ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ: ಕೃಷ್ಣಾ ನದಿಯ ನೀರಿನ ಹರವಿನಲ್ಲಿ ಚೇತರಿಕೆ
ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆಯು ವರದಿ ಪ್ರಕಾರ, ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಬಿದ್ದ ಪ್ರಮಾಣದ ಅಂಕಿಅಂಶಗಳ ಅನ್ವಯ ಕೊಯಿನಾದಲ್ಲಿ 116 ಎಮ್.ಎಮ್.. ನವಜಾದಲ್ಲಿ 161 ಎಂ.ಎಂ ಕೃಷ್ಣಾ ನದಿಯ ಉಗಮ ಸ್ಥಾನವಾದ ಮಹಾಬಲೇಶ್ವರ ದಲ್ಲಿ 179 ಎಂ.ಎಂ ಮಳೆಯಾಗಿದೆ.
-
ಆಲಮಟ್ಟಿ: ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾನುವಾರದಿಂದ ವ್ಯಾಪಕ ಮಳೆ ಬೀಳುತ್ತಿರುವುದರ ಪರಿಣಾಮ ಕೃಷ್ಣಾ ನದಿಯ ನೀರಿನ ಹರವಿನ ಮಟ್ಟ ಹೆಚ್ಚಾಗುತ್ತ ಲಿದೆ. ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ ಭಾರತೀಯ ಹವಾಮಾನ ಇಲಾಖೆಯು ವರದಿ ಪ್ರಕಾರ, ಕೃಷ್ಣಾನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಬಿದ್ದ ಪ್ರಮಾಣದ ಅಂಕಿಅಂಶಗಳ ಅನ್ವಯ ಕೊಯಿನಾದಲ್ಲಿ 116 ಎಮ್.ಎಮ್.. ನವಜಾದಲ್ಲಿ 161 ಎಂ.ಎಂ ಕೃಷ್ಣಾ ನದಿಯ ಉಗಮ ಸ್ಥಾನವಾದ ಮಹಾಬಲೇಶ್ವರದಲ್ಲಿ 179 ಎಂ.ಎಂ ಮಳೆಯಾಗಿದೆ.
ಅದೇ ರೀತಿ, ಕೃಷ್ಣಾ ಜಲಾನಯನ ಪ್ರದೇಶದ ಪ್ರಮುಖ ಉಪನದಿಗಳಾದ, ಧೂಮ್ ದಲ್ಲಿ 33 ಎಂ.ಎಂ. ಉರ್ಮೊದಿಯಲ್ಲಿ 45 ಎಮ್.ಎಮ್. ತರಾಲಿ, ಯಲ್ಲಿ 81 ಎಂ.ಎಂ. ವರ್ಣಾ, ದಲ್ಲಿ 72 ಎಂ.ಎಂ. ರಾಧಾ ನಗರಿಯಲ್ಲಿ 237 ಎಂ.ಎಂ. ಧೂಧ ಗಂಗಾದಲ್ಲಿ, 169 ಎಂ.ಎಂ, ಮಳೆ ಬಿದ್ದಿದ್ದು, ಕೃಷ್ಣೆಯ ಒಡಲಲ್ಲಿ ನೀರಿನ ಹರವಿನ ಪ್ರಮಾಣ ಕ್ರಮೇಣ ಹೆಚ್ಚಾಗಲಿದೆ ಲಭ್ಯವಿರುವ ಮಾಹಿತಿ ಪ್ರಕಾರ, ಇಂದು ಬೆಳಗ್ಗೆ ರಾಜಾಪುರ ಬ್ಯಾರೇಜ್ ದಿಂದ 50 ಸಾವಿರ ಕ್ಯುಸೆಕ್ ನೀರು ನದಿಗೆ ಹರಿ ಬಿಡಲಾಗುತ್ತಿದ್ದು ಅಷ್ಟೆ ಪ್ರಮಾಣದ ನೀರು ರಾಜ್ಯದ ಹಿಪ್ಪರಗಿ ಜಲಾಶಯಕ್ಕೆ ಬಂದು ಸೇರುತ್ತಿದೆ. ಹಿಪ್ಪರಗಿ ಬ್ಯಾರೇಜ್'ದ ಗೇಟುಗಳಿಂದ ಸುಮಾರು 50 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.
ಇದನ್ನೂ ಓದಿ: Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ
ಇಂದು ಬೆಳಗ್ಗೆ ಆಲಮಟ್ಟಿ ಜಲಾಶಯಕ್ಕೆ ನೀರಿನ ಒಳ ಹರಿವು ಪ್ರಾರಂಭ
ಹಿಪ್ಪರಗಿ ಜಲಾಶಯದಿಂದ ಹೊರ ಬಿಡಲಾಗುತ್ತಿರುವ ಸುಮಾರು 50 ಸಾವಿರ ಕ್ಯೂಸೆಕ್ ನೀರಿನಲ್ಲಿ ನಾಳೆ ಬೆಳಗ್ಗೆ ಸುಮಾರು 6 ಸಾವಿರ ಕ್ಯುಸೆಕ್ ನೀರು ಆಲಮಟ್ಟಿ ಜಲಾಶಯಕ್ಕೆ ಬಂದು ಸೇರಲಿದ್ದು ಸಾಯಂಕಾಲದ ಹೊತ್ತಿಗೆ 12 ಸಾವಿರ ಕ್ಯುಸೆಕ್ʼಗೆ ಹೆಚ್ಚಲಿದೆ ಎಂಬುವುದು ಕೃಷ್ಣಾ ಭಾಗ್ಯ ಜಲನಿಗಮದ ಆಲಮಟ್ಟಿಯ ತಾಂತ್ರಿಕ ವಲಯದಲ್ಲಿ ಆಶಾ ಭಾವನೆ ಮೂಡಿದೆ.
ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ, ಇನ್ನು ಒಂದು ವಾರ ಇದೇ ರೀತಿ ಮಳೆ ಮುಂದುವರೆಯಲಿದೆ ಎಂದು ಹೇಳಲಾಗಿದ್ದು, ಇದಕ್ಕೆ ಪೂರಕ ಎಂಬಂತೆ ಇಂದು ಸಾಯಂಕಾಲದ 5 ಘಂಟೆಗೆ ಕಲ್ಲೋಳ ಬ್ಯಾರೇಜ್ ದಿಂದ 56 ಸಾವಿರ ಕ್ಯುಸೆಕ್ ನೀರನ್ನು ನದಿ ಪಾತ್ರದ ಕೆಳಗೆ ಬಿಡಲಾಗು ತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದೇ ರೀತಿ, ಮಳೆಯು ಕೃಷ್ಣಾ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಮಳೆ ಮುಂದುವರೆದರೆ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದ ನೀರು ಸಂಗ್ರಹಣೆಯ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಲಿದೆ.