Tumkur(Gubbi) News: ನಾವು ಮಾಡುವ ಸಂಸ್ಕಾರ ಗುರು ಶಾಸ್ತ್ರ ಆಧಾರಿತವಾಗಿರಬೇಕು
ಶುಕ್ರವಾರದಂದು ಶಿರಾ ನಗರದಲ್ಲಿರುವ ಶ್ರೀ ಮಾಧವ ವಿದ್ಯಾ ಮಂದಿರದಲ್ಲಿ ಶಾರದಾ ಪೂಜೆ, ಪೋಷಕರ ಸಭೆ, ಅವಿಭಕ್ತ ಕುಟುಂಬದವರಿಗೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪೋಷಕರಿಗೆ ಮಕ್ಕಳಿಂದ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
Source : Gubbi Reporter
ಸಿರಾ: ಸಂಸ್ಕಾರದಲ್ಲಿ ಕೆಟ್ಟ ಹಾಗೂ ಒಳ್ಳೆಯ ಸಂಸ್ಕಾರ ಎರಡೂ ಇದೆ. ನಾವು ಮಾಡುವ ಸಂಸ್ಕಾರ ಗುರು ಶಾಸ್ತ್ರ ಆಧಾರಿತವಾಗಿರಬೇಕು ಎಂದು ಇಸ್ಕಾನ್ ದೇವಸ್ಥಾನದ ಶ್ರೀ ವತ್ಸದಾಸ್ ಗುರೂಜಿ ಅಭಿಪ್ರಾಯ ಪಟ್ಟರು
ಅವರು ದಿನಾಂಕ 17.1.2025ರ ಶುಕ್ರವಾರದಂದು ಶಿರಾ ನಗರದಲ್ಲಿರುವ ಶ್ರೀ ಮಾಧವ ವಿದ್ಯಾ ಮಂದಿರದಲ್ಲಿ ಶಾರದಾ ಪೂಜೆ, ಪೋಷಕರ ಸಭೆ, ಅವಿಭಕ್ತ ಕುಟುಂಬದವರಿಗೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪೋಷಕರಿಗೆ ಮಕ್ಕಳಿಂದ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದರು.
ಪರಶುರಾಮನು ತಂದೆಯ ವಾಕ್ಯ ಪರಿಪಾಲಿಸಲು ತನ್ನ ತಾಯಿಯ ತಲೆಯನ್ನು ಕಡಿದು ಹಾಕಿದ, ಭಕ್ತ ಪ್ರಹ್ಲಾದ ತಂದೆಯ ವಾಕ್ಯವನ್ನು ಪಾಲಿಸಲಿಲ್ಲ. ಇದರಲ್ಲಿ ಯಾವುದು ಉತ್ತಮ ಸಂಸ್ಕಾರ ವೆಂಬು ವಿಷಯಕ್ಕೆ ಬಂದರೆ ಗುರು ಶಾಸ್ತ್ರ ಆಧಾರಿತ ಸಂಸ್ಕಾರ ಪಾಲನೆ ಅತ್ಯವಶ್ಯಕ ವಾಗುತ್ತದೆ ಎಂದರು.
ಮಕ್ಕಳಿಗೆ ಉತ್ತಮ ಗುಣಮಟ್ಟದ ಮೌಲ್ಯಧಾರಿತ ಶಿಕ್ಷಣವನ್ನು ನೀಡುವುದೇ ನಮ್ಮ ಸಂಸ್ಥೆ ಯ ಮುಖ್ಯ ಉದ್ದೇಶವಾಗಿದೆ. ಉತ್ತಮ ಸಂಸ್ಕಾರ ದ ವಿದ್ಯೆ ನಮ್ಮ ದೇಶವನ್ನು ಸದೃಢ ಮಾಡುತ್ತದೆ ಆದರೆ ಸಂಸ್ಕಾರವಿಲ್ಲದ ವಿದ್ಯೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ..
ಎರಡು ಮಕ್ಕಳ ನಂತರ ಹುಟ್ಟುವ ಮೂರನೇ ಮಗುವಿಗೆ ನಮ್ಮ ಶಾಲೆಯಲ್ಲಿ ಯಾವ ಶುಲ್ಕವು ತೆಗೆದುಕೊಳ್ಳದೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಅಧ್ಯಕ್ಷ ನಂದಿನಿ ಸೋಮಶೇಖರ್ ತಿಳಿಸಿದರು.
ಹೈ ಕೋರ್ಟ್ ವಕೀಲ ಭೋಜರಾಜು ಮಾತನಾಡಿ ಉತ್ತಮ ಸಂಸ್ಕಾರವನ್ನು ತಂದೆ ತಾಯಿ ಗಳು ಬೆಳೆಸಿಕೊಂಡರೆ ಮಾತ್ರ ಮಕ್ಕಳು ಅದನ್ನೇ ಪಾಲಿಸುತ್ತವೆ .ಮೊದಲು ಪೋಷಕರು ಉತ್ತಮ ಸಂಸ್ಕಾರವಂತರಾಗಬೇಕೆಂದು ಕರೆ ನೀಡಿದರು.
ಇತ್ತೀಚಿಗೆ ಪರಸ್ಪರ ಕುಟುಂಬದ ಸದಸ್ಯರಲ್ಲಿ ಅವಲಂಬನೆ ಕಡಿಮೆಯಾಗಿ ಅವಿಭಕ್ತ ಕುಟುಂಬಗಳು ನಾಶವಾಗುತ್ತಿವೆ ಇಂತಹ ಸನ್ನಿವೇಶದಲ್ಲಿಯೂ ಕೂಡ ಇನ್ನೂ ಕೆಲವು ಕುಟುಂಬಗಳು ಅವಿಭಕ್ತ ಕುಟುಂಬಗಳಾಗಿ ವಾಸಿಸುತ್ತಿವೆ, ಅಂತಹ ಕುಟುಂಬಗಳನ್ನು ಗುರುತಿಸಿ ಸನ್ಮಾನಿ ಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ನಾಗೇಂದ್ರಪ್ಪ ಹೇಳಿದರು.
ಪೋಷಕರಿಗೆ ಮಕ್ಕಳು ಪಾದಪೂಜೆ ಮಾಡುವ ಸನ್ನಿವೇಶದಲ್ಲಿ ಹಲವರು ಭಾವುಕರಾದರು.
ಅವಿಭಕ್ತ ಕುಟುಂಬದಲ್ಲಿ ವಾಸಿಸುವ ಸದಸ್ಯರನ್ನು ಸನ್ಮಾನಿಸುವುದರ ಮೂಲಕ ಅವಿಭಕ್ತ ಕುಟುಂಬದವರನ್ನು ಪ್ರೋತ್ಸಾಹಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸ ಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸೋಮಶೇಖರ್, ಕು.ರಾಮಣ್ಣ, ಚಿಕ್ಕಣ್ಣ, ರಾಜ ಅಶ್ವಥ್ ಎಸ್ ಎಲ್ ಜಯರಾಮ, ಡಾ ಶ್ರೀದೇವಿ, ಕವಿತಾ ಲಕ್ಷ್ಮಣ್, ಕನ್ಯಾಕುಮಾರಿ, ಸಾವಿತ್ರಿ ,ಕವಿತಾ ಜಯನಾರಾಯಣ್, ಗುರೂಜಿ, ಮಾತಾಜಿ, ಪೋಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿ ಯರು ಹಾಜರಿದ್ದರು.
ಇದನ್ನೂ ಓದಿ: Tumkur News: ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಜಾಗೃತಿ ವಹಿಸಬೇಕು : ಚೇಳೂರು ಪಿಎಸ್ಸೈ ನಾಗರಾಜು