#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಪ್ರಜಾಪ್ರಭುತ್ವ ಯಶಸ್ಸಿಗೆ ಸಂವಿಧಾನ ಕೊಡುಗೆ ಅಪಾರ: ಶಾಸಕ ಯಶವಂತರಾಯಗೌಡ ಪಾಟೀಲ

ದೇಶ ಸ್ವಾತಂತ್ರ್ಯ ನಂತರ ಯಾವ ವಿಧದಲ್ಲಿ ದೇಶ ಸಾಗ ಬೇಕು ಎಂಬ ಪರಿಕಲ್ಪನೆಯಿಂದ ಡಾ.ಬಿ.ಆರ್ ಅಂಬೇಡ್ಕರವರು ಸಂವಿಧಾನ ರಚನೆ ಮಾಡಿ ಸರ್ವರಿಗೂ ಸಮಾನ ಅವಕಾಶ ನೀಡಿದ್ದಾರೆ

ಭಾರತ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರೆದಿದೆ

ತಾಲೂಕಾ ಆಡಳಿತ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.

Profile Ashok Nayak Jan 26, 2025 9:59 PM

ಇಂಡಿ: ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಹಾಗೂ ಸಮಸಮಾಜದ ನಿರ್ಮಾಣಕ್ಕೆ ಸಂವಿಧಾನದ ಕೊಡುಗೆ ಸಾಕಷ್ಟು ಡಾ.ಬಿ.ಆರ್ ಅಂಬೇಡ್ಕರವರು ರಚಿಸಿದ ನ್ಯಾಯ, ನೀತಿ ಮೂಲಹಕ್ಕುಗಳು, ಕರ್ತವ್ಯಗಳು ನಾಗರೀಕ ಜೀವನಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡ 76ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶ ಸ್ವಾತಂತ್ರ್ಯ ನಂತರ ಯಾವ ವಿಧದಲ್ಲಿ ದೇಶ ಸಾಗ ಬೇಕು ಎಂಬ ಪರಿಕಲ್ಪನೆಯಿಂದ ಡಾ.ಬಿ.ಆರ್ ಅಂಬೇಡ್ಕರವರು ಸಂವಿಧಾನ ರಚನೆ ಮಾಡಿ ಸರ್ವರಿಗೂ ಸಮಾನ ಅವಕಾಶ ನೀಡಿದ್ದಾರೆ.

ಇಂದು ಭಾರತ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರೆದಿದೆ. ಭಾರತ ವಿಶ್ವದ ಲ್ಲಿಯೇ ತನ್ನದೆಯಾದ ವಿಶಿಷ್ಠ ಆಚಾರ ವಿಚಾರ ಸಂಸ್ಕೃತಿಗಳಿಂದ ಬೇರೆ ಬೇರೆಯಾದರೂ ನಾವೆ ಲ್ಲರೂ ಒಂದೇ ಎಂಬ ಭಾವ ಭಾರತಿಯರಲ್ಲಿದೆ. ದೇಶ ಕಟ್ಟುವಲ್ಲಿ ಕನ್ನಡಿಗರ ಕೊಡುಗೆ ಅನೂನ್ಯ ವಿಜಯಪೂರ -ಬಾಗಲಕೋಟ ಅವಳಿ ಜಿಲ್ಲೆಗಳು ತ್ಯಾಗದ ಪ್ರತೀಕ ಈ ಭಾಗದ ಕೃಷ್ಣಾ ಯೋಜನೆ ಗಾಗಿ ರೈತಾಪಿ ವರ್ಗ ಹಾಗೂ ಹೃದಯವಂತ ಜನರು ತಮ್ಮ ಭೂಮಿ ಮನೆ, ಮಠಗಳನ್ನು ಕಳೆದು ಕೊಂಡು ಬೇರೆಯವರಿಗೆ ನೀರಾವರಿ ಯೋಜನೆಗೆ ಸಹಾಯ ಮಾಡಿದ್ದಾರೆ. ಈ ಭಾಗ ನೀರಾವರಿ ಯಿಂದ ಇನ್ನು ಸಾಕಷ್ಟು ಬೆಳವಣಿಗೆಯಾಗಬೇಕು ಹೋರ್ತಿ ಭಾಗದ ಶ್ರೀರೇವಣಸಿದ್ದೇಶ್ವರ ಯಾತ ನೀರಾವರಿ ಯೋಜನೆಯಿಂದ ರೈತರ ಬಾಳು ಹಸನಾಗಲಿದೆ ಎಂದರು.

ಎಸಿ ಅಬೀದ ಗದ್ಯಾಳ ಮಾತನಾಡಿ ಭಾರತ ವೈವಿಧ್ಯಮಯ ದೇಶ ಉತ್ತರಕ್ಕೆ ಹಿಮಾಲಯ, ವಿಶಾಲ ಮೈದಾನ, ಪ್ರಸ್ಥಭೂಮಿ, ತೇವಾಂಶ ಸಮಶಿತೋಷ್ಣ ಪ್ರದೇಶ ಜೀವಸಂಕುಲ, 45 ಸಾವಿರ ವಿವಿಧ ಗಿಡಮರಗಳು, 121 ಭಾಷೆ, ಧರ್ಮಗಳು ಹಲವಾರು ಅನೇಕ ಪ್ರಬೇಧಗಳನ್ನು ಹೊಂದಿದ್ದು ಇಂತಹ ಬಹು ವಿವಿಧ್ಯಮಯ ದೇಶಕ್ಕೆ ವಿಶ್ವವೇ ಮೆಚ್ಚವುಂತಹ ಸಂವಿಧಾನ ಬರೆದ ಡಾ.ಬಿ.ಆರ್ ಅಂಬೇಡ್ಕರ ವರಿಗೆ ಭಾರತೀಯರಾದ ನಾವುಗಳು ಸದಾ ಸ್ಮರಣಿಯವಾಗಿರಬೇಕು ಎಂದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಸಿ ಅಬೀದ ಗದ್ಯಾಳ, ತಹಶೀಲ್ದಾರ ಬಿ.ಎಸ್ ಕಡಕಭಾವಿ, ಶಿಕ್ಷಣಾಧಿಕಾರಿ ಆಲಗೂರ, ಡಿವೈಎಸ್.ಪಿ ಜಗದೀಶ,ತಾ.ಪಂ ಅಧಿಕಾರಿ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ವೇದಿಕೆಯಲ್ಲಿದ್ದರು.

ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕಾಧಿಕಾರಿ ಎಚ್.ಎಸ್ ಪಾಟೀಲ, ಹೆಸ್ಕಾಂ ಅಧಿಕಾರಿ ಮೇಡೆದಾರ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ,ತಾಲೂಕಾ ಕ್ರೀಡಾಧಿಕಾರಿ ಚಂದ್ರಶೇಖರ ವಾಲೀಕಾರ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಭೀಮಣ್ಣಾ ಕೌಲಗಿ, ಜಾವೀದ ಮೋಮಿನ್, ಹರೀಶ್ಚಂದ್ರ ರಾಠೋಡ, ಮಹೇಶ ಹೊನ್ನಬಿಂದಗಿ ಸೇರಿದಂತೆ ಅನೇಕ ಗಣ್ಯರು ತಾಲೂಕಾಧಿಕಾರಿಗಳು ವಿವಿಧ ಶಾಲಾ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಇದ್ದರು. ಬಸವರಾಜ ಗೊರನಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.