ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi(Vijayapura) News: ವಿಶ್ವ “ಬಾಲಕಾರ್ಮಿಕ ವಿರೋಧಿ”ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ

ಪ್ರತೀ ವರ್ಷ ಜೂನ್ 12ರಂದು ಬಾಲ ಕಾರ್ಮಿಕ ವಿರೋಧಿನ ದಿನ ಆಚರಣೆ ಮಾಡಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿಯ ವಿರುಧ್ಧ ಜಾಗೃತಿ ಮೂಡಿಸುವುದು ಮತ್ತು ಈ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕುವ ಉದ್ದೇಶದಿಂದ ಈ ಯೋಜನೆಯನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ 2002 ರಲ್ಲಿ ಈ ದಿನವನ್ನು ಪ್ರಥಮವಾಗಿ ಆಚರಿಸಿತು

ಕಾನೂನು ಅರಿವು ನೆರವು ಕಾರ್ಯಕ್ರಮ

ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ವಿಶ್ವ “ಬಾಲಕಾರ್ಮಿಕ ವಿರೋದಿ”ü ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. -

Ashok Nayak Ashok Nayak Jun 13, 2025 10:25 AM

ಇಂಡಿ: ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ವಿಶ್ವ “ಬಾಲಕಾರ್ಮಿಕ ವಿರೋಧಿ”ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನುದ್ದೇಶಿಸಿ ಹಿರಿಯ ದಿವಾಣಿ ನ್ಯಾಯಾಧೀಶ ಕೊಟ್ಟೆಪ್ಪ ಕಾಂಬಳೆ ಮಾತನಾಡಿ, ಪ್ರತೀ ವರ್ಷ ಜೂನ್ 12ರಂದು ಬಾಲ ಕಾರ್ಮಿಕ ವಿರೋಧಿನ ದಿನ ಆಚರಣೆ ಮಾಡಲಾಗುತ್ತದೆ. ಬಾಲಕಾರ್ಮಿಕ ಪದ್ಧತಿಯ ವಿರುಧ್ಧ ಜಾಗೃತಿ ಮೂಡಿಸುವುದು ಮತ್ತು ಈ ಪಿಡುಗನ್ನು ಸಂಪೂರ್ಣ ವಾಗಿ ತೊಡೆದು ಹಾಕುವ ಉದ್ದೇಶದಿಂದ ಈ ಯೋಜನೆಯನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ೨೦೦೨ ರಲ್ಲಿ ಈ ದಿನವನ್ನು ಪ್ರಥಮವಾಗಿ ಆಚರಿಸಿತು ಎಂದು ತಿಳಿಸಿದರು.

ಇದನ್ನೂ ಓದಿ: Indi (Vijayapura) News: ವಿಕಲಚೇತನರಿಗೆ, ವಯೋವೃದ್ದರಿಗೆ ಕಾಳಜಿ ವಹಿಸಿ: ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ

ನ್ಯಾಯವಾದಿ ಡಿ.ವೈ. ಮೇಡೆಗಾರ ಮಾತನಾಡಿ, ಮಗುವಿನ ವಯಸ್ಸು, ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಕ್ಕೆ ಸೂಕ್ತವಲ್ಲದ ಕೆಲಸವನ್ನು ಬಾಲ ಕಾರ್ಮಿಕ ಪಧ್ಧತಿ ಎಂದು ಹೇಳಲಾಗುತ್ತದೆ. 14 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಸಂಘ-ಸಂಸ್ಥೆ, ವೈಯಕ್ತಿಕವಾಗಿಯೂ ಯಾರೂ ಸಹ ಕೆಲಸ ಕ್ಕಾಗಿ ಬಳಸಿಕೊಳ್ಳಬಾರದೆಂದು ಕಾನೂನಿದ್ದು ಅಂತಹದ್ದು ಕಂಡು ಬಂದರೆ ಅವರ ವಿರುಧ್ಧ ಕಾನೂನಿನಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಎಂದರು.

ಕಿರಿಯ ದಿವಾಣಿ ನ್ಯಾಯಾಧೀಶ ಸುನಿಲ್ ಕುಮಾರ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ವಿಕಾಸ ದಳವಾಯಿ ವೇದಿಕೆಯಲ್ಲಿದ್ದರು.

ನ್ಯಾಯವಾದಿಗಳಾದ ಎ.ಎ.ಗಜಾಕೊಶ, ಎನ್.ಕೆ.ನಾಡಪುರೊಹಿತ, ಎಸ್.ಆರ್.ಬಿರಾದಾರ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಖಿ ಕಟ್ಟಿಮನಿ, ಐ.ಕೆ.ಗಚ್ಚಿನಮಾಲ, ಮಲ್ಲೇಶ್ ಯಂಬತ್ನಾಳ, ಕಾರ್ಮಿಕ ಇಲಾಖೆ ದತ್ತು ದೇವರಮನಿ ಭಾಗವಹಿಸಿದ್ದರು.