ ಈಡೇಸುತ್ತಾಳೆ ಎಂಬುದು ಭಕ್ತರ ಬಲವಾದ ನಂಬಿಕೆ. ಇತ್ತೀಚೆಗೆ ಮಾರಮ್ಮದೇವಿಯ ಜಾತ್ರೋತ್ಸವ ವೈಭವದಿಂದ ನಡೆಯಿತು. ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಂಡಿತ್ ನಾರಾಯಣಪ್ಪ, ಪ್ರಕಾಶ್, ಪಾಲನೇತ್ರಯ್ಯ, ಹೆತ್ತೇನಹಳ್ಳಿ ಮಂಜುನಾಥ್, ನರಸಾಪುರ ಹರೀಶ್, ಹಾಲನೂರು ಅನಂತಕುಮಾರ್, ಹಿರೇಹಳ್ಳಿ ಮಹೇಶ್, ಚಿಕ್ಕನಾರವಂಗಲ ರವಿ, ಕೈದಾಳ ರಮೇಶ್, ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Tumkur News: ಬಾಳಿಗೊಂದು ಗುರಿ ಇರಲಿ: ಶ್ರೀ ರಂಭಾಪುರಿ ಜಗದ್ಗುರು

ರಿಂಗ್ ರಸ್ತೆಗೆ ತೀವ್ರ ವಿರೋಧ

ರೈತರ ಜಮೀನು ವಶಪಡಿಸಿಕೊಂಡು, ರೈತರ ವಿರೋಧದ ನಡುವೆ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ನಿರ್ಮಾಣ ಕ್ರಮವನ್ನು ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವುದೇ ಸರ್ಕಾರ ಹೋಗಬಾರದು. ರಿಂಗ್ ರಸ್ತೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ರೈತರೊಂದಿಗೆ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಹೇಳಿದ ಗೌರಿಶಂಕರ್, ಶನಿವಾರ ನಗರದಲ್ಲಿ ರೈತರ ಸಭೆ ಕರೆದಿದ್ದು, ಹೋರಾಟದ ರೂಪುರೇಶೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.