UVA Meridian Bay: ಪ್ರವಾಸಿಗರನ್ನು ಜಾದೂ ಮಾಡಿ ಸೆಳೆಯುವ UVA ಮೆರಿಡಿಯನ್ ಬೇ!
ಕುಂದಾಪುರ ತಾಲೂಕಿನ ಪ್ರಮುಖ ಆಕರ್ಷಣೆ ಏನು ಅಂತ ಯಾರೇ ಕೇಳಿದರೂ ಅದಕ್ಕೆ ಉತ್ತರವಾಗಿ ಸಿಗುವುದು ಈಗ ಒಂದೇ ತಾಣ. ಅದು ಯುವ ಮೆರಿಡಿಯನ್ ಬೇ ಎಂಬ ಆತಿಥ್ಯ ತಾಣ. ಇದು ಆತಿಥ್ಯ ತಾಣ ಎಂದಷ್ಟೇ ಹೇಳಿದರೆ ಬಹಳ ಸೀಮಿತಗೊಳಿಸಿದಂತಾಗಿಬಿಡುತ್ತದೆ. ಇದೊಂದು ಅಕ್ಷರಶಃ ಮಾಯಾ ಲೋಕ. ಬೇರೆಯದೇ ಪ್ರಪಂಚ.


ಕುಂದಾಪುರ ತಾಲೂಕಿನ ಪ್ರಮುಖ ಆಕರ್ಷಣೆ ಏನು ಅಂತ ಯಾರೇ ಕೇಳಿದರೂ ಅದಕ್ಕೆ ಉತ್ತರವಾಗಿ ಸಿಗುವುದು ಈಗ ಒಂದೇ ತಾಣ. ಅದು ಯುವ ಮೆರಿಡಿಯನ್ ಬೇ ಎಂಬ ಆತಿಥ್ಯ ತಾಣ. ಇದು ಆತಿಥ್ಯ ತಾಣ ಎಂದಷ್ಟೇ ಹೇಳಿದರೆ ಬಹಳ ಸೀಮಿತಗೊಳಿಸಿದಂತಾಗಿಬಿಡುತ್ತದೆ. ಇದೊಂದು ಅಕ್ಷರಶಃ ಮಾಯಾಲೋಕ. ಬೇರೆಯದೇ ಪ್ರಪಂಚ. ಕುಂದಾಪುರ ದಂಥ ಪುಟ್ಟ ಊರ ಬಳಿ ಎಕರೆಗಟ್ಟಲೆ ಜಾಗದಲ್ಲಿ ನಿರ್ಮಾಣ ಗೊಂಡಿರುವ ಯುವ ಮೆರಿಡಿಯನ್ ಬೇ ಒಂದು ಸ್ವರ್ಗ.
ದೇಶದ ಯಾವ ರೆಸಾರ್ಟ್ ಗೂ ಸೆಡ್ಡು ಹೊಡೆಯುವಂಥ ಹೆಮ್ಮೆಯ ಆತಿಥ್ಯ ತಾಣ ಕರ್ನಾಟಕದ ಕುಂದಾಪುರದಲ್ಲಿದೆ ಎಂದು ನಾವು ಎದೆ ತಟ್ಟಿ ಹೇಳಬಹುದು. ಕರ್ನಾಟಕದಲ್ಲಿ ಅತ್ಯಾಧುನಿಕ ಫಿಲ್ಮ್ ಸ್ಟುಡಿಯೋ ಇಲ್ಲ ಎಂಬ ಕೊರಗು ಬೇಡ. ಯುವ ಮೆರಿಡಿಯನ್ ಸ್ಟುಡಿಯೋ ಇದೆ. ಅತ್ಯುತ್ತಮ ಅಮ್ಯೂಸ್ಮೆಂಟ್ ಪಾರ್ಕ್, ವಾಟರ್ ಪಾರ್ಕ್ ಕರ್ನಾಟಕದಲ್ಲಿ ಎಲ್ಲಿದೆ ಎಂದು ಪ್ರಶ್ನಿಸಿದರೂ ಅದೇ ಉತ್ತರ.. ಯುವ ಮೆರಿಡಿಯನ್ ಬೇ!
ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನೇ ಪುಡಿಗಟ್ಟಿದ ಚಿತ್ರ ಕಾಂತಾರದ ಪ್ರೀಕ್ವೆಲ್ ನ ಚಿತ್ರೀಕರಣಕ್ಕೆ ಹೊಂಬಾಳೆ ಫಿಲ್ಮ್ಸ್ ಅಯ್ಕೆ ಮಾಡಿಕೊಂಡದ್ದು ಯುವ ಮೆರಿಡಿಯನ್ ಎಂಬ ಭೂಸ್ವರ್ಗವನ್ನು. ಇದರ ಖ್ಯಾತಿ ಎಂಥದ್ದು ಎಂಬುದಕ್ಕೆ ಇದೊಂದು ಚಿಕ್ಕ ನಿದರ್ಶನವಷ್ಟೆ.

ಯುವ ಮೆರಿಡಿಯನ್ನಲ್ಲಿ ಏನುಂಟು ಏನಿಲ್ಲ?
ಇಲ್ಲಿ ತೊಯ್ದಷ್ಟು ತೊಯ್ಯಬೇಕೆನಿಸುವ ಕೃತಕ ಸಮುದ್ರದ ಅಲೆ ಇದೆ. ಬೆಚ್ಚಿ ಬೀಳುವ ಸುಂದರ ಅನುಭವ ನೀಡುವ ಭೂತದ ಪಾರ್ಕ್ ಇದೆ. ಮಕ್ಕಳ ಮೇಲೆ ಸಮ್ಮೋಹಿನಿ ಮಾಡುವ ವಾಟರ್ ಪಾರ್ಕ್ ಇದೆ. ಇಲ್ಲೊಂದು ಸಂಭ್ರಮದ ಜಾತ್ರೆಯೂ ಇದೆ. ವಯೋವೃದ್ಧರ ಮನರಂಜನೆಗೆಂದೇ ಇಲ್ಲೊಂದು ತ್ರಿಡಿ ಎಫೆಕ್ಟ್ ಹಾಲ್ ಇದೆ. ಕೈಗೆಟುಕುವಂತೆ ಸಿಗುವ ಆಯಾ ವಾತಾವರಣದ ಸೀಸನ್ನಿನ ಹಣ್ಣುಗಳಿವೆ. ಫಿಟ್ನೆಸ್ಸಿಗೆ ಏನೂ ಇಲ್ವಾ ಅಂತ ಕೇಳಿದರೆ ಸುಸಜ್ಜಿತ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಇದೆ. ಮೈಕೈಗೆ ಉಲ್ಲಾಸ ಬೇಕೆಂದರೆ ಸ್ಪಾ ಇದೆ. ದೇಹದಣಿಸಿ ಮನಸ್ಸು ಅರಳಿಸುವ ಈಜುಕೊಳವಿದೆ. ನಾಲಗೆ ಸಂತೃಪ್ತಿಗೆ ಉದರಲಾಲನೆಗೆ ನಿಮಿಷಾರ್ಧದಲ್ಲಿ ಪ್ರತ್ಯಕ್ಷವಾಗುವ ಸರ್ವ ರೀತಿಯ ರುಚಿಕರ ಆಹಾರಗಳಿವೆ.
ವಾಕಿಂಗ್ ಮಾಡಲು ಹಸಿರು ಸಿರಿಯ ಮಾರ್ಗಗಳಿವೆ. ಕಂಡುಕೇಳರಿಯದ ಸಾವಿರಾರು ಜಾತಿಯ ಗಿಡಮರಗಳಿವೆ. ಯಾವ ಆಟ ಆಡಬೇಕು ಅನಿಸಿದರೂ ಆ ಆಟಕ್ಕೆ ಬೇಕಾದ ಜಾಗವಿದೆ. ಸೌಕರ್ಯವಿದೆ. ಅಷ್ಟೇ ಯಾಕೆ ಡೆಸ್ಟಿನೇಷನ್ ವೆಡ್ಡಿಂಗ್ ಆಗೋಕೂ ಇದು ಹೇಳಿ ಮಾಡಿಸಿದ ಜಾಗ. ಸಂಗೀತ ಕಛೇರಿ, ಮ್ಯೂಸಿಕಲ್ ನೈಟ್, ಬರ್ತ್ ಡೇ ಪಾರ್ಟಿ, ಮೆಹಂದಿ, ಏನು ಪ್ಲಾನ್ ಮಾಡಿದರೂ ಅದಕ್ಕೆ ಯುವ ಮೆರಿಡಿಯನ್ ಅದ್ಭುತ ವೇದಿಕೆ ಒದಗಿಸಿಕೊಡುತ್ತದೆ. ಕರ್ನಾಟಕದ ಸಿನಿಮಾ ಸ್ಟುಡಿಯೋಗಳೇ ನಾಚಬೇಕು, ಅಂಥ ಹೊರಾಂಗಣ ಫ್ರೇಮ್ ಗಳು ಯುವ ಮೆರಿಡಿಯನ್ನಲ್ಲಿ ಕ್ಯಾಮೆರಾಗೆ ಸಿಗುತ್ತವೆ. ಇನ್ನು ಗಣ್ಯರು ಹೆಲಿಕಾಪ್ಟರಲ್ಲಿ ಹಾರಿ ಬಂದರೆ ಇಳಿಯೋಕೆ ಹೆಲಿಪ್ಯಾಡ್ ಇದೆ.

ಘಮಘಮಿಸುವ ವಾತಾವರಣ, ಶುಚಿರುಚಿ ಊಟತಿಂಡಿ, ಅತಿಸ್ವಚ್ಛ ಶೌಚಾಲಯಗಳು, ಶುದ್ಧ ನೀರಿನ ವ್ಯವಸ್ಥೆ.. ಒಂದೇ ಎರಡೇ? ಯುವ ಮೆರಿಡಿಯನ್ನ ವೈಭವ ವರ್ಣಿಸುತ್ತಾ ಹೋದರೆ ಕಾಲವೇ ಸಾಲದಾದೀತು. ಇಲ್ಲಿ ಹೇಳಿದ ಒಂದೇ ಒಂದು ಅಂಶವೂ ಉತ್ಪ್ರೇಕ್ಷೆಯ ಮಾತಲ್ಲ. ನೀವೊಮ್ಮೆ ಖುದ್ದು ಭೇಟಿ ನೀಡಿ ಬನ್ನಿ. ಇದರ ಹತ್ತುಪಟ್ಟು ಹೆಚ್ಚು ಹೊಗಳುತ್ತೀರಿ. ಅನುಮಾನವೇ ಬೇಡ ಇದು ಕರ್ನಾಟಕದಲ್ಲೇ ಬೆಸ್ಟ್ ಅಥವಾ ಭಾರತದಲ್ಲೇ ಬೆಸ್ಟ್ ಆತಿಥ್ಯತಾಣ.

ಕುಟುಂಬ ಸಹಿತವಾಗಿ ಹೋಗುವವರಿಗೆ, ಗೆಳೆಯರ ಬಳಗದೊಂದಿಗೆ ಪ್ರವಾಸ ಮಾಡುವವರಿಗೆ ಮನರಂಜನೆ, ಅತ್ಯುತ್ತಮ ಆತಿಥ್ಯ ಜತೆಗೆ ಸುರಕ್ಷತೆ ಇವಿಷ್ಟು ಅತಿ ಮುಖ್ಯವಾಗುತ್ತದೆ. ಅಫ್ಕೋರ್ಸ್ ಇದರ ಜತೆ ಬಜೆಟ್. ಇವೆಲ್ಲದಕ್ಕೂ ನ್ಯಾಯ ಒದಗಿಸುವ ಒಂದು ಜಾಗವಿದ್ದರೆ ಅದು ಯುವ ಮೆರಿಡಿಯನ್ ಬೇ. ಎಲ್ಲ ವಯೋಮಾನದವರ ಅಭಿರುಚಿ ಮತ್ತು ಅಗತ್ಯಗಳಿಗೆ ಹೊಂದುವಂಥ ಕಂಪ್ಲೀಟ್ ಪ್ಯಾಕೇಜ್ ನ ಹುಡುಕಾಟದಲ್ಲಿ ನೀವಿದ್ದರೆ, ನಿಮಗಾಗಿಯೇ ಸೃಷ್ಟಿಯಾಗಿದೆ ಕುಂದಾಪುರದ ಕೋಟೇಶ್ವರದಲ್ಲಿರುವ ಯುವ ಮೆರಿಡಿಯನ್ ಬೇ.

ಸಮಯ ಸಾಲುವುದಿಲ್ಲ
ಯುವ ಮೆರಿಡಿಯನ್ ಬೇ ಎಂಬುದು ಕೋಟೇಶ್ವರ ದಲ್ಲಿರುವ ಒಂದು ವಿಶ್ರಾಮ ಕೋಟೆ ಅಂದರೂ ತಪ್ಪಾಗುವುದಿಲ್ಲ. ಈ ಕೋಟೆಯಲ್ಲಿ ಕೃತಕ ಸಮುದ್ರ, ಈಜುಕೊಳ, ಣಕ್ಕೊಂದು ಕಾಡು, ಒಳಗಡೆ ಹೊಕ್ಕರೆ ವಿಧವಿಧ ಆಟಗಳು. ಇಲ್ಲಿ ಯಾರೇ ಆಗಲೀ ಒಮ್ಮೆ ಪ್ರವೇಶಿಸಿದವರು, ವಾಪಸ್ ಹೊರಡುವ ಮನಸ್ಸೇ ಮಾಡುವುದಿಲ್ಲ. ಸಮಯ ಹೋದದ್ದು ತಿಳಿಯುವುದಿಲ್ಲ. ಯಾವ ಜಗತ್ತಿನಲ್ಲಿದ್ದೇವೆ ಎಂಬುದು ಅರಿವಾಗುವುದಿಲ್ಲ. ಇದೊಂದು ಮೈಮರೆಸುವ ಜಗತ್ತು ಅಷ್ಟೇ.

ದೇಶ ವಿದೇಶಕ್ಕೆ ತಲುಪಿದ ಖ್ಯಾತಿ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಎನ್ನುವಂಥ ಗ್ರಾಮ ಇವತ್ತಿಗೆ ತನ್ನ ಹೆಸರನ್ನು ದೇಶ ವಿದೇಶಗಳಲ್ಲಿ ತಲುಪುವ ಹಾಗೆ ಮಾಡಿಕೊಂಡಿದೆ ಅಂದರೆ ಅದಕ್ಕೆ ಕಾರಣ ಯುವ ಮೆರಿಡಿಯನ್. ಇದು ಪ್ರವಾಸಿಗರೇ ಹೇಳುವ ಮಾತು. ಹಾಗಂತ ಇದು ರಾತ್ರೋರಾತ್ರಿ ತಾನಾಗಿ ಸೃಷ್ಟಿಯಾದ ಉದ್ಭವ ಸ್ವರ್ಗವಾ? ಖಂಡಿತ ಅಲ್ಲ. ಇದರ ಹಿಂದೆ ಉದಯ್ ಕುಮಾರ್ ಶೆಟ್ಟಿ ಮತ್ತು ವಿನಯ್ ಕುಮಾರ್ ಶೆಟ್ಟಿ ಎಂಬ ಸೋದರರ ಶ್ರಮ ಇದೆ.. ಕನಸಿದೆ.. ದೂರದೃಷ್ಟಿ ಇದೆ. ತಾಯಿಯ ಮಾತಿಗೆ ಬೆಲೆ ಕೊಟ್ಟು ಇದೇ ಊರಲ್ಲಿ ಸಾಧಿಸಬೇಕು ಎಂದು ಹೊರಟ ಅಣ್ಣತಮ್ಮಂದಿರ ಛಲದ ಸಾಧನೆ ಇದೆ. UVA ಮೆರಿಡಿಯನ್ ಬೇ ಹೆಸರಲ್ಲಿರುವ U ಮತ್ತು V ಏನೆಂದು ನಿಮಗೀಗ ಅರ್ಥವಾಗಿರಬಹುದು.

ಸ್ವಂತ ಊರಲ್ಲೇ ಉದ್ಯಮಕ್ಕೆ ಪಣ
ವಿಸ್ತಾರ ಜಾಗದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವಾ? ಅತಿಥಿಗಳಿಗೆ ಇಂಥ ಸುಖ ಮತ್ತು ಸಂತೋಷ ದಕ್ಕಲು ಸಾಧ್ಯವಾ ಎಂದು ಅಚ್ಚರಿಗೊಳಿಸುತ್ತಾರೆ UV ಬ್ರದರ್ಸ್. ಕೇವಲ ಹಣ ಗಳಿಸೋದೇ ಉದ್ಯಮ ಎಂದು ಭಾವಿಸಿದ್ದಲ್ಲಿ ಉದಯ್ ಶೆಟ್ಟಿ ಮತ್ತು ವಿನಯ್ ಶೆಟ್ಟಿ ಸೋದರರಿಗೆ ಸಾಕಷ್ಟು ದಾರಿಗಳಿದ್ದವು. ಆದರೆ ಅವರು ಆತಿಥ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ತಮ್ಮ ವಿಶಾಲ ಜಾಗದಲ್ಲಿ ತಮ್ಮ ಕುರಿತು ಹೇಳಿಕೊಳ್ಳಲು ಸಂಕೋಚ ಪಡುವ, ನಮ್ಮ ಕೆಲಸ ಕಾಣಬೇಕು ನಾವಲ್ಲ ಎಂಬುದನ್ನು ಧ್ಯೇಯ ವಾಕ್ಯ ಮಾಡಿಕೊಂಡಿರುವ ಈ ಸೋದರರ ಹೆಸರು ಬೈಲೂರು ಉದಯಕುಮಾರ ಶೆಟ್ಟಿ ಹಾಗೂ ಬೈಲೂರು ವಿನಯಕುಮಾರ ಶೆಟ್ಟಿ.

ಆ ಹೆಸರುಗಳ ಮೊದಲ ಅಕ್ಷರದಿಂದಲೇ 2009ರಲ್ಲಿ UVA ಬ್ರ್ಯಾಂಡ್ ಜನಿಸಿದ್ದು. ಈ ಉದ್ಯಮಕ್ಕೂ ಮುನ್ನ ಸರಕಾರಿ ಗುತ್ತಿಗೆ ಕೆಲಸ ಮಾಡುತ್ತಿದ್ದ ಇವರು ಬೃಹತ್ ನೀರಾವರಿ ಇಲಾಖೆಯ ಅಡಿಯಲ್ಲಿ ಮಹಾರಾಷ್ಟ್ರ, ಆಲಮಟ್ಟಿ ಸೇರಿದಂತೆ ವಿವಿಧೆಡೆ ಕೆಲಸ ಮಾಡಿದ್ದಾರೆ. 2009ರಲ್ಲಿ ವಿಶಾಲ ಜಾಗದಲ್ಲಿ ಯುವ ಮೆರಿಡಿಯನ್ ಬೇ ಪ್ರಾರಂಭಿಸಿದರು. ಅಲ್ಲಿ ಶುರುವಾದ ಪಯಣ ಇಲ್ಲಿಯವರೆಗೆ ಕರೆತಂದಿದೆ. ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಲೇ ಇದೆ. ಇಲ್ಲಿ ಸುಮಾರು 49 ಲಕ್ಸುರಿ ರೂಮ್ ಗಳಿವೆ. ರೆಸಾರ್ಟ್ನಲ್ಲಿ ಜಿಮ್, ಸ್ಪಾ, ಸ್ಮಿಮ್ಮಿಂಗ್ ಫೂಲ್, ಮೂರ್ನಾಲ್ಕು ರೆಸ್ಟೋರೆಂಟ್ಗಳು ಸಿಗಲಿದೆ. ಫೈವ್ ಸ್ಟಾರ್ ಹೊಟೇಲ್ ವ್ಯವಸ್ಥೆ ಲಭ್ಯವಿದೆ.

ಉದಯ್ ವಿನಯ್ ಉವಾಚ
ಮೊದಲಿಗೆ ನಮ್ಮದೇ ದೊಡ್ಡ ಲ್ಯಾಂಡ್ ಇರುವ ಕಾರಣ ಅದನ್ನು ಸಾರ್ವಜನಿಕರಿಗೆ ಸಹಕಾರ ಆಗುವಂತೆ ಬಳಕೆ ಮಾಡಬೇಕು ಹಾಗೂ ನಮಗೂ ಬ್ಯುಸಿನೆಸ್ ಆಗಬೇಕು ಎಂಬ ಉದ್ದೇಶದಿಂದ ಮಾಡಿದ್ದೆವು. ಹಿಂದೆ ಕಾನ್ಫರೆನ್ಸ್ ಹಾಲ್ ರಿಸ್ಕ್ ತೆಗೆದುಕೊಂಡು ಮಾಡಿದ್ದೆವು. ಆದರೆ ನಮ್ಮ ಬಳಿ ರೂಮ್ ಇರಲಿಲ್ಲ. ಇದರಿಂದ ರೆಸಾರ್ಟ್ ಮಾಡಲಾಯಿತು. ಈಗ ನಮ್ಮ ಎರಡು ಮೂರು ಪ್ರಾಪರ್ಟಿ ಸೇರಿ 140 ರೂಮ್ ಗಳಿವೆ. ಇಂದು ಎರಡು ಮೂರು ಕನ್ವೆನ್ ಶನ್ ಹಾಲ್, ಓಪನ್ ಬ್ಯಾಂಕ್ವೆಟ್ ಹಾಲ್ ಗಳಿವೆ. 7-8 ಕಾರ್ಯಕ್ರಮಗಳನ್ನು ಒಮ್ಮೆಲೆ ಮಾಡಬಹುದಾಗಿದೆ. ಕುಂದಾಪುರಕ್ಕೆ ಬಂದಾಗ ಜನರಿಗೆ ಎಂಟರ್ಟೈನ್ಮೆಂಟ್ ಇರಲಿ ಎಂದು 2019ರಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಸಹ ಇಲ್ಲಿಯೇ ಆರಂಭಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಸ್ವಲ್ಪ ಕಷ್ಟವಾಯಿತು. ಬಳಿಕ ಇಂದು ಈ ಭಾಗದಲ್ಲೇ ಒಂದು ಒಳ್ಳೆಯ ಅಮ್ಯೂಸ್ಮೆಂಟ್ ಪಾರ್ಕ್ ಆಗಿದೆ. ಸಾವಿರಕ್ಕೂ ಅಧಿಕ ವಾಹನಕ್ಕೆ ಪಾರ್ಕಿಂಗ್ ಸಹ ಮಾಡಲಾಗಿದೆ.

ಕಾಂತಾರ 1 ಶೂಟ್ ಆಗಿದ್ದು ಇಲ್ಲೇ!
ದೇಶಾದ್ಯಂತ ಸದ್ದು ಮಾಡಿದ ಕಾಂತಾರ ಚಿತ್ರದ ಪ್ರೀಕ್ವೆಲ್ ಶೂಟಿಂಗ್ಗೆ ರಿಷಭ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ಆಯ್ಕೆ ಮಾಡಿಕೊಂಡಿದ್ದು UVA ಮೆರಿಡಿಯನ್ ಸ್ಟುಡಿಯೋ. ಇಲ್ಲಿ ಬರೋಬ್ಬರಿ 15 ತಿಂಗಳು ಕಾಂತಾರ ಚಿತ್ರಿಕರಣ ನಡೆಸಿದೆ. ಭವ್ಯವಾದ ಸೆಟ್ಟುಗಳನ್ನು ಹಾಕಿ ವೈಭವದ ದೃಶ್ಯಗಳನ್ನು ಚಿತ್ರಿಸಲಾಗಿದೆ. ಕಲಾ ನಿರ್ದೇಶಕ ಅರುಣ್ ಸಾಗರ್ ಸೆಟ್ ಹಾಕುವ ಸಮಯದಲ್ಲಿ ರೆಸಾರ್ಟ್ನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದರು. ಕಾಂತಾರ ಮಾತ್ರವಲ್ಲದೆ ಹಲವಾರು ಭಾಷೆಗಳ ಚಿತ್ರಗಳು ಇಲ್ಲಿ ಈಗ ಚಿತ್ರೀಕರಣಗೊಳ್ಳುತ್ತಿದೆ. ರವಿ ಬಸ್ರೂರ್ ಸಹ ಇಲ್ಲಿ ರೆಕಾರ್ಡಿಂಗ್ ಮಾಡಿದ್ದಾರೆ. ಇಂಡೋರ್ ಶೂಟಿಂಗ್ ಇಲ್ಲಿ ಹೆಚ್ಚು ನಡೆಯುತ್ತದೆ.

ದಿಗ್ಗಜರ ಭೇಟಿ
ಖ್ಯಾತ ಸಂಗೀತಗಾರ್ತಿ ಎಸ್ ಜಾನಕಿ ಅವರ ಅವಾರ್ಡ್ ಕಾರ್ಯಕ್ರಮ ಇಲ್ಲೇ ನಡೆದಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ರುಕ್ಮಿಣಿ ವಸಂತ್, ನಟ ಗುಲ್ಶನ್ ದೇವಯ್ಯ, ಮಲಯಾಳಂ ಸ್ಟಾರ್ ನಟ ಜಯರಾಂ, ಕಾಂತಾರ ನಾಯಕ ರಿಷಬ್ ಶೆಟ್ಟಿ, ಸಿಂಗಂ ಖ್ಯಾತಿಯ ಅಣ್ಣಾಮಲೈ, ಗೋವಾ ಮಾಜಿ ಸಿಎಂ, ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ನೂರಾರು ಮಂದಿ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಸ್ಟುಡಿಯೋ ಕೂಡ ಕುಂದಾಪುರ ತಾಲೂಕಿನದ್ದೇ ಎಂಬುದು ಗಮನಕ್ಕಿರಲಿ.