ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dog and Human Realtionship: ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧಕ್ಕೆ ಇದೆ 12,000 ವರ್ಷಗಳ ಇತಿಹಾಸ; ಸಂಶೋಧನೆ ಹೇಳಿದ್ದೇನು?

ವಿಜ್ಞಾನದ ಪ್ರಕಾರ, ಮಾನವರು ಮತ್ತು ನಾಯಿಗಳ(Dog and Human Realtionship) ನಡುವಿನ ಸಂಬಂಧವು 12,000 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಹೇಳಿದೆ. ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕ ಫ್ರಾಂಕೋಯಿಸ್ ಲಾನೋ ನೇತೃತ್ವದ ಇತ್ತೀಚಿನ ಅಧ್ಯಯನದಲ್ಲಿ, ವಿಜ್ಞಾನಿಗಳು ಅಮೆರಿಕದ ಸ್ಥಳೀಯ ಜನರು ಮತ್ತು ಅವರ ನಾಯಿ ನಡುವಿನ ಸಂಬಂಧ ಅಷ್ಟೊಂದು ಆತ್ಮೀಯವಾಗಿದ್ದವು ಎಂಬುದಕ್ಕೆ ಪುರಾವೆಗಳನ್ನು ಕಂಡುಕೊಂಡಿದ್ದಾರೆ.

Profile Vishwavani News Dec 9, 2024 12:51 PM
ಮನುಷ್ಯರು ಮತ್ತು ನಾಯಿಗಳ (Dog and Human Realtionship) ನಡುವಿನ ಸಂಬಂಧ ತುಂಬಾ ಅನ್ಯೋನ್ಯತೆಯಿಂದ ಕೂಡಿದೆ. ಈ ಅನುಬಂಧಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಹಾಗಾಗಿ ಎಷ್ಟೋ ಜನರು ತಮ್ಮ ಮನೆಯಲ್ಲಿ ನಾಯಿಗಳನ್ನು ತಮ್ಮವರಂತೆ ಸಾಕಿ ಸಲಹುತ್ತಾರೆ. ಮನುಷ್ಯ ಮತ್ತು  ನಾಯಿಯೊಂದಿಗಿನ ಸಂಬಂಧ ತುಂಬಾ ಆಳವಾಗಿದೆ ಎಂಬುದನ್ನು ವಿಜ್ಞಾನವೂ ಒಪ್ಪುತ್ತದೆ. ಸಂಶೋಧನೆಯು ಮಾನವ ಮತ್ತು ನಾಯಿಗಳ ನಡುವಿನ ಸಂಬಂಧವು 12,000 ವರ್ಷಗಳಷ್ಟು ಹಳೆಯದಾಗಿರಬಹುದು ಎಂದು ಹೇಳಿದೆ. ಅರಿಜೋನಾ ವಿಶ್ವವಿದ್ಯಾಲಯದ ಸಂಶೋಧಕ ಫ್ರಾಂಕೋಯಿಸ್ ಲಾನೋ ನೇತೃತ್ವದ ಇತ್ತೀಚಿನ ಅಧ್ಯಯನದಲ್ಲಿ ವಿಜ್ಞಾನಿಗಳು ಅಮೆರಿಕದ ಸ್ಥಳೀಯ ಜನರು ಮತ್ತು ಅವರ ನಾಯಿ ನಡುವಿನ ಸಂಬಂಧ ಅಷ್ಟೊಂದು ಆತ್ಮೀಯವಾಗಿದ್ದವು ಎಂಬುದಕ್ಕೆ ಪುರಾವೆಗಳನ್ನು ಕಂಡುಕೊಂಡಿದ್ದಾರೆ.
ಸೈನ್ಸ್ ಅಡ್ವಾನ್ಸಸ್‌ನಲ್ಲಿ ಪ್ರಕಟವಾದ ಈ ಅದ್ಭುತ ಸಂಶೋಧನೆ, ನಾಯಿಗಳ ಜತೆ ಮನುಷ್ಯರು 12,000 ವರ್ಷಗಳ ಹಿಂದೆಯೇ ನಿಕಟ ಸಂಬಂಧವನ್ನು ಹೊಂದಿದ್ದರು ಎಂಬುದನ್ನು ಬಹಿರಂಗಪಡಿಸುತ್ತದೆ. ಅರಿಜೋನಾ ವಿಶ್ವವಿದ್ಯಾಲಯದ ಸಹಾಯಕ ಸಂಶೋಧನಾ ಪ್ರಾಧ್ಯಾಪಕರಾಗಿರುವ ಲಾನೋ, ಅಮೆರಿಕದಲ್ಲಿ ತಿಳಿದಿದ್ದಕ್ಕಿಂತ ನಾಯಿಗಳು ಮತ್ತು ಜನರ ನಡುವೆ ಮೊದಲೇ ನಿಕಟ ಸಂಬಂಧವಿತ್ತು ಎಂಬುದಕ್ಕೆ ಈಗ ಪುರಾವೆಗಳಿವೆ" ಎಂದು ಹೇಳಿದ್ದಾರೆ.
ಅವರ ಸಂಶೋಧನೆಯು 2018ರಲ್ಲಿ ಶುರುವಾಗಿತ್ತು. ಲಾನೋ ಮತ್ತು ಅವರ ತಂಡವು ಫೇರ್ಬ್ಯಾಂಕ್ಸ್‍ನ ಆಗ್ನೇಯಕ್ಕೆ 70 ಮೈಲಿ ದೂರದಲ್ಲಿರುವ ಅಲಾಸ್ಕಾದ ಪುರಾತತ್ವ ತಾಣವಾದ ಸ್ವಾನ್ ಪಾಯಿಂಟ್‍ನಲ್ಲಿ ಅಗೆಯುತ್ತಿದ್ದಾಗ ಅಲ್ಲಿ, ಅವರು ಪ್ರಾಚೀನ ವಯಸ್ಕ ನಾಯಿಗೆ ಸೇರಿದ ಟಿಬಿಯಾವನ್ನು (ಕೆಳಗಾಲಿನ ಮೂಳೆಯನ್ನು) ಪತ್ತೆಹಚ್ಚಿದ್ದಾರೆ. ಮತ್ತು ಈ  ಮೂಳೆ ಸುಮಾರು 12,000 ವರ್ಷಗಳ ಹಿಂದಿನದು ಎಂದು ತಿಳಿಯಲಾಗಿದೆ. ಜೂನ್ 2023ಕ್ಕೆ ಈ ಸಂಶೋಧನೆ ಮುಂದುವರಿಯುತ್ತಿರುವಾಗ, ಅದೇ ತಂಡವು ಡೆಲ್ಟಾ ಜಂಕ್ಷನ್ ಬಳಿಯ ಸ್ಥಳವಾದ ಹೊಲ್ಲೆಂಬೆಕ್ ಹಿಲ್‍ನಲ್ಲಿ ದೊರೆತ 8,100 ವರ್ಷ ಹಳೆಯ ನಾಯಿಯ ದವಡೆ ಮೂಳೆಯ ಮೇಲೆ ಮತ್ತೊಂದು ಸಂಶೋಧನೆ ನಡೆಸಿದೆ. ಈ ಎರಡೂ ಆವಿಷ್ಕಾರಗಳು ಅದು ಸಾಕು ಪ್ರಾಣಿಯ ಮೂಳೆ ಎಂಬುದನ್ನು ಸೂಚಿಸಿದೆ. ಹಾಗಾಗಿ ಇದು ಮಾನವರು ಮತ್ತು ಈ ಪ್ರಾಣಿಗಳ ನಡುವಿನ ಆಳವಾದ ಸಂಬಂಧವನ್ನು ಸೂಚಿಸುತ್ತದೆ.
ಇದನ್ನೂ ಓದಿ: ಚಳಿಯಿಂದ ನಡುಗುತ್ತಿದ್ದ ಬೆಕ್ಕಿನ ಮರಿಗೆ ಚೀನಾದ ಹುಡುಗಿ ಮಾಡಿದ್ದೇನು? ವಿಡಿಯೊ ನೋಡಿ
ಮೂಳೆಗಳನ್ನು ಹತ್ತಿರದಿಂದ ನೋಡಿದಾಗ ಮತ್ತೊಂದು ಆಶ್ಚರ್ಯಕರವಾದ ವಿಚಾರ ಬಯಲಾಗಿದೆ. ಅದೇನೆಂದರೆ  ರಾಸಾಯನಿಕ ವಿಶ್ಲೇಷಣೆಯಲ್ಲಿ ಈ ಪ್ರಾಣಿಗಳು ಸಾಲ್ಮನ್ ಮೀನುಗಳ  ಪ್ರೋಟೀನ್‍ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿರುವುದು ಬಹಿರಂಗಗೊಂಡಿದೆ. ಆದರೆ ಆ ಸಮಯದಲ್ಲಿ ಈ ಪ್ರದೇಶದಲ್ಲಿನ ಕಾಡು ನಾಯಿಗಳು ಮುಖ್ಯವಾಗಿ ಭೂಮಿಯ ಮೇಲೆ ಓಡಾಡುತ್ತಿರುವ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವು. ಆದರೆ ಈ ಆಹಾರ ಬದಲಾವಣೆಯನ್ನು ನೋಡಿದರೆ ಇದು ಅವುಗಳಿಗೆ ಮಾನವರಿಂದ ದೊರಕಿದೆ. ಈ ನಾಯಿಗಳು ತಮ್ಮ ಆಹಾರಕ್ಕಾಗಿ ಮನುಷ್ಯರನ್ನು ಅವಲಂಬಿಸಿದ್ದವು ಎಂದು ಸಂಶೋಧಕರು ನಂಬುತ್ತಾರೆ. ಹಾಗಾಗಿ ನಾಯಿ ಮತ್ತು ಮನುಷ್ಯರ ಸಂಬಂಧ ಈಗಿನದಲ್ಲ ಬಹಳ ಪುರಾತನ ಕಾಲದ್ದು ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಿ.