Indi News: ಜನಹಿತ ಕಾಪಾಡುವ ಜಿಎಸ್ಟಿ ಸರಳೀಕರಣ: ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ
ರಾಜ್ಯದ ಸಾಮಾನ್ಯ ಜನರ ತೆರಿಗೆ ಹಣದಲ್ಲಿ ರಾಜ್ಯ ರ‍್ಕಾರ ಸಾಮಾಜಿ,ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರು ವುದು ಹಿಂದೂ ರ‍್ಮದ ಎಲ್ಲ ಸಮಾಜಗಳಿಗೆ ಬಾಧಕವಾಗಿದೆ.ಹಿಂದೂಳಿದ ಎಲ್ಲ ಜಾತಿಗಳಲ್ಲಿ ಕ್ರೀಶ್ಚನ್ ಎಂಬ ಪದ ಸೇರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಾಳಕ್ಕೆ ಕುಣಿಯುತ್ತಿದ್ದಾರೆ

-

ಇಂಡಿ : ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್ಟಿ ಪರಿಷ್ಕರಿಸಿ, ಸರಳೀಕರಣಗೊಳಿಸಿದ್ದರಿಂದ ಬಡವರು,ಮಧ್ಯಮ ರ‍್ಗದ ಜನರಿಗೆ ಅನುಕೂಲವಾಗಿದೆ. ಜಿಎಸ್ಟಿ ಸರಳಿಕರಣಗೊಳಿಸಿದ್ದರಿಂದ ರಾಜ್ಯ ರ‍್ಕಾರಕ್ಕೆ ಪ್ರತಿ ರ‍್ಷ ಬರುವ ೧೫ ಸಾವಿರ ಕೋಟಿ ಕಡಿತಗೊಳ್ಳುತ್ತಿದ್ದು,ಮುಖ್ಯಮಂತ್ರಿಗಳು ವಿರೋಧ ಮಾಡುತ್ತಿದ್ದಾರೆ. ಜಿಎಸ್ಟಿ ಅನುಧಾನದಲ್ಲಿಯೇ ಯೋಜನೆಗಳನ್ನು ರೂಪಿಸಿರುವ ರಾಜ್ಯ ರ‍್ಕಾರಕ್ಕೆ ಜಿಎಸ್ಟಿ ಕಡಿತದಿಂದ ತೊಂದರೆಯಾಗುತ್ತಿರುವುದರಿಂದ ಜಿಎಸ್ಟಿ ಕಡಿತ, ಸರಳೀಕರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಆರೋಪಿಸಿದರು.
ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕರ‍್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದರು.
ಪ್ರಧಾನಿ ಮೋದಿ ಅವರು ಜಿಎಸ್ಟಿ ಇಳಿಸಿದ್ದರಿಂದ ದೇಶದ ಅಭಿವೃದ್ದಿಯ ಜತೆಗೆ ಪ್ರಜೆಗಳಿಗೆ ಅನುಕೂಲವಾಗಿದೆ.ಇದು ಜನಹಿತ ಕಾಪಾಡುವ ಜಿಎಸ್ಟಿ ಸರಳಿಕರಣ ಕೆಲಸವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Indi News: ಶ್ರೀಸಂಗನಸವ ಶ್ರೀಗಳು ಶಿಕ್ಷಣ ದಾಸೋಹಿ: ಶಾಸಕ ಯಶವಂತರಾಯಗೌಡ ಪಾಟೀಲ
ರಾಜ್ಯದ ಸಾಮಾನ್ಯ ಜನರ ತೆರಿಗೆ ಹಣದಲ್ಲಿ ರಾಜ್ಯ ರ‍್ಕಾರ ಸಾಮಾಜಿ,ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರು ವುದು ಹಿಂದೂ ರ‍್ಮದ ಎಲ್ಲ ಸಮಾಜಗಳಿಗೆ ಬಾಧಕವಾಗಿದೆ.ಹಿಂದೂಳಿದ ಎಲ್ಲ ಜಾತಿಗಳಲ್ಲಿ ಕ್ರೀಶ್ಚನ್ ಎಂಬ ಪದ ಸೇರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ತಾಳಕ್ಕೆ ಕುಣಿಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಸಮೀಕ್ಷೆಯಿಂದ ಹಿಂದೂ ರ‍್ಮದ ಹಲವು ಜಾತಿಗಳಿಗೆ ಅನ್ಯಾಯವಾಗುತ್ತದೆ. ಸಮಿಕ್ಷೆಯಿಂದ ಹಿಂದೂ ರ‍್ಮ ಸಂಪರ‍್ಣ ಒಡೆಯುವ, ಪಜಾ ಸಮುದಾಯಕ್ಕೆ ಸಿಗುವ ಸೌಲಭ್ಯಗಳು ಸಿಗದಂತೆ,ಎಸ್ಟಿ ಸಮುದಾಯಕ್ಕೆ ಶಕ್ತಿ ಇಲ್ಲದಂತೆ ಮಾಡುವ ಕುತಂತ್ರವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ರ‍್ಕಾರದ ಹಲವು ಸಚಿವರನ್ನು ಇದನ್ನು ವಿರೋಧಿಸಿದ್ದಾರೆ.ಆದರೂ ಮುಖ್ಯಮಂತ್ರಿಗಳು ಹಟಕ್ಕೆ ಬಿದ್ದಂತೆ ಈ ಸಮೀಕ್ಷೆ ಮುಂದುವರೆಸಿದ್ದಾರೆ.ನ್ಯಾಯಯುತ ಸಮೀಕ್ಷೆ ನಡೆಸಬೇಕು. ಹಿಂದೂ ರ‍್ಮಕ್ಕೆ ಅನ್ಯಾಯವಾಗದಂತೆ ನಡೆಯಬೇಕು. ಇರುವ ಜಾತಿಗಳನ್ನೇ ಮುಂದುವರೆಸಿಕೊಂಡು ಹೋಗ ಬೇಕು ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ಮಲ್ಲಿಕರ‍್ಜುನ ಕಿವಡೆ, ಶೀಲವಂತ ಉಮರಾಣಿ, ಸಿದ್ದಲಿಂಗ ಹಂಜಗಿ,ಅನೀಲ ಜಮಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.