ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayanagar News: ವಿಶ್ವ ಪ್ರವಾಸೋದ್ಯಮ ದಿನ ಉದ್ಘಾಟಿಸಿ ಪುರಾತತ್ವ ಇಲಾಖೆ ಅಧಿಕಾರಿ ಸಿ.ದೇವರಾಜ್ ಹೇಳಿಕೆ

ವಿಶ್ವ ಪ್ರವಾಸೋದ್ಯಮ ದಿನವನ್ನು ಈ ವರ್ಷ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಮತ್ತು ಪರಂಪರೆಯ ಎರಡು ಸಹ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಐತಿಹಾಸಿಕ ಪರಂಪರೆಯನ್ನು ಪೋಷಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಪ್ರವಾಸೋದ್ಯಮದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ

ಪ್ರವಾಸಿ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಿ.ದೇವರಾಜ್ ಹೇಳಿಕೆ

-

Ashok Nayak Ashok Nayak Sep 27, 2025 10:08 PM

ಹೊಸಪೇಟೆ: ಸ್ಥಳೀಯ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಭಕ್ತಿ ಕೇಂದ್ರಗಳ ಸಂರಕ್ಷಣೆಯು ಪ್ರತಿಯೊಬ್ಬರು ಆದ್ಯ ಕರ್ತವ್ಯವೆಂದು ಭಾವಿಸಬೇಕು ಎಂದು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಸಿ.ದೇವರಾಜ್ ಹೇಳಿದರು.

ವಿಶ್ವವಿಖ್ಯಾತ ಹಂಪಿಯ ಶ್ರೀವಿಜಯ ವಿಠಲ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಪ್ರವಾಸೋ ದ್ಯಮ ಇಲಾಖೆ ಮತ್ತು ಭಾರತೀಯ ಪುರಾತತ್ವ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವ ಪ್ರವಾಸೋದ್ಯಮ ದಿನವನ್ನು ಈ ವರ್ಷ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಮತ್ತು ಪರಂಪರೆಯ ಎರಡು ಸಹ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಐತಿಹಾಸಿಕ ಪರಂಪರೆಯನ್ನು ಪೋಷಿಸಿ ಬೆಳೆಸು ವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ. ಪ್ರವಾಸೋದ್ಯಮದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ ಎಂದರು.

ಇದನ್ನೂ ಓದಿ: BY Vijayendra: ಯಾವುದೇ ಜಾತಿ, ಸಮಾಜದವರು ಧರ್ಮದ ಕಾಲಂನಲ್ಲಿ 'ಹಿಂದೂ' ಎಂದೇ ಬರೆಸಿ: ಬಿ.ವೈ.ವಿಜಯೇಂದ್ರ ಮನವಿ

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ.ಎಸ್.ತಳಕೇರಿ ಮಾತನಾಡಿ, ಪ್ರವಾಸೋ ದ್ಯಮಕ್ಕೆ ಹೆಚ್ಚೆಚ್ಚು ಜನರನ್ನು ಆಕರ್ಷಿಸುವ ಕಾರ್ಯವನ್ನು ಇಲಾಖೆ ಹಮ್ಮಿಕೊಳ್ಳತ್ತಿದೆ. ಪ್ರವಾಸಿ ತಾಣದಲ್ಲಿರುವ ಹೊಟೇಲ್ ಮಾಲೀಕರು, ಹೋಂಸ್ಟೇಗಳು, ಕೈಗಾರಿಕ ಮತ್ತು ವಾಣಿಜ್ಯ ಉದ್ಯಮಿ ಗಳಿಗೆ ಇಲಾಖೆಯಿಂದ ಮುಕ್ತವಾಗಿ ಸಹಕಾರ ನೀಡಲಾಗುತ್ತಿದೆ. ಈ ವರ್ಷ ಹಂಪಿಯಲ್ಲಿ 42 ನೂತನ ತಾಣಗಳನ್ನು ಗುರುತಿಸಿ ಪ್ರವಾಸಿಗಳಿಗೆ ವೀಕ್ಷಣಾ ಸ್ಥಳಗಳನ್ನು ಹೆಚ್ಚಿಸಲಾಗಿದೆ. ಪ್ರವಾಸೋದ್ಯಮಕ್ಕೆ ಸ್ಥಳೀಯರಿಂದ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನಿ ಕೊತಂಬರಿ ಮಾತನಾಡಿ, ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ವಲಯದ ಕುರಿತು ಜಾಗೃತಿ ಮೂಡಿಸುವುದು ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಹಂಪಿಯ ಅತ್ಯಂತ ಪ್ರಾಕೃತಿಕ ಸೌಂದರ್ಯ ಮತ್ತು ಧಾರ್ಮಿಕ ಸ್ಥಳಗಳ ಹಿನ್ನಲೆ. ಪ್ರವಾಸಿಗರನ್ನು ಕೈಬಿಸಿ ಆಕರ್ಷಿಸುತ್ತಿದೆ. ದೇಶದಲ್ಲಿ ಹಿಂದುತ್ವ ರಕ್ಷಕರಾಗಿ ರಚನೆಯಾದ ಸಾಮ್ರಾಜ್ಯವೊಂದಿದ್ದರೇ ಅದು ವಿಜಯನಗರ. ಇಲ್ಲಿನ ಸಂಸ್ಕೃತಿ, ಸಂಸ್ಕಾರ ಇಡೀ ವಿಶ್ವವನ್ನು ಬೆರಗುಗೊಳಿಸಿದೆ ಎಂದರು.

ಇದೇ ವೇಳೆ ಪ್ರವಾಸಿ ಮಿತ್ರರಿಗೆ, ಉತ್ತಮ ಪ್ರವಾಸಿ ಮಾರ್ಗದರ್ಶಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಬ್ರಹ್ಮಕುಮಾರಿ ಈಶ್ವರಿಯ ಸಂಸ್ಥೆಯ ಮಾನಸ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ದೀಪಕ್, ಪುರಾತತ್ವ ಇಲಾಖೆ ಸರ್ವೇಕ್ಷಣಾಧಿಕಾರಿ ರವಿಕುಮಾರ, ಹೆರಿಟೇಜ್ ಮಾಲೀಕ ಪ್ರಸನ್ನ, ಪ್ರವಾಸಿ ಮಾರ್ಗದರ್ಶಕ ಸಂಘದ ಉಪಾಧ್ಯಕ್ಷ ದೇವರಾಜ, ಕಮಲಾಪುರ ಸಾರಿಗೆ ವ್ಯವಸ್ಥಾಪಕಿ ಮಂಜುಳಾ ಸೇರಿದಂತೆ ಪ್ರವಾಸಿ ಮಾರ್ಗದರ್ಶಕರು ಭಾಗವಹಿಸಿದ್ದರು.